ಮಂಗಳೂರು (ನ.17):  ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಮಂಗಳೂರು-ಕಾಸರಗೋಡು ಬಸ್ ಸಂಚಾರ ಮತ್ತೆ ಆರಂಭವಾಗಿದೆ.

9 ತಿಂಗಳ ಬಳಿಕ ಉಭಯ ರಾಜ್ಯಗಳ ಮಧ್ಯೆ ಬಸ್ ಸಂಚಾರ ಶುರುವಾಗಿದೆ. ಕೊರೋನಾ ಮಹಾಮಾರಿ ಭೀತಿ ಆರಮಭವಾದಾಗಿನಿಂದ ಇಲ್ಲಿನ ಸಂಚಾರ ಸ್ಥಗಿತ ಮಾಡಲಾಗಿತ್ತು. 

ಮಂಗಳೂರು ಕೇಂದ್ರ ನಿಲ್ದಾಣದಿಂದ ಒಟ್ಟು 24 ಕರ್ನಾಟಕ ರಸ್ತೆ ಸಾರಿಗೆ ಬಸ್ಸುಗಳು ಕಾಸರಗೋಡಿಗೆ ಸಂಚಾರ ಮಾಡಲಿವೆ. 

'ಸಿಎಂ ಅಂಕಲ್ ಅಪ್ಪನಿಗೆ ಸಂಬಳ ಕೊಡಿ ಪ್ಲೀಸ್, ಮನೆಯಲ್ಲಿ ಹಬ್ಬವಿಲ್ಲ' ...

ಈ ಹಿಂದೆಯೇ ಕರ್ನಾಟಕದಿಂದ ಓಡಾಟಕ್ಕೆ ಅನುಮತಿ ಇದ್ದರೂ ಕೇರಳ ಸರಕಾರ ಇಲ್ಲಿಂದ ಅಲ್ಲಿಗೆ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಿತ್ತು. ಇದೀಗ ಕೇರಳ ಸರಕಾರ ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆ ಮತ್ತೆ ಬಸ್‌ಗಳ ಸಂಚಾರ ಆರಂಭವಾಗಿದೆ