ಮಂಗಳೂರು(ಆ.10):  ಉಪ್ಪಿನಂಗಡಿ ಸಮೀಪದ ತುರ್ಕಳಿಕೆ ನಿವಾಸಿ ದಿ. ಅಬೂಬಕ್ಕರ್‌ ಎಂಬವರ ಪುತ್ರ ಮಹಮ್ಮದ್‌ ನಿಝಾಮುದ್ದೀನ್‌ (25) ಆ. 9ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ನಿಝಾಮುದ್ದೀನ್‌ 10 ದಿನಗಳಿಂದ ಡೆಂಘೀ ಜ್ವರದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿಝಾಮುದ್ದೀನ್‌ ವೃತ್ತಿಯಲ್ಲಿ ಪೈಂಟರ್‌ ಆಗಿದ್ದು, ಆಕರ್ಷಕ ಕ್ರಿಕೆಟ್‌ ವೀಕ್ಷಣೆ ವಿವರಣೆಗಾರನಾಗಿಯೂ ಚಿರಪರಿಚಿತರಾಗಿರುತ್ತಾರೆ. ಮೃತರು ತಾಯಿ ಮತ್ತು 3 ಮಂದಿ ಸಹೋದರರು, 3 ಮಂದಿ ಸಹೋದರಿಯರನ್ನು ಅಗಲಿದ್ದಾರೆ.

ಬೆಳಗಾವಿ: ಸಿಕ್ಕಾಕೊಂಡಿದ್ದಾರೆ 200ಕ್ಕೂ ಹೆಚ್ಚು ಜನ

ಕರಾವಳಿಯಲ್ಲಿ ಭಾರೀ ಮಲೆಯಾಗುತ್ತಿದ್ದು, ಪ್ರವಾಹ ಭೀತಿಯ ಜೊತೆಗೆ ಸಾಂಕ್ರಾಮಿಕ ರೋಗದ ಬಗ್ಗೆಯೂ ಜನ ಆತಂಕಕ್ಕೊಳಗಾಗಿದ್ದಾರೆ. ಡೆಂಘೀ, ಚಿಕೂನ್ ಗುನ್ಯಾದಂತಹ ರೋಗಗಳು ಹರಡು ತ್ತಿದ್ದು ಜನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.