Asianet Suvarna News Asianet Suvarna News

ನೀಲಗಿರಿ ತೈಲ ಕುಡಿದು ಯುವಕ ಸಾವು

ನೀಲಗಿರಿ ತೈಲವನ್ನು ಮದ್ಯವೆಂದು ಭಾವಿಸಿ ಕುಡಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ಜರುಗಿದೆ.

man dies after consuming Neelagiri Oil snr
Author
First Published Oct 6, 2022, 5:17 AM IST

ಮದ್ದೂರು(ಅ.06) :ನೀಲಗಿರಿ ತೈಲವನ್ನು ಮದ್ಯವೆಂದು ಭಾವಿಸಿ ಕುಡಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ಜರುಗಿದೆ.

ಸಿದ್ಧಾರ್ಥನಗರ ಬಡಾವಣೆಯ ನಿವಾಸಿ ಚಾಮರಾಜು ಪುತ್ರ ಯೋಗೇಶ್‌ (24) ಮೃತಪಟ್ಟವರು. ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಯೋಗೇಶ್‌, ಮಂಗಳವಾರ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ.

ಮದ್ಯದ ಅಮಲಿನಿಂದ ಮನೆಯಲ್ಲಿದ್ದ ಮದ್ಯದ ಪ್ಲಾಸ್ಟಿಕ್‌ ಬಾಟಲ್‌ನಲ್ಲಿದ್ದ ನೀಲಗಿರಿ ತೈಲವನ್ನು ಮದ್ಯವೆಂದು ಕುಡಿದು ಅಸ್ವಸ್ತಗೊಂಡಿದ್ದಾನೆ. ಕುಟುಂಬದವರು ತಕ್ಷಣ ಈತನನ್ನು ಮದ್ದೂರು ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದ್ದಾನೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೈಬರ್ ಅಪರಾಧಿಗಳ ಬೇಟೆ : 

 ತಂತ್ರಜ್ಞಾನದಲ್ಲಿ ಅಭಿವೃದ್ಧಿ ಆದಂತೆ ಕ್ರಿಮಿನಲ್‌ ಗಳು ಕೂಡ ಸ್ಮಾರ್ಟ್ ಆಗಿದ್ದು, ದೇಶದ ಮೂಲೆಯಲ್ಲೆಲ್ಲೋ ಕುಳಿತು ಇನ್ನೆಲ್ಲೋ ಇರುವವರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಇದೂ ಸೇರಿದಂತೆ ಹೀಗೆ ಅಂತರ್ಜಾಲವನ್ನು ಬಳಸಿಕೊಂಡು ಅಪರಾಧವೆಸಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಈ ಕಣ್ಣಿಗೆ ಕಾಣದೇ ಕುಳಿತಲ್ಲಿಂದಲೇ ತಣ್ಣಗೆ ಅಪರಾಧವೆಸಗುವ ಈ ಸ್ಮಾರ್ಟ್ ಸೈಬರ್ ಅಪರಾಧಿಗಳ ಹೆಡೆ ಮುರಿ ಕಟ್ಟಲು ಅಪರಾಧ ತನಿಖಾ ದಳ ಸಿಬಿಐ ದೇಶದ 105 ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. 

ಸೈಬರ್ ಅಪರಾಧಿಗಳ ವಿರುದ್ಧ ಅಪರೇಷನ್ ಚಕ್ರ (Operation Chakra) ಹೆಸರಿನಡಿ ಸಿಬಿಐ ಈ ಕಾರ್ಯಾಚರಣೆ ಕೈಗೊಂಡಿದೆ. ಇದರಂತೆ ಒಟ್ಟು 300 ಅಪರಾಧಿಗಳಿಗಾಗಿ 105 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದ್ದು, ಇದರಲ್ಲಿ ಸುಮಾರು 87 ಪ್ರದೇಶಗಳಲ್ಲಿ ಸಿಬಿಐ ಶೋಧ ನಡೆಸಿದ್ದರೆ, ಇನ್ನುಳಿದ ಪ್ರದೇಶಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

Operation Megha Chakra: 20 ರಾಜ್ಯಗಳ 56 ಸ್ಥಳಗಳ ಚೈಲ್ಡ್ ಪೋರ್ನೊಗ್ರಫಿ ದಂಧೆಯ ಮೇಲೆ ಸಿಬಿಐ ದಾಳಿ!

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರ ನೆರವಿನೊಂದಿಗೆ ಈ ದಾಳಿ ನಡೆದಿದೆ. 300 ಖದೀಮರು ಸಿಬಿಐ ಸ್ಕ್ಯಾನರ್ ಅಡಿಯಲ್ಲಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಂಡ್‌ ಮಾನ್ ನಿಕೋಬಾರ್ ದ್ವೀಪದ ಐದು ಪ್ರದೇಶಗಳಲ್ಲೂ ಈ ದಾಳಿ ನಡೆದಿದೆ. ಅಲ್ಲದೇ ದೆಹಲಿಯಲ್ಲಿ ಐದು ಕಡೆ, ಚಂಡಿಘರ್‌ನಲ್ಲಿ(Chandigarh) ಮೂರು ಕಡೆ ಹಾಗೂ ಪಂಜಾಬ್(Punjab), ಕರ್ನಾಟಕ (Karanataka), ಅಸ್ಸಾಂನಲ್ಲಿ (Assam) ತಲಾ ಎರಡು ಕಡೆ ದಾಳಿ ನಡೆದಿದ್ದು, ಶೋಧ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

 

ಬಹುಮತ ಸಾಬೀತಿಗೆ ಮುನ್ನ ಆರ್‌ಜೆಡಿ ಸದಸ್ಯರ ಮೇಲೆ ಸಿಬಿಐ ದಾಳಿ: ರೇಡ್‌ಗೆ ಹೆದರಲ್ಲ ಎಂದ ರಾಬ್ಡಿದೇವಿ

ಇದರ ಜೊತೆ ಅಮೆರಿಕಾ ಪ್ರಜೆಗಳನ್ನು (American citizens) ಮೋಸದ ಜಾಲಕ್ಕೆ ಬೀಳಿಸುತ್ತಿದ್ದ, ಪುಣೆ ಹಾಗೂ ಅಹ್ಮದಾಬಾದ್‌ನ (Ahmedabad) ಎರಡು ಕಾಲ್‌ಸೆಂಟರ್‌ಗಳ (call centres) ಮೇಲೆಯೂ ದಾಳಿ ನಡೆದಿದೆ. ರಾಜಸ್ಥಾನದ ದಾಳಿ ನಡೆದ ಸ್ಥಳವೊಂದರಲ್ಲಿ ಸಿಬಿಐ ಅಧಿಕಾರಿಗಳಿಗೆ 1.5 ಕೋಟಿ ನಗದು ಹಾಗೂ ಒಂದೂವರೆ ಕೆಜಿ ಚಿನ್ನ ಸಿಕ್ಕಿದೆ ಎಂದು ವರದಿ ಆಗಿದೆ. ಇಂಟರ್‌ಪೋಲ್(Interpol), ಎಫ್‌ಬಿಐ (FBI), ರಾಯಲ್ ಕೆನಡಿಯನ್ ಮೌಂಟೇನ್ ಪೊಲೀಸ್ (Royal Canadian Mountain Police) ಮತ್ತು ಆಸ್ಟ್ರೇಲಿಯನ್ ಫೆಡರಲ್ ಪೊಲೀಸರ ಬಳಿಯಿಂದ ಸಿಕ್ಕಿದ ಸೈಬರ್ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios