Asianet Suvarna News Asianet Suvarna News

ದಾವಣಗೆರೆ: ಮೆಟ್ಟಿಲಿನಿಂದ ಬಿದ್ದು ವ್ಯಕ್ತಿ ಸಾವು

ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಕೆಳಗೆ ಬಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ದಾವಣಗೆರೆಯ ಮಲೆಬೆನ್ನೂರಿನಲ್ಲಿ ನಡೆದಿದೆ. ಮೇಲಿನ ಮಹಡಿಯಲ್ಲಿರುವ ಅಡುಗೆ ಮನೆಗೆ ಹೋಗಿ ಊಟ ಮಾಡಿ ಬರುವಾಗ ಮೆಟ್ಟಿಲಿನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

Man die by slipping down in steps
Author
Bangalore, First Published Aug 1, 2019, 12:40 PM IST
  • Facebook
  • Twitter
  • Whatsapp

ದಾವಣಗೆರೆ(ಆ.01): ಮಲೆಬೆನ್ನೂರು ಪಟ್ಟಣದ ಆಜಾದ್‌ ನಗರದಲ್ಲಿ ಸೋಮವಾರ ರಾತ್ರಿ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಕೆಳಗೆ ಬಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

ಮೂಲತಃ ಕೊಮಾರನಹಳ್ಳಿಯವರಾದ ನಿಂಗಪ್ಪ ಬಾರಿಕರ್‌ (50) ಮೃತಪಟ್ಟವರು. ತರಗಾರ ವೃತ್ತಿಯ ಇವರು ಕೆಲ ವರ್ಷಗಳಿಂದ ಮಲೆಬೆನ್ನೂರಿನಲ್ಲಿ ಮಗಳ ಮನೆಯಲ್ಲೇ ವಾಸವಿದ್ದರು.

ತಲೆಗೆ ಪೆಟ್ಟು:

ಮನೆಯ ಮೇಲ್ಭಾಗದಲ್ಲಿ ಅಡುಗೆ ಮನೆ ಇದ್ದು, ಮನೆಯ ಒಳಗಿನಿಂದಲೇ ಮೇಲೆ ಹತ್ತಿ ಇಳಿಯಲು ಮೆಟ್ಟಿಲುಗಳ ವ್ಯವಸ್ಥೆ ಇದೆ. ಎಂದಿನಂತೆ ರಾತ್ರಿ 9ಗಂಟೆಗೆ ಮೇಲಿನ ಅಡುಗೆ ಮನೆಯಲ್ಲಿ ಊಟ ಮಾಡಿ, ಕೆಳಗೆ ಇಳಿಯುವಾಗ ಮೆಟ್ಟಿಲು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.

ಲಾರಿಗೆ ಬಸ್‌ ಡಿಕ್ಕಿ​: ಚಾಲಕ ಸಾವು, 10 ಮಂದಿಗೆ ಗಾಯ

ಮಲೆಬೆನ್ನೂರಿನ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯ ಸಿಜಿ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios