ಉಡುಪಿ(ನ.25): ಟೂತ್‌ಪೇಸ್ಟ್‌ ಬಳಸುವಾಗ ಆದ ಸಣ್ಣ ತಪ್ಪಿನಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಪೇಸ್ಟ್ ಎಂದು ವ್ಯಕ್ತಿ ತಮ್ಮ ಬ್ರಶ್‌ಗೆ ಹಾಕಿಕೊಂಡ ವಸ್ತು ಅವರ ಪ್ರಾಣವನ್ನೇ ತೆಗೆದಿದೆ.

ಮಲ್ಪೆ: ಇಲ್ಲಿನ ಕೊಡವೂಕರು ಗ್ರಾಮದ ಮಲ್ಪೆಕೊಳ ನಿವಾಸಿ ಲೀಲಾ ಕರ್ಕೇರ (57) ಎಂಬುವರು ಅರಿವಿಲ್ಲದೆ ಇಲಿ ಪಾಶಾಣ ಸೇವಿಸಿ ಮೃತಪಟ್ಟಘಟನೆ ನಡೆದಿದೆ. ಅವರು ನ.19ರಂದು ಬೆಳಗ್ಗೆ ಟೂತ್‌ ಪೇಸ್ಟ್‌ ಬದಲಾಗಿ, ಅದರಂತೆ ಇದ್ದ ಇಲಿ ಪಾಶಾಣದ ಟ್ಯೂಬ್‌ನಿಂದ ಪೇಸ್ವ್‌ ತೆಗೆದು ಹಲ್ಲುಜ್ಜಿದ್ದಾರೆ.

ಗುದ​ದ್ವಾ​ರ ​ಹೊ​ಕ್ಕಿದ್ದ ಪೊರಕೆ ಪ್ಲಾಸ್ಟಿಕ್‌ ಹಿಡಿ ಹೊರ ತೆಗೆದ ವೈದ್ಯ​ರು!

ಪರಿಣಾಮ ಅಸ್ವಸ್ಥಗೊಂಡ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟರು. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: 1 ದಿನದಲ್ಲಿ 750ಕ್ಕೂ ಅಧಿಕ ಆಧಾರ್‌ ತಿದ್ದುಪಡಿ..!