ಉತ್ತರ ಕನ್ನಡ(ಆ.15): ಹಲವು ರೀತಿ ಸ್ವಾಂತ್ರ್ಯೋತ್ಸವ ಆಚರಿಸುವವರನ್ನು ಕಂಡಿರುತ್ತೇವೆ. ಆದರೆ ಇಲ್ಲೊಬ್ಬರು ತಮ್ಮ ಊರಲ್ಲಿ ಹಾಲ್ಟ್‌ ಆಗುವ ಬಸ್‌ ಸ್ವಚ್ಛಗೊಳಿಸಿ, ಧ್ವಜವಿಟ್ಟು ಸಿಂಗಾರ ಮಾಡಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಗಣಪತಿ ಎಂಬರು 40 ವರ್ಷಗಳಿಂದಲೂ ತಮ್ಮೂರಲ್ಲಿ ನಿಲ್ಲುವ ಬಸ್‌ಗೆ ಧ್ವಜವಿಟ್ಟು ಅಲಂಕರಿಸಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದಾರೆ.

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ- ಪಾಕಿಸ್ತಾನ ಕ್ರಿಕೆಟಿಗರಿಂದ ಶುಭಾಶಯ

ರಾತ್ರಿ ತಮ್ಮೂರಿನಲ್ಲಿ ಹಾಲ್ಟಿಂಗ್ ಮಾಡುವ ಬಸ್ ಸಿಂಗರಿಸಿ ರಾಷ್ಟ್ರ ಧ್ವಜ ಹಾಕಿ 40 ವರ್ಷಗಳಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಗಣಪತಿ ಗೌಡ ಪ್ರತಿಬಾರಿಯೂ ಇದೇ ರೀತಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದು ವಿಶೇಷ.