ತಿಪಟೂರು (ಸೆ.09):  ಕುಡಿದ ಮತ್ತಿನಲ್ಲಿ ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ ಪೈಪ್‌ ಅನ್ನು ಕತ್ತರಿಸಿ ಒಲೆ ಹಚ್ಚುವಾಗ ಬೆಂಕಿ ಹೊತ್ತಿಕೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಹೊನ್ನವಳ್ಳಿ ಹೋಬಳಿ ಆದಿನಾಯಕನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ಧ್ರುವರಾಜ್‌(32) ಮೃತ ವ್ಯಕ್ತಿ. ತೋಟದ ಮನೆಯಲ್ಲಿ ವಾಸವಿದ್ದ ಧ್ರುವರಾಜ್‌ ಕುಡಿದ ಮತ್ತಿನಲ್ಲಿ ಮನೆಗೆ ಆಗಮಿಸಿ ಗ್ಯಾಸ್‌ ಸಿಲಿಂಡರ್‌ನ ಪೈಪ್‌ ಅನ್ನು ಚಾಕುವಿನಿಂದ ಕತ್ತರಿಸಿದ್ದಾರೆ. 

ಕೇರಳ: ವೈದ್ಯಕೀಯ ಸಿಬ್ಬಂದಿಯಿಂದ ನರ್ಸ್‌ ಮೇಲೆ ಅತ್ಯಾಚಾರ ...

ಬಳಿಕ ಸ್ಟೌಹಚ್ಚಿದ್ದಾರೆ. ಮನೆಯಲ್ಲೆಲ್ಲಾ ಗ್ಯಾಸ್‌ ತುಂಬಿಕೊಂಡಿದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ. ಧ್ರುವರಾಜ್‌ ದೇಹ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಅಲ್ಲದೇ ಇಡೀ ಮನೆಯೇ ಸುಟ್ಟು ಹೋಗಿದೆ. ಅದೃಷ್ಟವಶಾತ್‌ ಘಟನೆ ವೇಳೆ ಯಾರು ಮನೆಯಲ್ಲಿ ಇರದ ಕಾರಣ ಭಾರೀ ಅಪಘಾತ ತಪ್ಪಿದೆ.

ಹೊನ್ನವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.