ತಿರುವನಂತಪುರಂ (ಸೆ.8): ಕೋವಿಡ್‌ ಸೋಂಕಿತೆ ಮೇಲೆ ಆ್ಯಂಬುಲೆನ್ಸ್‌ ಚಾಲಕನೋರ್ವ ಅತ್ಯಾಚಾರ ಎಸಗಿದ ಘಟನೆ ಬೆನ್ನಲ್ಲೇ, ಕೇರಳದಲ್ಲಿ ಮತ್ತೊಂದು ರೇಪ್‌ ಪ್ರಕರಣ ವರದಿಯಾಗಿದೆ.

ಸಂತ್ರಸ್ತೆ ಮಲಪ್ಪುರಂನಲ್ಲಿ ಹೋಮ್‌ನರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ರಜೆ ಮೇಲೆ ಮನೆಗೆ ಮರಳಿದ್ದರು. ಈ ವೇಳೆ ಅವರಿಗೆ ಕೊರೋನಾ ಟೆಸ್ಟ್‌ ಮಾಡಿಸಿ, ಹೋಂ ಕ್ವಾರಂಟೈನ್‌ಗೆ ಒಳಗಾಗುವಂತೆ ಆರೋಗ್ಯ ಅಧಿಕಾರಿ ಸೂಚಿಸಿದ್ದರು. ಈ ಪ್ರಕಾರ ಆ್ಯಂಟಿಜೆನ್‌ ಟೆಸ್ಟ್‌ಗೆ ಒಳಗಾಗಿದ್ದರು. ವರದಿಯಲ್ಲಿ ನೆಗೆಟಿವ್‌ ರಿಪೋರ್ಟ್‌ ಬಂದಿತ್ತು. ವರದಿಯ ದಾಖಲೆಯನ್ನು ತೆಗೆದುಕೊಂಡು ಹೋಗಲು ಬಾರಂತೂರಿನ ಫ್ಲಾಟ್‌ಗೆ ದಾದಿಯನ್ನು ಆಹ್ವಾನಿಸಿ ಆರೋಗ್ಯಾಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಸೆ.3ಕ್ಕೆ ಫ್ಲ್ಯಾಟ್‌ಗೆ ಹೋಗಿದ್ದ ನನ್ನನ್ನು ಕಟ್ಟಿಹಾಕಿ ಲೈಂಗಿಕವಾಗಿ ಆಕ್ರಮಣ ಮಾಡಿ, ಮರುದಿನ ಬಿಟ್ಟು ಕಳುಹಿಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದು, ಆರೋಗ್ಯಾಧಿಕಾರಿ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಅಜ್ಜಂದಿರನ್ನು ಮದುವೆಯಾಗುವುದೇ ಇವರಿಗೆ ಕಾಯಕ

ಸೋಂಕಿತೆ ಮೇಲೆ ಆಗಿತ್ತು ಅತ್ಯಾಚಾರ
ಪಟ್ಟಣಂತಿಟ್ಟ: ಕೋವಿಡ್‌-19 ಸೋಂಕು ಪೀಡಿತ 19 ವರ್ಷದ ಯುವತಿ ಮೇಲೆ ಆ್ಯಂಬುಲೆನ್ಸ್‌ ಚಾಲಕನೋರ್ವ ಅತ್ಯಾಚಾರ ಮಾಡಿದ ಹೇಯ ಘಟನೆ ಕೇರಳದ ಪಟ್ಟಣಂತಿಟ್ಟ ತಾಲೂಕಿನ ಆರಾನ್‌ಮುಲದಲ್ಲಿ ವರದಿಯಾಗಿತ್ತು. 

ಸೋಂಕಿತ ಯುವತಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಚಾಲಕ ನೌಫಲ್‌ (29) ಎಂಬಾತ ನಿರ್ಜನ ಪ್ರದೇಶದಲ್ಲಿ ಆ್ಯಂಬುಲೆನ್ಸ್‌ ನಿಲ್ಲಿಸಿ ಯುವತಿ ಮೇಲೆ ಆತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನನ್ವಯ ಭಾನುವಾರ ಆತನನ್ನು ಬಂಧಿಸಲಾಗಿದ್ದು, ಕೆಲಸದಿಂದ ಕಿತ್ತು ಹಾಕಲಾಗಿದೆ. ತನ್ನ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಸಂತ್ರಸ್ತೆ ವೈದ್ಯರೊಂದಿಗೆ ಹೇಳಿಕೊಂಡಿದ್ದು, ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಹಿಳೆ ಆದೂರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾಯಕುಳಂ ನಿವಾಸಿಯಾಗಿರುವ ಆರೋಪಿ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ.

ಬ್ಯುಟಿಷಿಯನ್ ಮೇಲೆ ಗೆಳೆಯರಿಂದಲೇ ಅತ್ಯಾಚಾರ

ಘಟನೆ ಆಡಳಿತ ಹಾಗೂ ವಿಪಕ್ಷ ನಾಯಕರ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿದೆ. ಆರೋಪಿಯ ಮೇಲೆ ಕಾಠಿಣ ಕ್ರಮ ಜರುಗಿಸುವ ಭರವಸೆ ನೀಡಿರುವ ರಾಜ್ಯ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ಮಹಿಳಾ ರೋಗಿಗಳಿಗೆ ವಿಶೇಷ ಭದ್ರತಾ ವ್ಯವಸ್ಥೆ ಬೇಕಾಗಿದೆ. ಅಲ್ಲದೇ ಆರೋಪಿಯ ಚಾಲನಾ ಪರವಾನಗಿ ರದ್ದು ಮಾಡಬೇಕು. ಆ್ಯಂಬುಲೆನ್ಸ್‌ ಚಾಲಕರನ್ನು ನೇಮಕ ಮಾಡುವ ಮ್ನುನ ಅವರ ಹಿನ್ನೆಲೆ ಪರೀಕ್ಷೆ ಮಾಡಬೇಕು ಎಂದು ಅವರು ಹೇಳಿದ್ದಾರೆ.