Asianet Suvarna News Asianet Suvarna News

ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವಕನೋರ್ವನನ್ನು ಈದುಲ್‌ ಫಿತ್‌್ರ ಹಬ್ಬದ ಸಂಭ್ರಮದಲ್ಲಿದ್ದ ಯುವಕರ ತಂಡವೊಂದು ರಕ್ಷಿಸಲು ನದಿಗೆ ಹಾರಿ ಮಾನವೀಯತೆ ಮೆರೆದ ಘಟನೆ ಭಾನುವಾರ ಪಾಣೆಮಂಗಳೂರಿನಲ್ಲಿ ನಡೆದಿದೆ.

Man commits suicide jumping to netravathi river in mangalore
Author
Bangalore, First Published May 25, 2020, 7:32 AM IST

ಬಂಟ್ವಾಳ(ಮೇ 25): ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವಕನೋರ್ವನನ್ನು ಈದುಲ್‌ ಫಿತ್‌್ರ ಹಬ್ಬದ ಸಂಭ್ರಮದಲ್ಲಿದ್ದ ಯುವಕರ ತಂಡವೊಂದು ರಕ್ಷಿಸಲು ನದಿಗೆ ಹಾರಿ ಮಾನವೀಯತೆ ಮೆರೆದ ಘಟನೆ ಭಾನುವಾರ ಪಾಣೆಮಂಗಳೂರಿನಲ್ಲಿ ನಡೆದಿದೆ.

ಮಾನಸಿಕವಾಗಿ ನೊಂದಿದ್ದ ಕಲ್ಲಡ್ಕ ಕೊಳಕೀರು ನಿವಾಸಿ ನಿಶಾಂತ್‌ ಭಾನುವಾರ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಈದುಲ್‌ ಫಿತ್‌್ರ ಹಬ್ಬದ ಸಂಭ್ರಮದಲ್ಲಿದ್ದ ಸ್ಥಳೀಯ ಯುವಕರ ತಂಡ ಜಮಾಯಿಸಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಮದುವೆ ಮುಂದೂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಈ ಪೈಕಿ ಈಜುಪಟುಗಳಾದ ಗೂಡಿನಬಳಿಯ ಶಮೀರ್‌ ಮುಹಮ್ಮದ್‌ ಮೊಮ್ಮು, ತೌಸೀಫ್‌ ಝಾಹಿದ್‌ ಜಾಯಿ, ಅಕ್ಕರಂಗಡಿಯ ಮುಕ್ತಾರ್‌ ಹಾಗೂ ಆರಿಫ್‌ ಹೈವೇ ಎಂಬವರು ಕ್ಷಣಮಾತ್ರದಲ್ಲಿ ನದಿಗೆ ಹಾರಿ ನದಿಯಲ್ಲಿ ಮುಳುಗಿದ್ದ ನಿಶಾಂತ್‌ನನ್ನು ಮೇಲಕ್ಕೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ನಿಶಾಂತ್‌ ಮೃತ ಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಬಿಲ್ಡಿಂಗ್‌ನಿಂದ ಹಾರಿ ಟೆಕ್ಕಿ ಉತ್ತಮ್ ಹೆಗಡೆ  ಆತ್ಮಹತ್ಯೆ, ಕಾರಣ ನಿಗೂಢ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತರ ಸಹೋದರ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾಧಿಕಾರಿ ಅವಿನಾಶ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೋ ವೈರಲ್‌:

ಹಬ್ಬದ ಸಂಭ್ರಮದಲ್ಲೂ ಹಿಂದೂ ಯುವಕನ ರಕ್ಷಣೆಗಾಗಿ ನದಿಗೆ ಹಾರಿದ ಮುಸಲ್ಮಾನ ಯುವಕರ ಸಾಹಸ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

Follow Us:
Download App:
  • android
  • ios