ಹುಬ್ಬಳ್ಳಿ(ಮೇ.25): ಲಾಕ್‌ಡೌನ್‌ ಇರುವುದರಿಂದ ಈಗ ಮದುವೆ ಬೇಡ, ಮುಂದೆ ಅದ್ಧೂರಿಯಾಗಿ ಮಾಡೋಣ ಎಂದು ಮನೆಯ ಹಿರಿಯರು ನಿರ್ಧಾರದಿಂದ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

ಇಲ್ಲಿನ ದೇವಾಂಗಪೇಟೆಯ ನಿವಾಸಿ ಶರಣಪ್ಪ ಹಡಪದ(29) ಆತ್ಮಹತ್ಯೆಗೆ ಶರಣಾದವರು. ಶನಿವಾರ ಸಂಜೆಯಿಂದ ಕಾಣೆಯಾಗಿದ್ದ ಈತನ ಶವ ಭಾನುವಾರ ಬೆಳಗ್ಗೆ ಸಂತೋಷ ನಗರ ಕೆರೆಯಲ್ಲಿ ಈತನ ಶವ ಪತ್ತೆಯಾಗಿದೆ. 

ಬಿಲ್ಡಿಂಗ್‌ನಿಂದ ಹಾರಿ ಟೆಕ್ಕಿ ಉತ್ತಮ್ ಹೆಗಡೆ  ಆತ್ಮಹತ್ಯೆ, ಕಾರಣ ನಿಗೂಢ

ಮಾನಸಿಕವಾಗಿಯೂ ಕೊಂಚ ದುರ್ಬಲವಾಗಿದ್ದ ಈತ ವಿವಾಹ ಮುಂದೂಡಿದ್ದಕ್ಕೆ ನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.