ಮೈಸೂರು (ಡಿ.18): ಆರ್ಥಿಕ ಮುಗ್ಗಟ್ಟಿಗೆ ಹೆದರಿ ಆಟೋ ಡ್ರೈವರ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮೈಸೂರಿನ ಸಾತಗಳ್ಳಿ ಬಡಾವಣೆಯ ಅಂಬೇಡ್ಕರ್ ಕಾಲೋನಿಯ ಸಿರಾಜುದ್ದೀನ್(30) ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪತ್ನಿಯನ್ನ ತವರು ಮನೆಗೆ ಕಳಿಸಿ ಸಿರಾಜುದ್ದೀನ್ ನೇಣಿಗೆ ಶರಣಾಗಿದ್ದಾನೆ. ಗಂಡನಿಂದ ಬೇರಾದ ಮೂರು ಮಕ್ಕಳ ತಾಯಿ ಬೇಬಿ ಆಯಿಷಾಳನ್ನು ಸಿರಾಜುದ್ದಿನ್ ಮದುವೆ ಆಗಿದ್ದ. 

ಜಮೀನಿನ ಕೆಲಸಕ್ಕೆ ಹೋದಾಗ ನಿರಂತರ ಅತ್ಯಾಚಾರ : ಅಪ್ರಾಪ್ತೆಗೆ ಗಂಡು ಮಗು ಹುಟ್ಟಿದಾಗಲೇ ಎಲ್ಲಾ ಗೊತ್ತಾಯ್ತು

ಮೊದಲ ಗಂಡನ  ಮೂರು ಮಕ್ಕಳ ಜವಾಬ್ದಾರಿಯನ್ನೂ ಸಿರಾಜುದ್ದೀನ್ ಹೊತ್ತಿದ್ದು, ಕೊರೋನಾ ಹಿನ್ನೆಲೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ.

ಮಗುವಿನ ಬರ್ತಡೇ ಆಚರಿಸಲು ಪತ್ನಿ ಬೇಬಿ ಆಯಿಷಾಳನ್ನು ನಿನ್ನೆ ತವರು ಮನೆಗೆ ಕಳಿಸಿದ್ದ. ಇಂದು ಬೆಳಗ್ಗೆ ಬರ್ತ್‌ಡೇ ಮುಗಿಸಿ ಮನೆಗೆ ವಾಪಸ್  ಬಂದ ವೇಳೆ ಪತಿ ಸಿರಾಜುದ್ದಿನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ.

ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.