ಚಾಮರಾಜನಗರ (ಡಿ.18): ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಗಲವಾಡಿ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ 17 ವರ್ಷದ ಅಪ್ರಾಪ್ತೆಯೊಬ್ಬಳು ಗಮಡು ಮಗುವಿಗೆ ಜನ್ಮ ನೀಡಿದ್ದಾಳೆ.  ಮಂಗಳವಾರ ಸಂಜೆ ವೇಳೆ ಹೊಟ್ಟೆ ನೋವೆಂದು  ಚೀರಿಕೊಂಡಿದ್ದು  ಮನೆಯಲ್ಲೇ ಹೆರಿಗೆಯಾಗಿದೆ. 

ಈ ವೇಳೆಯೇ ಮಗಳು ಗರ್ಭಿಣಿಯಾಗಿದ್ದಳು ಎನ್ನುವ ವಿಚಾರ ತಿಳಿದು ಬಂದಿದೆ. ಉತ್ತುವಳ್ಳಿ ಗ್ರಾಮದ ಸಿದ್ಧರಾಜು (25) ಎಂಬಾತ ಜಮೀನಿನ ಕೆಲಸಕ್ಕೆ ತೆರಳಿದಾಗ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ. 

ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಸಿಕ್ಕಿಬಿದ್ದಳು ಆಟೋ ಚಾಲಕನ ಜೊತೆ : ಕುತೂಹಲದ ಲವ್ ಸ್ಟೋರಿ ...

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ಮಗಳು ಗರ್ಭಿಣಿಯಾದರು ವಿಚಾರ ತಿಳಿದುಬರದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.