ಡುಪಿ(ಏ.23): ಅಮಾಸೆಬೈಲು ಗ್ರಾಮದ ಬೊಳ್ಮನೆ ಎಂಬಲ್ಲಿ ವ್ಯವಹಾರದಲ್ಲಿ ನಷ್ಟದಿಂದ ಕೋಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಗಣೇಶ ನಾಯ್ಕ (37) ಮೃತರು.

ಅವರು ಕೋಳಿ ಪಾರಂ ನಡೆಸುತ್ತಿದ್ದು, ಲಾಕ್‌ಡೌನ್‌ ನಂತರ ಕೋಳಿಗಳ ಆಹಾರ ಸರಬರಾಜು ಆಗಿರಲಿಲ್ಲ. ಈ ಬಗ್ಗೆ ಕೋಳಿ ಪೂರೈಸಿದ ಕಂಪನಿಯವರನ್ನು ಕೇಳಿದಾಗ ಅವರು ಕೋಳಿಗಳನ್ನು ಧಪನ ಮಾಡುವಂತೆ ತಿಳಿಸಿದ್ದು, ಅದರಂತೆ ಗಣೇಶ ನಾಯ್ಕ ಅವರು ಕೋಳಿ ಸಾಕಣೆ ವೆಚ್ಚವನ್ನು ಭರಿಸಲಾಗದೆ 2 ಲಕ್ಷ ರು. ಮೌಲ್ಯದ 3000 ಕೋಳಿಗಳನ್ನು ಧಪನ ಮಾಡಿದ್ದರು.

ಕೊರೋನಾ ವಾರಿಯರ್‌ಗೆ ಜೀವ ಬೆದರಿಕೆ..!

ಆದರೆ ಈಗ ವ್ಯವಹಾರದಲ್ಲಿ ನಷ್ಟಆಗಿದ್ದರಿಂದ ಮನನೊಂದು ಮಂಗಳವಾರ ಸಂಜೆ ಬೊಳ್ಮನೆ ಕ್ರಾಸ್‌ ಬಳಿ ಸರ್ಕಾರಿ ಕಾಡಿನಲ್ಲಿ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರ ತಮ್ಮ ದಿನೇಶ್‌ ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]