ವಿಜಯಪುರ(ಸೆ.03): ನೌಕರಿ ಕೊಡಿಸೋದಾಗಿ ಹೇಳಿ ಲಕ್ಷಾಂತರ ರು. ಹಣ ಪಡೆದು ವಂಚಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಹಣ ಕೇಳಲು ಬಂದ‌ವನ ಮೇಲೆ ಹಿಗ್ಗಾ-ಮುಗ್ಗಾ ಹಲ್ಲೆ ನಡೆಸಿ ಥಳಿಸಲಾಗಿದೆ.

ಯಾದಗಿರಿ ಜಿಲ್ಲೆ ಸುರಪುರ ತಾ. ಕೆಂಬಾವಿ‌‌ ಗ್ರಾಮದ ಅಶೋಕ ದೇಸಾಯಿ (32) ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಲಾಗಿದೆ. ವಿಜಯಪುರ ಜಿ. ಸಿಂದಗಿ ತಾ. ಹಂದಿಗನೂರು ಗ್ರಾಮದ ಬಳಿ ಘಟನೆ ನಡೆದಿದ್ದು, ಬೆಲ್ಟ್, ಬಡಿಗೆಗಳಿಂದ ಗೂಂಡಾಗಳು ಹಲ್ಲೆ ನಡೆಸಿದ್ದಾರೆ.

ಹಂದಿಗನೂರು ಗ್ರಾಮದ ಭೀಮಣ್ಣ ಮಳ್ಳಿ ಬೆಂಬಲಿಗರು ಅಶೋಕ ದೇಸಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪಿಡಿಓ ನೌಕರಿ ಕೊಡಿಸಿವುದಾಗಿ ಇಬ್ಬರು ಯುವಕರಿಂದ ಒಟ್ಟು 22 ಲಕ್ಷ ರೂಪಾಯಿ‌ ಪಡೆದಿದ್ದ ಭೀಮಣ್ಣ ಎಂಬ ವ್ಯಕ್ತಿ ನಂತರ ಜನರನ್ನು ಕಳುಹಿಸಿ ಹೊಡೆಸಿದ್ದಾನೆ. ಹಣ ಕೊಡುವುದಾಗಿ ಯುವಕನನ್ನು ಹಂದಿಗನೂರಿಗೆ ಕರೆಯಿಸಿಕೊಂಡ ಭೀಮಣ್ಣ ಬೆಂಬಲಿಗರಿಂದ ಹಲ್ಲೆ ಮಾಡಿಸಿದ್ದಾನೆ.

ರಾಮನಗರ: ಮೂವರಿದ್ದ ಒಂದು ಕುಟುಂಬ ನೇಣಿಗೆ ಶರಣು

ಭೀಮಣ್ಣ ಮಳ್ಳಿ ಹಲವು ಜನರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದು,  ವಿಜಯಪುರ ಜಿ. ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಕೆಲ‌ ದಿನಗಳ ಹಿಂದೆ ಘಟನೆ ನಡೆದಿದ್ದರೂ ಹೆದರಿಕೊಂಡಿದ್ದ ಅಶೋಕ ದೂರು ದಾಖಲಿಸಿರಲಿಲ್ಲ. ಸೆ.01ರಂದು ಆಸ್ಪತ್ರೆಗೆ ದಾಖಲಾಗಿದ್ದ ಅಶೋಕ ಅಂದೇ ದೂರು ದಾಖಲಿಸಿದ್ದಾರೆ.

ಶಿವಮೊಗ್ಗ: ತಾನು ಲವ್ ಮಾಡ್ತಿದ್ದ ಹುಡ್ಗಿ ರಾಖಿ ಕಟ್ಟಲು ಬಂದಾಗ ಹುಡುಗನ ಹುಚ್ಚಾಟ