ರಾಮನಗರ: ಮೂವರಿದ್ದ ಒಂದು ಕುಟುಂಬ ನೇಣಿಗೆ ಶರಣು

ಕೌಟುಂಬಿಕ‌ ಕಲಹ ಒಂದೇ ಕುಟುಂಬದ ಮೂವರು ನೇಣು ಬಿಗಿದು ಆತ್ಮಹತ್ಯೆ| ರಾಮನಗರ ಜಿಲ್ಲೆ ಕನಕಪುರ ನಗರದ ಅಜೀಸ್ ನಗರದಲ್ಲಿ ಘಟನೆ| ಕನಕಪುರ ಟೌನ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು

Three of a family commits suicide By hanging in Ramanagara

ರಾಮನಗರ, [ಸೆ.02]: ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ನಗರದ ಅಜೀಸ್ ನಗರದಲ್ಲಿ ನಡೆದಿದೆ.
  
ಫೈರೋಜ್ ಖಾನ್(24), ಹರ್ಷಾ ಭಾನು(21) ಒಂದುವರೆ ವರ್ಷದ ಮಗು ಇಸ್ಮಾಯಿಲ್ ಮೃತರು. ಫೈರೋಜ್ ಖಾನ್ ಹಾಗೂ ಹರ್ಷಾ ಭಾನು ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ಕೆಲಸದ ವಿಚಾರವಾಗಿ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನವೂ ಸಹ ಆಗಿತ್ತು. ಆದರೆ, ಮತ್ತೆ ಇಂದು [ಸೋಮವಾರ] ಮಧ್ಯಾಹ್ನ ಇದೇ ವಿಚಾರವಾಗಿ ಜಗಳ ನಡೆದಿದೆ.

ಈ ಹಿನ್ನೆಲೆಯಲ್ಲಿ ಹರ್ಷಾ ಭಾನು, ಮನೆಯಲ್ಲಿ ಗಂಡ ಇಲ್ಲದ ವೇಳೆ ಮೊದಲಿಗೆ ಮಗುವಿಗೆ ನೇಣು ಹಾಕಿದ್ದಾಳೆ. ಬಳಿಕ ತಾನು ಸಹ ನೇಣಿಗೆ ಶರಣಾಗಿದ್ದಾಳೆ. ಫೈರೋಜ್ ಖಾನ್ ಮನೆಗೆ ಬಂದಾಗ ಇಬ್ಬರು ಸಾವನ್ನಪ್ಪಿದ್ದಾರೆ.

ಇದ್ರಿಂದ ಮನನೊಂದ ಫೈರೋಜ್ ಖಾನ್ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕನಕಪುರ ಟೌನ್ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios