ಎಎಸ್‌ಐ ಸಹಿತ ಪೊಲೀಸರ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ

ರಸ್ತೆಯಲ್ಲಿ ನಡೆಯುತ್ತಿದ್ದ ಗಲಾಟೆ ನಿಯಂತ್ರಣಕ್ಕೆ ಹೋದ ಸಂದರ್ಭ ತಾಲೂಕಿನ ಮೇಲ್ಕಾರ್‌ ಎಂಬಲ್ಲಿ ನಗರ ಠಾಣೆಯ ಎಎಸ್‌ಐ ಶೈಲೇಶ್‌ ಮತ್ತು ಮೂವರು ಪೊಲೀಸರ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

Man attacks asi and other police in Mangalore

ಬಂಟ್ವಾಳ(ಜು.11): ರಸ್ತೆಯಲ್ಲಿ ನಡೆಯುತ್ತಿದ್ದ ಗಲಾಟೆ ನಿಯಂತ್ರಣಕ್ಕೆ ಹೋದ ಸಂದರ್ಭ ತಾಲೂಕಿನ ಮೇಲ್ಕಾರ್‌ ಎಂಬಲ್ಲಿ ನಗರ ಠಾಣೆಯ ಎಎಸ್‌ಐ ಶೈಲೇಶ್‌ ಮತ್ತು ಮೂವರು ಪೊಲೀಸರ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

ಘಟನೆ ವೇಳೆ ಸಾರ್ವಜನಿಕರು ಆರೋಪಿಯನ್ನು ಹಿಡಿಯುವ ಸಂದರ್ಭ ಥಳಿಸಿದ ಹಿನ್ನೆಲೆಯಲ್ಲಿ ಆರೋಪಿ ಗೋಳ್ತಮಜಲು ನಿವಾಸಿ ಅಬ್ದುಲ್‌ ಸಲಾಂ (28) ಎಂಬಾತ ಗಾಯಗೊಂಡಿದ್ದು, ಆತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ವಿವರ:

ಬಂಟ್ವಾಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮೆಲ್ಕಾರ್‌ ಎಂಬಲ್ಲಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿದೆ ಎಂಬ ಮಾಹಿತಿ ಮೇರೆಗೆ ನಗರ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್‌ ಉಪನಿರೀಕ್ಷಕ ಶೈಲೇಶ್‌ ಟಿ. ಇಲಾಖಾ ವಾಹನದಲ್ಲಿ ಕಾನ್‌ಸ್ಟೇಬಲ್‌ ಅವರೊಂದಿಗೆ ತೆರಳಿದರು. ಈ ವೇಳೆ ಕೈಯಲ್ಲಿ ಮಾರಕಾಯುಧವಾದ ಕಬ್ಬಿಣದ ರಾಡ್‌ ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಅಬ್ದುಲ್‌ ಸಲಾಂ ಎಂಬಾತನ ಬಳಿ ತೆರಳಿ ಗಲಾಟೆ ನಿಯಂತ್ರಿಸಲು ಪ್ರಯತ್ನಿಸಿದರು.

ಹಿಡಿಯಲು ಬಂದ 8 ಜನ ಪೊಲೀಸರನ್ನೇ ಹತ್ಯೆ ಮಾಡಿದ ರೌಡಿ ವಿಕಾಸ್ ದುಬೆ! ಯಾರೀತ

ಆಗ ಆ ವ್ಯಕ್ತಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿ ಕೈಯಲ್ಲಿದ್ದ ಕಬ್ಬಿಣದ ರಾಡಿನಲ್ಲಿ ಏಕಾಏಕಿಯಾಗಿ ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದ ಇಲಾಖಾ ವಾಹನವನ್ನು ರಾಡ್‌ನಿಂದ ಹೊಡೆದು, ಕಾಲಿನಿಂದ ತುಳಿದು ಕೈಯಿಂದ ಹೊಡೆದು ಜಖಂಗೊಳಿಸಿದ್ದಾನೆ.

ಈ ಸಂದರ್ಭ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಹಲ್ಲೆ ನಡೆಯುವುದನ್ನು ತಡೆಯಲು ಬಂದಿದ್ದಾರೆ. ಆರೋಪಿ ಹಿಡಿಯುವ ಸಂದರ್ಭ, ಆತನಿಗೂ ಈತನಿಗೂ ಗಾಯ ನೋವುಗಳಾಗಿರುತ್ತದೆ. ಹಲ್ಲೆಗೊಳಗಾದ ಸಹಾಯಕ ಪೊಲೀಸ್‌ ಉಪನಿರೀಕ್ಷಕ ಶೈಲೇಶ್‌ ಟಿ ಮತ್ತು ಇತರ 3 ಪೊಲೀಸರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿಯನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Latest Videos
Follow Us:
Download App:
  • android
  • ios