ಹಿಡಿಯಲು ಬಂದ 8 ಜನ ಪೊಲೀಸರನ್ನೇ ಹತ್ಯೆ ಮಾಡಿದ ರೌಡಿ ವಿಕಾಸ್ ದುಬೆ! ಯಾರೀತ

ರೌಡಿ ಹಿಡಿಯಲು ಹೋದ ಎಂಟು ಜನ ಪೊಲೀಶರ ಹತ್ಯೆ/ ಉತ್ತರ ಪ್ರದೇಶದಲ್ಲಿ ಘಟನೆ/  ಖತರ್ ನಾಕ್  ವಿಕಾಸ್ ದುಬೆ ಮತ್ತು ಸಹಚರ ಕೃತ್ಯ

Rowdy Vikas Dubey UP Notorious Criminal Behind Killing Of 8 Cops

ಕಾನ್ಪುರ(ಜು. 02)  ನಟೋರಿಯಸ್ ಎಂಬ ಹೆಸರು ಈತನ ನೋಡಿಯೇ ಹುಟ್ಟಿಕೊಂಡಿರಬೇಕು.  ಡಿಎಸ್ ಪಿ ಸೇರಿದಂತೆ ಎಂಟು ಜನ ಪೊಲೀಸರನ್ನು ಸಾಯಿಸಿದ್ದ ಖತರ್ ನಾಕ್ ವಿಕಾಸ್ ದುಬೆ ಎಂಬಾತನ ಕತೆ ಹೇಳ್ತಿವಿ ಕೇಳಿ.

ಈತನ ಕ್ರಿಮಿನಲ್ ಕಥಾನಕ 1990 ರಿಂದಲೇ ಶುರುವಾಗುತ್ತದೆ.  ಈತನ ಮೇಲೆ  ಕೊಲೆ ಅಪರಾಧ ಸೇರಿದಂತೆ 60ಕ್ಕೂ ಅಧಿಕ ಪ್ರಕರಣಗಳಿವೆ. ರೌಡಿಗಳನ್ನು ಹಿಡಿಯಲು ಹೋದ ಪೊಲೀಸರ ಮೇಲೆಯೇ ಗುಂಡಿನ ದಾಳಿಯಾಗಿದ್ದು  ಡಿವೈಎಸ್‌ಪಿ ದೇವೇಂದ್ರ ಮಿಶ್ರಾ ಸೇರಿದಂತೆ 8 ಪೊಲೀಸ್ ಸಿಬ್ಬಂದಿ ಹತ್ಯೆಯಾಗಿದ್ದಾರೆ.

"

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ

 ದೇವೇಂದ್ರ ಕುಮಾರ್ ಮಿಶ್ರಾ, ಎಸ್‌ಒ ಮಹೇಶ್ ಯಾದವ್, ಚೌಕಿ ಉಸ್ತುವಾರಿ ಅನೂಪ್‌ ಕುಮಾರ್, ಸಬ್‌ ಇನ್ಸ್‌ಪೆಕ್ಟರ್‌ ನೆಬುಲಾಲ್ ಮತ್ತು ಕಾನ್ಸ್‌ಟೇಬಲ್‌ಗಳಾದ ಸುಲ್ತಾನ್ ಸಿಂಗ್, ರಾಹುಲ್, ಜಿತೇಂದ್ರ ಮತ್ತು ಬಬ್ಲು ತಮ್ಮ ಪ್ರಾಣ ಆಹುತಿ ನೀಡಿದ್ದಾರೆ.

ಹಲವಾರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದ  ವಿಕಾಸ್ ದುಬೆ ಹಿಡಿಯಲು ಪೊಲೀಸರು ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆದಿದೆ. ವಿಕಾಸ್ ದುಬೆ ತಪ್ಪಿಸಿಕೊಂಡಿದ್ದು ಬಲೆ ಬೀಸಲಾಗಿದೆ.

ಹಿಂದೆ ಹಲವಾರು ಸಾರಿ ದುಬೆ ಜೈಲು ವಾಸ ಅನುಭವಿಸಿದ್ದ.  ಜೈಲಿನಲ್ಲಿದ್ದಾಗಲೇ ಶಿವರಾಜ್‌ಪುರ ಪಂಚಾಯತ್ ಚುನಾವಣೆಗೆ ನಿಂತು, ಗೆದ್ದು ಬಂದಿದ್ದ!  2001ರಲ್ಲಿ ವಿಕಾಸ್ ದುಬೆ  ಉತ್ತರ ಪ್ರದೇಶದ ಬಿಜೆಪಿ ನಾಯಕ ಸಂತೋಷ್ ಶುಕ್ಲಾರನ್ನು ಹತ್ಯೆ ಮಾಡಿದ್ದ ಆರೋಪ ಹೊತ್ತಿದ್ದ. ಸಂತೋಷ್ ಶುಕ್ಲಾ ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ದುಬೆ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಬಿಡುಗಡೆಯಾಗಿದ್ದ. 

Latest Videos
Follow Us:
Download App:
  • android
  • ios