ಮಂಗಳೂರು (ಜ.31): ಗುದದ್ವಾರದಲ್ಲಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಿಸುವಾಗ ಸಿಕ್ಕಿಬಿದ್ದಿದ್ದು, ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. 

ಮತ್ತೆ ಚಿನ್ನದ ಬೆಲೆ ಇಳಿಕೆ, ಗ್ರಾಹಕರ ಮೊಗದಲ್ಲಿ ಖುಷಿಯ ಅಲೆ! .

ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 587 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 

ಉಸಿರುಗಟ್ಟಿ ಸತ್ತಳು ಪತ್ನಿ : ಪತಿಯೇ ಮಾಡಿ ಬೇರೆ ಕಥೆ ಹೇಳಿದ ..

24 ಕ್ಯಾರೆಟ್ ನ 30 ಲಕ್ಷ ಮೌಲ್ಯದ ಚಿನ್ನವನ್ನು ದುಬೈನಿಂದ ಬಂದ ವಿಮಾನದಲ್ಲಿ ವ್ಯಕ್ತಿ ತನ್ನ ಗುದದ್ವಾರದಲ್ಲಿ ಇರಿಸಿಕೊಂಡು ಬಂದಿದ್ದ. 

ಬಳಿಕ ಪರಿಶೀಲನೆ ವೇಳೆ ಕಾಸರಗೋಡು ಮೂಲದ ವ್ಯಕ್ತಿ ಸಿಕ್ಕಿಬಿದ್ದಿದ್ದು, ಈತನನ್ನು ವಶಕ್ಕೆ ಪಡೆದು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.