Asianet Suvarna News Asianet Suvarna News

ಕೊಡಗು ಪೊನ್ನಂಪೇಟೆ ದೇವಾಲಯದಲ್ಲಿ ಹಿಂದೂ ಸೋಗಿನಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿ ಅರೆಸ್ಟ್

ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಹರಿಹರದ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಂಗಳವಾರ ನಡೆದ ಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಮೂಲತಃ ಬಿಹಾರ ರಾಜ್ಯದ ವಿಳಾಸ ಹೊಂದಿರುವ ಶಂಷು ಷಾ ಹುಸೈನ್ ಎಂಬಾತ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಿಂದೂಗಳ ಸೋಗಿನಲ್ಲಿ ವ್ಯಾಪಾರಕ್ಕೆ ಮುಂದಾಗಿ ಸಿಕ್ಕಿಬಿದ್ದಿದ್ದಾನೆ.

man arrested for running stall as a Hindu in Ponnampet temple gow
Author
First Published Nov 29, 2022, 7:58 PM IST

ಕೊಡಗು (ನ.29): ಹಿಂದೂ ದೇವಾಲಯಗಳ ಆವರಣ ಹಾಗೂ ಜಾತ್ರಾ ಮಹೋತ್ಸವ ನಡೆಯುವ ಸ್ಥಳಗಳಲ್ಲಿ ಅನ್ಯಕೋಮಿನ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಹಿಂದೂಗಳ ಕೆಂಗಣ್ಣಿಗೆ ಗುರಿಯಾಗದೆ ಹಿಂದೂಗಳ ಹೆಸರಿನಲ್ಲಿಯೇ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ಮಾಡುವುದಕ್ಕೆ ನಕಲಿ ದಾಖಲೆಗಳನ್ನೇ ಸೃಷ್ಟಿಸಿರುವ ಪ್ರಕರಣ ಬಯಲಾಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹರಿಹರದ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಂಗಳವಾರ ನಡೆದ ಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಮೂಲತಃ ಬಿಹಾರ ರಾಜ್ಯದ ವಿಳಾಸ ಹೊಂದಿರುವ ಶಂಷು ಷಾ ಹುಸೈನ್ ಎಂಬಾತನೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಿಂದೂಗಳ ಸೋಗಿನಲ್ಲಿ ವ್ಯಾಪಾರಕ್ಕೆ ಮುಂದಾಗಿ ಸಿಕ್ಕಿಬಿದ್ದ ವ್ಯಕ್ತಿ. ಈ ಖತರ್ನಾಕ್ ತನ್ನದೇ ಆಧಾರ್ ಕಾರ್ಡನ್ನು ತಿದ್ದಿಸಿ ಅದರಲ್ಲಿ ರವೀಶ್ ಕುಮಾರ್ ಎಂದು ಹೆಸರು ಬದಲಾಯಿಸಿ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದ. ಈತನ ಬಳಿ ವಸ್ತುಗಳನ್ನು ಖರೀದಿಸಿ ವ್ಯಕ್ತಿಯೊಬ್ಬರು ಇವನ ಖಾತೆಗೆ ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡಲು ಸ್ಕ್ಯಾನ್ ಮಾಡಿದಾಗ ಅದರಲ್ಲಿ ಹೆಸರು ಶಂಷು ಷಾ ಹುಸೈನ್ ಎಂದು ತೋರಿಸಿದೆ. ಆಗಲೇ ಇವನು ಹಿಂದೂ ಅಲ್ಲ ಎನ್ನುವುದು ಗೊತ್ತಾಗಿರುವುದು. 

ಅದುವರೆಗೆ ಯಾವುದೇ ಅನುಮಾನ ಬಾರದಂತೆ ಹಣೆಗೆ ತಿಲಕವಿಟ್ಟೇ ವ್ಯಾಪಾರ ಮಾಡುತ್ತಿದ್ದಂತೆ. ಈತನ ಹೆಸರು ಶಂಷು ಷಾ ಹುಸೈನ್ ಎಂದು ಗೊತ್ತಾಗುತ್ತಿದ್ದಂತೆ, ಈತನ ಆಧಾರ್ ಕಾರ್ಡು ಮತ್ತಿತರೆ ದಾಖಲೆಗಳನ್ನು ಅಲ್ಲಿದ್ದ ಹಿಂದೂಪರ ಸಂಘಟನೆಗಳ ಮುಖಂಡರು ಪರಿಶೀಲನೆ ನಡೆಸಿದ್ದಾರೆ. ಆಗ ಆತ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾನೆ ಎನ್ನುವುದು ಗೊತ್ತಾಗಿದೆ. ಕೂಡಲೇ ಆತನನ್ನು ತರಾಟೆಗೆ ತೆಗೆದುಕೊಂಡ ಹಿಂದೂಪರ ಸಂಘಟನೆಗಳ ಮುಖಂಡರು ಅಂಗಡಿಯನ್ನು ತೆರವು ಮಾಡಿಸಿ ಬಳಿಕ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಅನ್ಯ ಧರ್ಮೀಯರಿಗೆ ವ್ಯಾಪಾರ: ಬಿಜೆಪಿ ಶಾಸಕನ ವಿರುದ್ಧ ಭಜರಂಗದಳ ಕಿಡಿ

ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಟೋಟದಿಂದ ಎಚ್ಚೆತ್ತ ಹಿಂದೂ ಸಂಘಟನೆಗಳು ಅನ್ಯ ಕೋಮಿನ ಯಾವುದೇ ವ್ಯಾಪಾರಿಗಳು ಹಿಂದುಗಳ ಹಬ್ಬ ಆಚರಣೆಗಳ ಸಮಯದಲ್ಲಿ ಯಾವುದೇ ರೀತಿಯಲ್ಲಿ ವ್ಯಾಪಾರ ಮಾಡದಂತ್ತೆ ಎಚ್ಚರಿಕೆ ನೀಡಿದೆ. ಅದೆ ರೀತಿ ಹರಿಹರದ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ವಾರ್ಷಿಕ ಪೂಜೆ ಹಾಗೂ ಷಷ್ಠಿ ಆಚರಣೆಯ ಕಾರ್ಯಕ್ರಮಗಳು ನಡೆಯಲಿದ್ದು ಸಾವಿರಾರು ಸಂಖ್ಯೆ ಭಕ್ತಾಧಿಗಳು ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ದೇವಾಲಯದ ಸಮೀಪ ಅನ್ಯ ಕೋಮಿನ ವರ್ತಕರು ವ್ಯಾಪಾರ ನಡೆಸದಂತೆ  ಹಿಂದುಪರ ಸಂಘಟನೆಗಳು ಎಚ್ಚರಿಕೆ ನೀಡಿತ್ತು. ಆದ್ರೆ ಇವರೆಲ್ಲರ ಕಣ್ಣಿಗೆ ಮಣ್ಣೆರಚಿ ವರ್ತಕರು ತಮ್ಮ ಸ್ವಂತ ಹೆಸರಿನ ಬದಲಾಗಿ ನಕಲಿ ದಾಖಾಲಾತಿಗಳನ್ನ ಮಾಡಿಕೊಂಡು ಹಿಂದುಗಳ ಹೆಸರಿನ ದಾಖಾಲಾತಿಗಳನ್ನ ಮಾಡಿಕೊಂಡು ವ್ಯಾಪರ ಮಾಡಲು ಮುಂದಾಗಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ. 

ಧರ್ಮ ದಂಗಲ್‌ ಮಧ್ಯೆ ಸುಬ್ರಮಣ್ಯ ಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ: ಬಿಗಿ ಪೊಲೀಸ್‌ ಬಂದೋಬಸ್ತ್‌

ಆದರೆ ನಿಜವಾಗಿಯೂ ಈತ ಅವನದೇ ಆಧಾರ್ ಕಾರ್ಡನ್ನು ತಿದ್ದಿಸಿ ಹೆಸರು ಬದಲಾಯಿಸಿದ್ದಾನಾ? ಇಲ್ಲ ಬೇರೆಯವರ ಆಧಾರ್ ಕಾರ್ಡಿಗೆ ಇವನ ಫೋಟೋ ಸೇರಿಸಿದ್ದಾನಾ ಎನ್ನುವುದು ದೊಡ್ಡ ಪ್ರಶ್ನೆಯಾಗಿದ್ದು, ಅವನನ್ನು ತನಿಖೆ ಮಾಡಿದ ಬಳಿಕವಷ್ಟೇ ಸತ್ಯ ಗೊತ್ತಾಗಬೇಕಾಗಿದೆ. ಮತ್ತೊಂದೆಡೆ ಈತ ಎಲ್ಲಿ ಆಧಾರ್ ಕಾರ್ಡನ್ನು ತಿದ್ದಿಸಿದಾ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದ್ದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದರ ಕುರಿತು ಸುವರ್ಣ ನ್ಯೂಸ್ ಕೂಡ ನಿನ್ನೆಯಷ್ಟೇ ಸುದ್ದಿ ಪ್ರಸಾರ ಮಾಡಿತ್ತು. ಏನೇ ಆಗಲಿ ಇಂತಹ ಒಂದು ಬೆಳವಣಿಗೆ ನಡೆದಿರೋದು ಹಿಂದು ಸಂಘಟನೆಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪೊಲೀಸ್ ಇಲಾಖೆ ಕೂಡ ಹೊರಗಿನಿಂದ ಬಂದ ವ್ಯಾಪರಿಗಳು ಹಾಗೂ ವಲಸೆ ಕಾರ್ಮಿಕರ ಬಗ್ಗೆ ನಿಗಾ ಇರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow Us:
Download App:
  • android
  • ios