ಚಿತ್ರದುರ್ಗ [ಜ.30]: ಅಪ್ರಾಪ್ತ ಬಾಲಕಿಯರು ಹಾಗು ಮಹಿಳೆಯರ ರಕ್ಷಣೆಗಾಗಿ  ಸರ್ಕಾರಗಳು ಹಲವಾರು ಕಾನೂನುಗಳನ್ನು ಜಾರಿಗೆ ತರುತ್ತಿದೆ ಆದರೂ, ಮಹಿಳೆಯರು ಹಾಗು ಅಪ್ರಾಪ್ತ ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ಹಾಗು ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದೆ. 

ಯುವಕನೋರ್ವ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದು, ಆಕೆ ಗರ್ಭ ಧರಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. 

 ಬಾಲಕಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ನಿರ್ಭಯವಾಗಿ ಮನೆಯೊಳಗೆ ನುಗ್ಗಿ 15 ವರ್ಷದ  ಅಪ್ರಾಪ್ತ ಬಾಲಕಿ  ಮೇಲೆ ಅನ್ವರ್ [25] ಎಂಬ ಆಸಾಮಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ.

ಈ ವಿಚಾರವನ್ನು ಯಾರಿಗಾದರು ತಿಳಿಸಿದರೆ ನಿಮ್ಮ ಕುಟುಂಬಸ್ಥರನ್ನೆಲ್ಲಾ ಕೊಲೆ ಮಾಡುತ್ತೇನೆ. ಹಾಗೆಯೇ ನಿಮ್ಮ ಮನೆಗೆ ಬೆಂಕಿ ಹಚ್ಚುತ್ತೇನೆಂದು ಬೆದರಿಕೆ ಹಾಕಿದ್ದನು.ಹೀಗಾಗಿ ಭಯಭೀತಳಾದ ಬಾಲಕಿ ಆತನಿಂದ ನಿರಂತರವಾಗಿ  ಅತ್ಯಾಚಾರಕ್ಕೊಳಗಾಗಿದ್ದ ಆಕೆ ಗರ್ಭಿಣಿಯಾಗಿದ್ದಾಳೆ.

ಸ್ಪೆಷಲ್ ಕ್ಲಾಸ್ ನೆಪದಲ್ಲಿ ಮೈ, ಕೈ ಮುಟ್ಟೋ ಮುಖ್ಯ ಶಿಕ್ಷಕ, ಸೆಲ್ಫೀ ತೆಗೆದು ಅಪ್ಲೋಡ್...

ಆದರೆ ಗರ್ಬಿಣಿಯಾದ ಬಳಿಕವೂ ಬಲತ್ಕಾರಕ್ಕೆ ಯತ್ನಿಸಿದ್ದಾನೆಂಬ ಆರೋಪವನ್ನು ಬಾಲಕಿಯ ಕುಟುಂಬಸ್ಥರು ಮಾಡಿದ್ದಾರೆ.  ಈ ಸಂಬಂಧ  ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.