ಹಬ್ಬದ ದಿನವೇ ಯುವಕನನ್ನು ಕೊಚ್ಚಿ  ಕೊಲೆ ಮಾಡಲಾಗಿದೆ. ಆದರೆ ಕೊಲೆ ಮಾಡಲು ನಿಖರ ಕಾರಣ ತಿಳಿದು ಬಂದಿಲ್ಲ.

ಹಾಸನ (ಆ.22): ಹಬ್ಬದ ದಿನದಂದು ಹಾಡ ಹಗಲೇ ಯುವಕನನ್ನು ಕೊಚ್ಚಿ ಕೊಲೆ ಕೊಲೆಗೈದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಹೊರವಲಯದ ನಿಂಗೇಗೌಡನ ಕೊಪ್ಪಲು ಬಳಿ ಬೈಕ್ ತೊಳೆಯಲು ಬಂದಿದ್ದ ವೇಳೆ ಹಾಲುವಾಗಿಲು ಗ್ರಾಮದ ಕುಮಾರ್ (45) ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. 

ಇದೇ ಗ್ರಾಮದ ಗೋವಿಂದೇಗೌಡ ಎಂಬಾತನಿಂದ ಕೃತ್ಯ ನಡೆದಿದೆ. ಬೆಳಗ್ಗೆ 11ಗಂಟೆಗೆ ಕಂಠಪೂರ್ತಿ ಕುಡಿದು ಬಂದು ಕೊಚ್ಚಿ ಕೊಂದಿದ್ದಾನೆ.

ಮಗುವಿನ ತಂದೆ ವಿಚಾರದಲ್ಲಿ ದಂಪತಿ ಮಧ್ಯೆ ಜಗಳ: ಮಗುವನ್ನು ಬಾವಿಗೆಸೆದ ತಾಯಿ...

ಕೋಡಿಬಿದ್ದ ಕೆರೆ ನೀರಲ್ಲಿ ಬೈಕ್ ತೊಳೆಯುತ್ತಿದ್ದ ಕುಮಾರ್ ನನ್ನು ಹಿಂಬದಿಯಿಂದ ಬಂದು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ.

ಕೊಲೆ ಮಾಡಿ ಶವದ ಪಕ್ಕದಲ್ಲಿಯೇ ಕುಳಿತಿದ್ದ ನಿಂಗೇಗೌಡನನ್ನು ಪೊಲೀಸರು ಆಗಮಿಸಿ ವಶಕ್ಕೆ ಪಡೆದಿದ್ದಾರೆ.

ಹಾಸನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.