38 ವರ್ಷಗಳ ಹಿಂದಿನ ಕೇಸ್ : ಆರೋಪಿ ಅರೆಸ್ಟ್
- 38 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣ
- ಜಾಮೀನು ಪಡೆದು ಕೋರ್ಟಿಗೆ ಹಾಜರಾಗದಿದ್ದ ಆರೋಪಿ
- ಬಂಧಿಸಿದ ಪಿರಿಯಾಪಟ್ಟಣದ ಪೊಲೀಸರು
ಪಿರಿಯಾಪಟ್ಟಣ (ಜು.07): 38 ವರ್ಷಗಳ ಹಿಂದೆ ಕಳ್ಳತನ ಪ್ರಕರಣವೊಂದರಲ್ಲಿ ಜಾಮೀನು ಪಡೆದು ನ್ಯಾಯಾಲಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಿರಿಯಾಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಮೀನು ವಿವಾದ; ಚಾಮರಾಜನಗರ ಜಿಪಂ ಉಪಾಧ್ಯಕ್ಷೆ ತಂದೆ ಕೊಲೆ ...
ಕೆ.ಆರ್. ನಗರ ತಾಲೂಕಿನ ಐಚನಹಳ್ಳಿ ಗ್ರಾಮದ ನಾಗರಾಜ ಬಂಧಿತ ಆರೋಪಿ, 1983ರ ಆಗಸ್ಟ್ ತಿಂಗಳಲ್ಲಿ ತಾಲೂಕಿನ ಕಿರನಲ್ಲಿ ಗ್ರಾಮದ ಬಸಪ್ಪ ಅವರ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್. ನಗರ ತಾಲೂಕು ಐಚನಹಳ್ಳಿ ಗ್ರಾಮದ ನಾಗರಾಜ್, ಸೋಮಶೇಖರ, ಚಂದ್ರ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸಿಸಿಟಿವಿ ಆಧಾರದಲ್ಲಿ ಸರಗಳ್ಳರ ಪತ್ತೆ ಮಾಡಿದ ಬೆಂಗಳೂರು ಪೊಲೀಸರು ...
ಇದರಲ್ಲಿ ಆರೋಪಿ ನಾಗರಾಜ್ 1990 ರಿಂದಲೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಪ್ರಕರಣ ಇತ್ಯರ್ಥವಾಗದೆ ಹಾಗೇ ಉಳಿದಿತ್ತು, ಸದರಿ ಆರೋಪಿಯ ಪತ್ತೆಗೆ ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಟ್ಟಣ ಪೋಲಿಸ್ ಠಾಣೆಯ ನಿರೀಕ್ಷಕರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಸದಾಶಿವ ತಿಪರೆಡ್ಡಿ, ಸಿಬ್ಬಂದಿ ಗವಿಗೌಡ, ನಂಜುಂಡಸ್ವಾಮಿ ತಂಡ ಆರೋಪಿಯನ್ನು ಜು. 6 ರಂದು ಪತ್ತೆಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ಪತ್ತೆ ಕಾರ್ಯವನ್ನು ಎಸ್ಪಿ ಆರ್. ಚೇತನ್ ಶ್ಲಾಘಿಸಿದ್ದಾರೆ.