Asianet Suvarna News Asianet Suvarna News

ಜಮೀನು ವಿವಾದ; ಚಾಮರಾಜನಗರ ಜಿಪಂ ಉಪಾಧ್ಯಕ್ಷೆ ತಂದೆ ಕೊಲೆ

* ವಿಕೋಪಕ್ಕೆ ತಿರುಗಿದ ಜಮೀನು ವಿವಾದ
* ಜಿಪಂ ಉಪಾಧ್ಯಕ್ಷೆ ತಂದೆಯ ಹತ್ಯೆ
* ಚಾಮರಾಜನಗರ ತಾಲೂಕು ಕೊತ್ತಲವಾಡಿ ಗ್ರಾಮದಲ್ಲಿ ಘಟನೆ
* ಆರೋಪಿಗಳು ಪೊಲೀಸರಿಗೆ ಶರಣು

land dispute ends in brutal murder Chamarajnagar mah
Author
Bengaluru, First Published Jul 6, 2021, 8:53 PM IST
  • Facebook
  • Twitter
  • Whatsapp

ಚಾಮರಾಜನಗರ(ಜು. 06)   ಜಮೀನು ವಿವಾದ ವಿಕೋಪಕ್ಕೆ ತಿರುಗಿದ್ದು ಒಂದು ಕೊಲೆಯಾಗಿದೆ. ಇನ್ನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ.

ಜಿಪಂ ಉಪಾಧ್ಯಕ್ಷೆ ಶಶಿಕಲಾ ಅವರ ತಂದೆ ಗುರುಸ್ವಾಮಿ(65) ಕೊಲೆಯಾಗಿದ್ದಾರೆ. ಗಾಯಗೊಂಡಿರುವ ಗುರುಸ್ವಾಮಿ ಮಗ ಮಂಜು ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆಲ್ಫಿ ಗೀಳಿಗೆ ಬಲಿಯಾದ ಸಹೋದರಿಯರು

ಚಾಮರಾಜನಗರ ತಾಲೂಕು ಕೊತ್ತಲವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಪಕ್ಕದ ಜಮೀನು‌ ಮಾಲೀಕ ಮಲೆಮಾದಪ್ಪ ಕುಟುಂಬದವರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಮಲೆಮಾದಪ್ಪ, ಪತ್ನಿ ಮಂಗಳಮ್ಮ, ಮಗ ಮಲ್ಲಿಕಾರ್ಜುನ ಪೊಲೀಸರಿಗೆ ಶರಣಾಗಿದ್ದಾರೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios