ಕೊಡಗು: ಮೂವರನ್ನು ಕೊಂದಿದ್ದು ಗಂಡು ಹುಲಿ..!

ಹೈದರಾಬಾದ್‌ ಪ್ರಯೋಗಾಲಯದಲ್ಲಿ ನಡೆದ ರಕ್ತ ಹಾಗೂ ಕೂದಲು ಪರೀಕ್ಷೆಯಲ್ಲಿ ಇದು ಖಾತರಿ| ಈ ಹಿಂದೆ ಸೆರೆಯಾಗಿದ್ದು, ನರಭಕ್ಷಕ ಹುಲಿ ಅಲ್ಲ ಎಂಬುದು ಖಾತ್ರಿ| ಟ್ರಾಪ್‌ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕೂಡಾ ಗಂಡು ಹುಲಿ| ಹುಲಿ ಸೆರೆ ಕಾರ್ಯಾಚರಣೆ ಮಾಡುತ್ತಿದ್ದೇವೆ: ಲಿಂಬಾವಳಿ| 

Male Tiger Killed Three People in Kodagu grg

ಮಡಿಕೇರಿ(ಮಾ.14): ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಮೂವರನ್ನು ಕೊಂದಿದ್ದು ಗಂಡು ಹುಲಿ ಎಂಬುದು ಖಾತರಿಯಾಗಿದ್ದು, ಈ ಹಿಂದೆ ಮಂಚಳ್ಳಿಯಲ್ಲಿ ಸೆರೆ ಹಿಡಿದ ಹೆಣ್ಣು ಹುಲಿಯಲ್ಲ ಎಂದು ದೃಢವಾಗಿದೆ.

ಹೈದರಾಬಾದ್‌ ಪ್ರಯೋಗಾಲಯದಲ್ಲಿ ನಡೆದ ರಕ್ತ ಹಾಗೂ ಕೂದಲು ಪರೀಕ್ಷೆಯಲ್ಲಿ ಇದು ಖಾತರಿದೆ. ಈ ಹಿಂದೆ ಸೆರೆಯಾಗಿದ್ದು, ನರಭಕ್ಷಕ ಹುಲಿ ಅಲ್ಲ ಎಂಬುದು ಖಾತ್ರಿಯಾಗಿದೆ. ಟ್ರಾಪ್‌ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕೂಡಾ ಗಂಡು ಹುಲಿ. ಹುಲಿ ಸೆರೆಗಾಗಿ ಆಗ್ರಹಿಸಿ ಬೆಳ್ಳೂರು ಗ್ರಾಮದಲ್ಲಿ ಆಹೋರಾತ್ರಿ ಧರಣಿ ಮುಂದುವರೆದಿದೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ನಡೆಸಲು ರೈತ ಸಂಘ, ಬೆಳೆಗಾರರು, ಸಾರ್ವಜನಿಕರ ತೀರ್ಮಾನ ಮಾಡಿದೆ.

'ಗುಂಡಿಕ್ಕಿ ಸಾಯಿಸಿ, ಆಮೇಲಿನ ಸಂಗತಿ ನಾವ್ ನೋಡಿಕೊಳ್ಳುತ್ತೇವೆ'

ಹುಲಿ ಸೆರೆ ಕಾರ್ಯಾಚರಣೆ ಮಾಡುತ್ತಿದ್ದೇವೆ: ಲಿಂಬಾವಳಿ

ಇನ್ನು ಬಾಗಲಕೋಟೆಯಲ್ಲಿ ಮಾತನಾಡಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು, ಕೊಡಗಿನಲ್ಲಿ ಹುಲಿಯೊಂದು ಮೂವರ ಬಲಿಪಡೆದಿದ್ದು, ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆ ದೊಡ್ಡ ತಂಡವೇ ಅಲ್ಲಿದೆ. ನನ್ನ ಪ್ರಕಾರ ಇನ್ಮೆರಡು ದಿನಗಳಲ್ಲಿ ಹುಲಿ ಸಿಗಬಹುದು. ಸಿಕ್ಕರೆ ಹಿಡಿಯಬೇಕು, ಇಲ್ಲದಿದ್ರೆ ಅಧಿಕಾರಿಗಳ ಕಡೆ ವೆಫನ್ಸ್‌ ಇವೆ. ಆ ಕ್ರಮ ಕೈಗೊಳ್ತಾರೆ ಎಂದು ತಿಳಿಸಿದ್ದಾರೆ.

ಹುಲಿ ಬಂದ್ರೆ ಹೊಡೆದುರುಳಿಸಿ ಮುಂದಿನದ್ದು ನಾನು ನೋಡ್ತೀನಿ ಎಂಬ ಶಾಸಕ ಅಪ್ಪಚ್ಚು ರಂಜನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಶೂಟ್‌ ಮಾಡೋಕು ತನ್ನದೇ ಆದ ಪ್ರಕ್ರಿಯೆ ಇವೆ. ಯಾರೋ ಬಂದು ಶೂಟ್‌ ಮಾಡೋಕೆ ಆಗಲ್ಲ. ಶಾಸಕರು ಅಲ್ಲಿನ ಜನರ ಭಾವನೆಗಳಿಗೆ, ದುಃಖಕ್ಕೆ ತಕ್ಷಣ ಆಗಲಿ ಅನ್ನೋ ಉದ್ದೇಶಕ್ಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂದರು.
 

Latest Videos
Follow Us:
Download App:
  • android
  • ios