ಚಾಮರಾಜನಗರ: ಪಾದಯಾತ್ರಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಮಾದಪ್ಪನ ಭಕ್ತ ಸಾವು
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ನಡೆದ ಘಟನೆ
ಚಾಮರಾಜನಗರ(ಅ.08): ಪಾದಯಾತ್ರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಾದಪ್ಪನ ಭಕ್ತ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ಇಂದು(ಶನಿವಾರ) ನಡೆದಿದೆ. ನಂಜನಗೂಡು ಮೂಲದ ಬಸವಣ್ಣ(55) ಮೃತ ದುರ್ದೈವಿಯಾಗಿದ್ದಾನೆ.
ಮೃತ ವ್ಯಕ್ತಿ ಬಸವಣ್ಣ ಪಾದಯಾತ್ರೆ ಮೂಲಕ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಅಂತ ತಿಳಿದು ಬಂದಿದೆ.
ಹೊಚ್ಚ ಹೊಸ ಕಾರಿನಲ್ಲಿ ಮನೆಗೆ ಬಂದ ಮಾಲೀಕ, ಪಾರ್ಕ್ ಮಾಡಿದ್ದ ಬೈಕ್ ಮೇಲೆ ಹತ್ತಿಸಿ ಅಪಘಾತ!
ವೇಗವಾಗಿ ಬಂದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸವಣ್ಣ ಸ್ಥಳದಲ್ಲೇ ಅಸುನೀಗಿದ್ದಾನೆ. ಲಾರಿ ಚಾಲಕನನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.