ನವದೆಹಲಿ(ಜೂ.08): ಭಾರತದಲ್ಲಿ ಅತ್ಯಾಚಾರದ ಆರೋಪ ಎದುರಿಸುತ್ತಿರುವ, 2019ರಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಆಗಾಗ ತನ್ನ ಹೇಳಿಕೆಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಭಾರತದಲ್ಲಿ ಕೊರೋನಾ ಹಾವಳಿ ಕೊನೆಯಾಗಬೇಕಾದರೆ, ಅದಕ್ಕೆ ನಾನೊಬ್ಬನೇ ಪರಿಹಾರ ಎಂದು ಹೇಳಿರುವ ವಿಡಿಯೋ ಭಾರೀ ವೈರಲ್ ಆಗಿದೆ. 

ನಿತ್ಯಾನಂದ ತನ್ನ ಹೊಸ ವಿಡಿಯೋದಲ್ಲಿ, ತಾನು ಭಾರತಕ್ಕೆ ಕಾಲಿಡುವ ದಿನ, ಕೊರೋನಾ ಕೊನೆಯಾಗಲಿದೆ ಎಂದು ಹೇಳಿದ್ದಾನೆ. 

ಕೋವಿಡ್ ಹೆಚ್ಚಳ: ನಿತ್ಯಾನಂದ ಕೈಲಾಶಕ್ಕೆ ಭಾರತೀಯರಿಗಿಲ್ಲ ಪ್ರವೇಶ

ಎಲ್ಲಿದ್ದಾನೆ ನಿತ್ಯಾನಂದ?

 ದಕ್ಷಿಣ ಅಮೆರಿಕದ ಈಕ್ವೆಡಾರ್‌ನಿಂದ ಖಾಸಗಿ ದ್ವೀಪವೊಂದನ್ನು ಖರೀದಿಸಿ ಅದನ್ನು ಸ್ವಾಯತ್ತ ದೇಶ ಎಂಬುದಾಗಿ ಘೋಷಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ ಕೈಲಾಸ ಎಂಬುದಾಗಿಯೂ ನಿತ್ಯಾನಂದ ಹೆಸರನ್ನು ಇಟ್ಟಿದ್ದಾನೆ. ಕೈಲಾಸ ದ್ವೀಪದಲ್ಲಿ ನಿತ್ಯಾನಂದನ ಸಾವಿರ ಭಕ್ತರು ತಂಗಿದ್ದಾರೆ ಎನ್ನಲಾಗಿದೆ. 

ಕೈಲಾಸ ದೇಶದಲ್ಲಿ 1 ಲಕ್ಷ ಜನರಿಗೆ ವಾಸಕ್ಕೆ ಅವಕಾಶ!

ತನ್ನ ದ್ವೀಪಕ್ಕೆ ಸ್ವತಂತ್ರ ದೇಶದ ಸ್ಥಾನಮಾನ ನೀಡುವಂತೆ ವಿಶ್ವಸಂಸ್ಥೆಗೂ ಪತ್ರ ಬರೆದು ನಿತ್ಯಾನಂದ ಸುದ್ದಿಯಾಗಿದ್ದ. ಆದರೆ, ಕೈಲಾಸಕ್ಕೆ ಇನ್ನೂ ದೇಶದ ಸ್ಥಾನಮಾನ ಲಭ್ಯವಾಗಿಲ್ಲ. ಅದು ಇನ್ನೂ ಈಕ್ವೆಡಾರ್‌ ಸ್ವಾಧೀನದಲ್ಲೇ ಇದೆ.