ಮಂಗಳೂರು(ನ.  16)  ಮಂಗಳೂರು ಸಿಸಿಬಿಗೆ  ಇನ್ಸ್ ಪೆಕ್ಟರ್ ಆಗಿ ಮತ್ತೆ ಮಹೇಶ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.  ಇನ್ಸ್‌ಪೆಕ್ಟರ್ ಶಿವಪ್ರಕಾಶ್. ಆರ್.ನಾಯಕ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲಿದ್ದ ಮಹೇಶ್ ಪ್ರಸಾದ್ ಗೆ ಸಿಸಿಬಿ ಹುದ್ದೆ ನೀಡಲಾಗಿದೆ. ಮಂಗಳೂರು ಡ್ರಗ್ಸ್ ಕೇಸ್ ವಿಚಾರಣೆ ವೇಳೆಯೇ ಸಿಸಿಬಿಗೆ ಮಹೇಶ್ ಪ್ರಸಾದ್‌ ನೇಮಕವಾಗಿತ್ತು.  ಅನುಶ್ರೀ ವಿಚಾರಣೆ ನಡೆಸಿದ್ದ ಸಿಸಿಬಿ ಇನ್ಸ್‌ಪೆಕ್ಟರ್ ಶಿವಪ್ರಕಾಶ್. ಆರ್.ನಾಯಕ್ ವರ್ಗಾವಣೆ ಮಾಡಲಾಗಿತ್ತು.

ರಾಗಿಣಿ-ಸಂಜನಾಗೆ ಜೈಲಲ್ಲೇ ದೀಪಾವಳಿ

ಆದರೆ ಭಾರೀ ವಿವಾದದ ಬೆನ್ನಲ್ಲೇ ಸರ್ಕಾರ ಅಂದು ವರ್ಗಾವಣೆ ರದ್ದು ಮಾಡಿತ್ತು. ಇದೀಗ ಮತ್ತೆ ಮಂಗಳೂರು ಸಿಸಿಬಿಗೆ ಮಹೇಶ್ ಪ್ರಸಾದ್ ನೇಮಕ ಮಾಡಿದೆ. ಸಿಸಿಬಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಕಬ್ಬಾಳ್ ರಾಜ್ ಕೂಡ ವರ್ಗಾವಣೆಯಾಗಿದ್ದಾರೆ. ಚಿಕ್ಕಮಗಳೂರು ನಗರಕ್ಕೆ ವರ್ಗಾವಣೆ ‌ಮಾಡಿ ಸರ್ಕಾರ ಆದೇಶ ಹೊರಡಿಸಿದೆ.