ಬೆಂಗಳೂರು(ನ. 16)  ಪರಪ್ಪನ ಅಗ್ರಹಾರ ಜೈಲಿನಲ್ಲಿ ದೀಪಾವಳಿ ಆಚರಣೆ ಮಾಡಲಾಗಿದೆ. ದೀಪಾವಳಿ ಆಚರಣೆಯಲ್ಲಿ ಕೈದಿಗಳ ಜೊತೆ ನಟಿ ಸಂಜನಾ ಹಾಗೂ ರಾಗಿಣಿ ಪಾಲ್ಗೊಂಡಿದ್ದಾರೆ. 

ದೀಪಾವಳಿ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳಿಗೆ ಹಾಗೂ ರಾಗಿಣಿಗೆ ರಾಗಿಣಿ ಪೋಷಕರು ಸ್ವೀಟ್ ನೀಡಿದ್ದಾರೆ. ಆದರೆ ಜೈಲಾಧಿಕಾರಿಗಳು ಸ್ವೀಟ್ ಸ್ವೀಕರಿಸಲು ನಿರಾಕರಣೆ ಮಾಡಿದ್ದಾರೆ. ಜೈಲಧಿಕಾರಿಗಳ ಬಳಿ ಹಲವು ಬಾರಿ ರಾಗಿಣಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.  ಸೆಲೆಬ್ರಿಟಿ ಹಿನ್ನೆಲೆಯಲ್ಲಿ ಸ್ವೀಟ್ ಪಡೆದುಕೊಳ್ಳದಂತೆ ಜೈಲಧಿಕಾರಿಗಳ ಸೂಚನೆ ಇರುವುದರಿಂದ ಕಿರಿಯ ಅಧಿಕಾರಿಗಳು ಅದರಂತೆ ನಡೆದುಕೊಂಡಿದ್ದಾರೆ.

ಹೊಸ ಬಟ್ಟೆಗಾಗಿ ನಟಿಮಣಿಯರ ಪರದಾಟ

ದೀಪಾವಳಿ ಹಿನ್ನೆಲೆಯಲ್ಲಿ ರಾಗಿಣಿ ಗ್ರೀಟಿಂಗ್ ತಯಾರು ಮಾಡಿದ್ದಾರೆ ಅಧಿಕಾರಿಗಳಿಗೆ ನೀಡಲು ಪೇಪರ್ ಸೇರಿದಂತೆ ಇತರೆ ವಸ್ತುಗಳಿಂದ ಗ್ರೀಟಿಂಗ್ ತಯಾರಿ ಮಾಡಿದ್ದಾರೆ ಮೂರುದಿನಗಳಿಂದ ಅಧಿಕಾರಿಗಳಿಗೆ ನೀಡಲು ಮುಂದಾದ ರಾಗಿಣಿ. ಆದರೆ  ಗ್ರೀಟಿಂಗ್ ಸ್ವೀಕರಿಸಲು ಸಹ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ.

ಜೈಲಿನ ಉಳಿದ ಕೈದಿಗಳೊಂದಿಗೆ ರಾಗಿಣಿ ಮತ್ತು ಸಂಜನಾ ದೀಪಾವಳಿ ಆಚರಣೆ ಮಾಡಲಿದ್ದಾರೆ. ವರ್ಷವರ್ಷವೂ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮುಖೇನ ವಿಶ್ ಮಾಡುತ್ತಿದ್ದರು.