ಮೈಸೂರು (ಅ.11):  ಮಹಿಷಾ ದಸರಾ ಆಚರಣೆ 2020 ಸಂಬಂಧ  ಮಹಿಷಾ ದಸರಾ ಆಚರಣಾ ಸಮಿತಿ ಹಾಗೂ ಅಹಿಂದ ಪ್ರಗತಿಪರ ಸಂಘಟನೆ ಸಮಯ ನಿಗದಿ ಮಾಡಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು ಮಹಿಷಾ ದಸರಾ ಆಚರಣೆಯನ್ನು ಅ.15 ರಂದು 11 ಗಂಟೆಗೆ ಎಲ್ಲಾ ದಲಿತ ಸಂಘಟನೆಗಳಿಂದ  ಮಹಿಷಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷಾ ದಸರಾ ಆಚರಣೆ ಮಾಡಲು ನಿರ್ಧರಿಸಿದ್ದಾರೆ.  ಚಾಮುಂಡಿ ಬೆಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕೊರೊನಾ ಹಿನ್ನೆಲೆ ಸರಳವಾಗಿ ಮಹಿಷ ದಸರಾ ಆಚರಣೆ ಮಾಡಲು ಈ ವೇಳೆ ನಿರ್ಧಾರ ಮಾಡಲಾಗಿದೆ. ಕಳೆದ 7 ವರ್ಷಗಳಿಂದ ಮಹಿಷಾ ದಸರಾ ಆಚರಣೆ ಮಾಡುತ್ತಿದ್ದೇವೆ. ನಾವು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಬದ್ಧವಾಗಿ ಕಾರ್ಯಕ್ರಮ ಮಾಡುತ್ತೇವೆ.  ಮಹಿಷಾ ದಸರಾಗೆ ಅನುಮತಿ ನೀಡುವಂತೆ ಡಿಸಿ, ಪೊಲೀಸ್ ಆಯುಕ್ತರಿಗೂ ಮನವಿ ಮಾಡಿದ್ದೇವೆ.  ಮಹಿಷಾ ದಸರಾ ಆಚರಣೆಗೆ ಅನುಮತಿ ಸಿಗುವ ಸಾಧ್ಯತೆ ಇದೆ  ಎಂದು ಮುಖಂಡರು ಹೇಳಿದರು.

ಮೈಸೂರು: ಜಂಬೂಸವಾರಿಗೆ 300 ಜನರಿಗಷ್ಟೇ ಅವಕಾಶ! ..

ಒಂದು ವೇಳೆ ಅನುಮತಿ ಸಿಗದೆ ಇದ್ದರು ನಾವು ಮಹಿಷಾ ದಸರಾ ಆಚರಣೆ ಮಾಡಿಯೇ ತೀರುತ್ತೇವೆ. ಸರಳವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಲು ಸಮಿತಿ‌ ತೀರ್ಮಾನಿಸಿದೆ. ಮುಂದಿನ ಬಾರಿ ಕೋರ್ಟ್ ಮೂಲಕ ಅನುಮತಿ ಪಡೆದು ಆಚರಣೆ ಮಾಡುತ್ತೇವೆ. ಯಾರೂ ಕೂಡಾ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಾರದು. ಕೊರೊನಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕಾರ್ಯಕ್ರಮ ಮಾಡುತ್ತೇವೆ ಎಂದು  ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.