Asianet Suvarna News Asianet Suvarna News

ಉತ್ತರಕನ್ನಡ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಮಹಾರುದ್ರ ಯಾಗ..!

ಸೆ.27ರಿಂದ ಸೆ.29ರವರೆಗೆ ಋತ್ವಿಜರ ನೇತೃತ್ವದಲ್ಲಿ ಮೋದಿಯವರಿಗಾಗಿ ಈ ಯಾಗ ನಡೆಯಲಿದ್ದು, ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ದೇಶದ ಚುಕ್ಕಾಣಿ ಹಿಡಿಯಬೇಕೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು. ನಾನು ಮೋದಿಯವರ ಮೇಲಿನ ಅಭಿಮಾನದಿಂದ ಈ ಯಾಗವನ್ನು ಆಯೋಜಿಸುತ್ತಿದ್ದೇನೆ ಹೊರತು ಯಾವುದೇ ಟಿಕೆಟ್ ಉದ್ದೇಶದಿಂದ ಅಲ್ಲ ಎಂದು ತಿಳಿಸಿದ ಅನಂತಮೂರ್ತಿ ಹೆಗಡೆ 

Maharudra Yaga for Narendra Modi to become PM Again in Uttara Kannada grg
Author
First Published Sep 23, 2023, 12:30 AM IST

ಉತ್ತರಕನ್ನಡ(ಸೆ.23): ಪ್ರಧಾನಿ ನರೇಂದ್ರ ಮೋದಿಯವರ ಆಯಸ್ಸು, ಆರೋಗ ವೃದ್ಧಿಯಾಗುವುದರ ಜತೆ ಇನ್ನೊಮ್ಮೆ‌‌ ಪ್ರಧಾನಿಯಾಗಲಿ ಎಂಬ ಉದ್ದೇಶದಿಂದ ಉತ್ತರಕನ್ನಡ ಜಿಲ್ಲೆಯ ಶ್ರೀ ಗೋಕರ್ಣ ಕ್ಷೇತ್ರದಲ್ಲಿ ಮಹಾರುದ್ರ ಯಾಗವನ್ನು ಆಯೋಜಿಸಲಾಗಿದೆ ಎಂದು ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಹೇಳಿದರು.

ಸೆ.27ರಿಂದ ಸೆ.29ರವರೆಗೆ ಋತ್ವಿಜರ ನೇತೃತ್ವದಲ್ಲಿ ಮೋದಿಯವರಿಗಾಗಿ ಈ ಯಾಗ ನಡೆಯಲಿದ್ದು, ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ದೇಶದ ಚುಕ್ಕಾಣಿ ಹಿಡಿಯಬೇಕೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು. ನಾನು ಮೋದಿಯವರ ಮೇಲಿನ ಅಭಿಮಾನದಿಂದ ಈ ಯಾಗವನ್ನು ಆಯೋಜಿಸುತ್ತಿದ್ದೇನೆ ಹೊರತು ಯಾವುದೇ ಟಿಕೆಟ್ ಉದ್ದೇಶದಿಂದ ಅಲ್ಲ ಎಂದು ತಿಳಿಸಿದ್ದಾರೆ. 

ಬಿಜೆಪಿ ಯೋಜನೆಗಳ ಕ್ರೆಡಿಟ್ ಪಡೆದುಕೊಳ್ಳಲು ಯತ್ನಿಸುವುದು ಕಾಂಗ್ರೆಸ್ಸಿನ ಚಾಳಿ: ರೂಪಾಲಿ ನಾಯ್ಕ್

ಈಗ ಎಂಪಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿ ಎಂದು ಎಲ್ಲಿಯೂ ಕರೆದಿಲ್ಲ, ಹಾಗಿದ್ದಾಗ ನಾನು ಅದರ ಬಗ್ಗೆ ಯೋಚನೆಯೂ ಮಾಡುವುದಿಲ್ಲ.  ನಾನೂ ಸಹ ಸಂಸದ ಅನಂತಕುಮಾರ ಹೆಗಡೆ ಅವರ ಊರು ಬ್ಯಾಗದ್ದೆಯವನೇ ಆಗಿದ್ದು, ನಾನು ಟಿಕೆಟ್‌ಗಾಗಿ ಎಲ್ಲಿಯೂ ಪ್ರಯತ್ನಿಸಿಲ್ಲ. ಯಾವುದೇ ಆದರೂ ಯೋಗ, ಯೋಗ್ಯತೆ ಆಧಾರದಲ್ಲಿ ಸಿಗುತ್ತದೆ, ನಾನು ಯಾವುದನ್ನೂ ಹುಡುಕಿಕೊಂಡು ಹೋಗುತ್ತಿಲ್ಲ. ಜನರ ಸೇವೆಯೊಂದೇ ನನ್ನ ಗುರಿಯಾಗಿದ್ದು, ಅಂತಹ ಅವಕಾಶ ಬಂದಾಗ ಯೋಚನೆ ಮಾಡುವುದಾಗಿ ತಿಳಿಸಿದರು. 

ನಾನು ಮೊದಲಿನಿಂದಲೂ ಪ್ರಧಾನಿ ಮೋದಿಯವರ ಅಭಿಮಾನಿಯಾಗಿದ್ದು ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೇ ಹೊರತು ರಾಜಕೀಯದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios