Asianet Suvarna News Asianet Suvarna News

ಬಿಜೆಪಿ ಯೋಜನೆಗಳ ಕ್ರೆಡಿಟ್ ಪಡೆದುಕೊಳ್ಳಲು ಯತ್ನಿಸುವುದು ಕಾಂಗ್ರೆಸ್ಸಿನ ಚಾಳಿ: ರೂಪಾಲಿ ನಾಯ್ಕ್

ಇಂದು ದೇಶ ಮುನ್ನೆಲೆಗೆ ಬರುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರದ ನಾಯಕರು ಕಾರಣ. ಇದನ್ನೆಲ್ಲಾ ನೋಡಕ್ಕಾಗದೇ ಕಾಂಗ್ರೆಸಿನವರು ಕುಳಿತಲ್ಲಿಯೇ ಬಡಬಡಿಸ್ತಿದ್ದಾರೆ. ಎಲ್ಲಾ ಪಕ್ಷಗಳು ಒಂದಾಗಿ ಮೋದಿಯವರನ್ನು ಸೋಲಿಸಲು ಇಂಡಿಯಾ ಹೆಸರಿನಲ್ಲಿ ವೇದಿಕೆ ಮಾಡಿಕೊಂಡಿದ್ದಾರೆ. ದೇಶದ ಹೆಸರು ಇಟ್ಟುಕೊಂಡು ಈ ತರಹ ಮಾಡುವುದು ನಾಚಿಕೆಗೇಡು: ಮಾಜಿ ಶಾಸಕಿ ರೂಪಾಲಿ ನಾಯ್ಕ್

Former BJP MLA Rupali Naik Slams Congress grg
Author
First Published Sep 21, 2023, 9:35 PM IST

ಉತ್ತರಕನ್ನಡ(ಸೆ.21): ಮಹಿಳಾ ಮೀಸಲಾತಿಗೆ ಆದ್ಯತೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಹಿಂದಿನಿಂದಲೂ ಮಹಿಳೆಯರಿಗೆ ಸ್ಥಾನಮಾನ ನೀಡಲು ಒತ್ತಾಯಗಳಿತ್ತು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ವಿಧೇಯಕ ಜಾರಿಗೆ ಪ್ರಯತ್ನಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ‌ ಮೀಸಲಾತಿ ವಿಧೇಯಕಕ್ಕೆ ಕೇಂದ್ರದಲ್ಲಿ ಅಂಗೀಕಾರ ಸಿಕ್ಕಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ್ ತಿಳಿಸಿದ್ದಾರೆ. 

ಮಹಿಳಾ‌ ಮೀಸಲಾತಿ ವಿಧೇಯಕಕ್ಕೆ ಕೇಂದ್ರದಲ್ಲಿ ಅಂಗೀಕಾರ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಕಾರವಾರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ರೂಪಾಲಿ ನಾಯ್ಕ್, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅಂಗೀಕಾರಗೊಂಡ ಬಳಿಕ ಉಳಿದ ಪಕ್ಷಗಳು ಕ್ರೆಡಿಟ್ ಪಡೆದುಕೊಳ್ಳಲು ಪ್ರಯತ್ನಿಸ್ತಿವೆ. ಇದನ್ನು ನೋಡುವಾಗ ನಗಬೇಕು ಎಂದೆನಿಸುತ್ತಿದೆ. ಬಿಜೆಪಿ ಯೋಜನೆಗಳ ಕ್ರೆಡಿಟ್ ಪಡೆದುಕೊಳ್ಳಲು ಯತ್ನಿಸುವುದು ಕಾಂಗ್ರೆಸ್ಸಿನ ಚಾಳಿಯಾಗಿದೆ ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಟ್ಟು ರಾಜ್ಯದ ಜನತೆಯ ನೆರವಿಗೆ ಧಾವಿಸಬೇಕು: ದೇಶಪಾಂಡೆ

ಇಂದು ದೇಶ ಮುನ್ನೆಲೆಗೆ ಬರುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರದ ನಾಯಕರು ಕಾರಣ. ಇದನ್ನೆಲ್ಲಾ ನೋಡಕ್ಕಾಗದೇ ಕಾಂಗ್ರೆಸಿನವರು ಕುಳಿತಲ್ಲಿಯೇ ಬಡಬಡಿಸ್ತಿದ್ದಾರೆ. ಎಲ್ಲಾ ಪಕ್ಷಗಳು ಒಂದಾಗಿ ಮೋದಿಯವರನ್ನು ಸೋಲಿಸಲು ಇಂಡಿಯಾ ಹೆಸರಿನಲ್ಲಿ ವೇದಿಕೆ ಮಾಡಿಕೊಂಡಿದ್ದಾರೆ. ದೇಶದ ಹೆಸರು ಇಟ್ಟುಕೊಂಡು ಈ ತರಹ ಮಾಡುವುದು ನಾಚಿಕೆಗೇಡು. ದೇಶದ ಜನರು ಇವರಿಗೆ ಓಟ್ ಹಾಕ್ತಾರೆ ಅನ್ನೋ ಭ್ರಮೆಯಲ್ಲಿ ಉಳಿದ ಪಕ್ಷಗಳಿವೆ. ಆದರೆ, ಕೇಂದ್ರದಲ್ಲಿ ಮುಂದಿನ ಬಾರಿಯೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಲಿದ್ದಾರೆ. ಮಹಿಳೆಯರು ಸಮಾಜಮುಖಿಯಾಗಿ ಮತ್ತಷ್ಟು ಬೆಳೆಯಲು ಮೀಸಲಾತಿ ಸಹಕಾರಿಯಾಗಿದೆ. ಕೇಂದ್ರದ ಈ ನಿರ್ಧಾರದಿಂದ ದೇಶದ ಮಹಿಳೆಯರೆಲ್ಲರೂ ಸಂತೋಷಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios