Asianet Suvarna News Asianet Suvarna News

ಕೆಆರ್ ಪೇಟೆಯಲ್ಲಿ ಕುಂಭ ಮೇಳ ಸಂಭ್ರಮ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತ ಸಾಗರ

ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಭಕ್ತ ಸಾಗರವೇ ಹರಿದು ಬರ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪಾಲ್ಗೊಂಡು ಕುಂಭ ಮೇಳಕ್ಕೆ ಚಾಲನೆ ನೀಡಿದರು.

Maha Kumbh Mela 2022 Triveni Sangam KR Pete gow
Author
First Published Oct 14, 2022, 6:03 PM IST | Last Updated Oct 14, 2022, 6:03 PM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಭಕ್ತ ಸಾಗರವೇ ಹರಿದು ಬರ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪಾಲ್ಗೊಂಡು ಕುಂಭ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಲೆ ಮಹದೇಶ್ವರ ಸ್ವಾಮಿಯ ನೂತನ ದೇಗುಲ ಲೋಕಾರ್ಪಣೆಗೊಳಿಸಿ ನದಿಗೆ ಬಾಗಿನ ಸಮರ್ಪಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ಮಲೆ ಮಹದೇಶ್ವರ ಸ್ವಾಮಿ ಪಾದ ಸ್ಪರ್ಶ ಮಾಡುವ ಜೊತೆಗೆ ಪವಾಡ ಮೆರೆದ ಪುಣ್ಯ ಕ್ಷೇತ್ರ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮ. ಈ ಪವಿತ್ರ ಜಾಗದಲ್ಲಿ ಮಹಾ ಕುಂಭ ಮೇಳ ಸಂಭ್ರಮ ಭಕ್ತಿ ಭಾವದಿಂದ ನಡೆಯುತ್ತಿದೆ. ಇಂದು ರಾಜ್ಯದ ಹಲವೆಡೆಯಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡು ಕಾವೇರಿ, ಹೇಮಾವತಿ, ಲಕ್ಷಣ ತೀರ್ಥ ನದಿಗಳ ಸಂಗಮದಲ್ಲಿ ಮಿಂದೆದ್ದು ಪಾಪ ನಿವಾರಣೆಗಾಗಿ ಪ್ರಾರ್ಥಿಸಿದ್ರು. ಬೆಳಿಗ್ಗೆಯಿಂದಲೇ ತಂಡೋಪ ತಂಡವಾಗಿ ಭಕ್ತರು ಆಗಮಿಸುತ್ತಿದ್ದರು. ನದಿಯಲ್ಲಿ ಸ್ನಾನ ಮಾಡಿ ಮಹದೇಶ್ವರ ಸ್ವಾಮಿ ದರ್ಶನ ಪಡೆದ್ರೆ ಸ್ನಾನ ಮಾಡದವರು ನದಿ ನೀರನ್ನ ತೀರ್ಥದ ರೂಪದಲ್ಲಿ ಪ್ರೋಕ್ಷಣೆ ಮಾಡಿಕೊಂಡು ಭಕ್ತಿ ಸಮರ್ಪಿಸಿದ್ರು. ಇನ್ನು ಬರುವ ಭಕ್ತರಿಗೆ ದಿನದ 24 ಗಂಟೆಯೂ ಊಟದ ವ್ಯವಸ್ಥೆ ಮಾಡಲಾಗಿತ್ತು. 

ಪವಾಡ ಮೆರೆದ ಜಾಗದಲ್ಲಿ ಮಾದಪ್ಪನ ನೂತನ ದೇಗುಲ: 
ತ್ರಿವೇಣಿ ಸಂಗಮದ ದಡದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ವಿಗ್ರಹಕ್ಕೆ ಅಷ್ಟ ಬಂಧನ, ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿದವು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ಕುಂಭಾಭಿಷೇಕ ಮಾಡುವ ಮೂಲಕ ದೇಗುಲ ಲೋಕಾರ್ಪಣೆ ಮಾಡಿದ್ರು. ಇದೇ ವೇಳೆ ನದಿಗೆ ಶಾಸ್ತ್ರೋಕ್ತವಾಗಿ ಬಾಗಿನ ಸಮರ್ಪಣೆ ಮಾಡಲಾಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕುಂಭ ಮೇಳ ಉದ್ಘಾಟಿಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ದೇವಸ್ಥಾನಗಳಿವೆ.

Mandya : ಕುಂಭಮೇಳ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

ನಾವು ಕೆಲವು ಸಲ ಕೃತಜ್ಞತೆ ಸಲ್ಲಿಸವುದಕ್ಕಾಗಿ ಪೂಜೆ ಸಲ್ಲಿಸುತ್ತೇವೆ. ಪಂಚ ಭೂತಗಳಲ್ಲಿ ಜಲ ಬಹಳ ಮುಖ್ಯವಾದದ್ದು, ಜಲಕ್ಕೆ ನಾವು ಕೃತಜ್ಞತೆ ಹೇಳುವುದು ಹೇಗೆ.  ಇಷ್ಟು ವರ್ಷ ನಮಗೆ ನೀರಿನ ಅಭವಾ ಉಂಟಾಗಿತ್ತು. ಈವ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಅದನ್ನ ಹೇಗೆ ಬಳಕೆ ಮಾಡಬೇಕೆಂಬದನ್ನ ಕಲಿಯ ಬೇಕು. ಜಲವನ್ನ ಎಚ್ಚರಿಕಯಿಂದ ಅಮುಲ್ಯ ಎಂದು ಬಳಸಬೇಕು ಎಂದರು. ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀ, ಕಾಗಿನೆಲೆ ಶ್ರೀ ಸೇರಿದಂತೆ ಹಲವು ಮಠಾಧಿಪತಿ ಪಾಲ್ಗೊಂಡು ಕುಂಭ ಮೇಳದ ಮಹತ್ವ ಸಾರಿದ್ರು. ಸಚಿವರಾದ ಅಶ್ವಥ್ ನಾರಾಯಣ್, ನಾರಾಯಣಗೌಡ, ಗೋಪಾಲಯ್ಯ, ಶಶಿಕಲಾ ಜೊಲ್ಲೆ ಪಾಲ್ಗೊಂಡಿದ್ರು.

Latest Videos
Follow Us:
Download App:
  • android
  • ios