ಚಿನ್ನದ ಕೆಲಸಗಾರನ ದೇಹದಲ್ಲಿ ಕಾಂತೀಯ ಶಕ್ತಿ..!
- ಚಿನ್ನದ ಕೆಲಸಗಾರನ ದೇಹದಲ್ಲಿ ಅಯಸ್ಕಾಂತಿಯ ಶಕ್ತಿ
- ರಾಮದಾಸ್ ಶೇಟ್ ಎಂಬವರ ದೇಹಕ್ಕೆ ಅಂಟಿದ ನಾಣ್ಯ
- ಲೋಹದ ವಸ್ತುಗಳು ಅಂಟಿಕೊಳ್ಳುವ ವಿಡಿಯೋ ವೈರಲ್
ಉಡುಪಿ (ಜೂ.15): ಇಲ್ಲಿನ ಚಿನ್ನದ ಕೆಲಸಗಾರ ರಾಮದಾಸ್ ಶೇಟ್ ಎಂಬವರ ದೇಹಕ್ಕೆ ನಾಣ್ಯ, ಚಮಚ ಇತ್ಯಾದಿ ಲೋಹದ ವಸ್ತುಗಳು ಅಂಟಿಕೊಳ್ಳುವ ವಿಡಿಯೋ ಇದೀಗ ಚರ್ಚೆಗೆ ಕಾರಣವಾಗಿದೆ.
ನಾಸಿಕ್‌ನ ವ್ಯಕ್ತಿಯೊಬ್ಬರು ತಾನು ಕೊರೋನಾ ಲಸಿಕೆ ತೆಗೆದುಕೊಂಡ ಮೇಲೆ ತನ್ನ ದೇಹಕ್ಕೆ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿವೆ ಎಂಬ ವಿಡಿಯೋವನ್ನು ನೋಡಿದ ರಾಮದಾಸ್ ಶೇಟ್, ಇತ್ತೀಚೆಗೆ ತಾನು ಕೂಡ ಲಸಿಕೆ ತೆಗೆದುಕೊಂಡಿದ್ದು, ಪರೀಕ್ಷೆಗೆಂದು ತನ್ನ ದೇಹಕ್ಕೆ ನಾಣ್ಯಗಳನ್ನು ಅಂಟಿಸಿದಾಗ ಅವು ಕಳಚಿಕೊಳ್ಳದೇ ಗಟ್ಟಿಯಾಗಿ ಹಿಡಿದುಕೊಂಡವು.
ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!
ಇದನ್ನು ಅವರು ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ. ಈ ವಿಡಿಯೋ ವೈರಲ್ ಆಗುತಿದ್ದಂತೆ ಸೋಮವಾರ ರಾಮದಾಸ ಶೇಟ್ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ಆದರೆ ಅವರ ದೇಹದಲ್ಲಿ ಈ ಆಯಸ್ಕಾಂತಿಯ ಶಕ್ತಿ ಹೇಗೆ ಬಂತು ಎಂಬುದು ಪತ್ತೆಯಾಗಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಈ ಘಟನೆಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಕೊರೋನಾ ಲಸಿಕೆ ಪಡೆದುಕೊಂಡರೆ ದೇಹದಲ್ಲಿ ಆಯಸ್ಕಾಂತೀಯ ಶಕ್ತಿ ಉತ್ಪನ್ನವಾಗುತ್ತದೆ ಎಂಬುದು ಸುಳ್ಳು. ಅವರು ಲಸಿಕೆ ಪಡೆದು ತಿಂಗಳಿಗೂ ಅಧಿಕ ಸಮಯ ಆಗಿದೆ. ಅವರಿಗೆ ಮಧುಮೇಹ, ರಕ್ತದೊತ್ತಡ ಕಾಯಿಲೆಗಳಿವೆ, ಅದಕ್ಕೂ ಔಷಧಿ ಪಡೆದುಕೊಂಡಿದ್ದಾರೆ. ರಾಘವೇಂದ್ರ ಶೇಟ್ ಅವರನ್ನು ಕೂಲಂಕಷಲಾಗಿ ತಪಾಸಣೆ ಮಾಡಲಾಗುತ್ತದೆ. ಸಾರ್ವಜನಿಕರು ಈ ವದಂತಿಗಳನ್ನು ನಂಬದೆ ಭಯಪಡದೆ ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.