Asianet Suvarna News Asianet Suvarna News

ರೈತರ ಹೊಲಗಳಿಗೆ ವಾಮಾಚಾರ ಮಾಡ್ತಿರೋ ಮಂತ್ರವಾದಿಗಳು: ಬರದ ನಡುವೆ ಹಣ ಸುಲಿಗೆಗೆ ಕುತಂತ್ರಿಗಳ ಕಳ್ಳಾಟ

ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ, ಧಾರವಾಡದಲ್ಲಿ ರೈತರಿಂದ ಹಣ ಸುಲಿಗೆ ಮಾಡಲು ಹೊಲಗಳಿಗೆ ವಾಮಾಚಾರ ಮಾಡುವ ಕುಕೃತ್ಯ ಆರಂಭವಾಗಿದೆ.

Magicians do witchcraft to farmers fields Tricksters trade to extort money amid drought sat
Author
First Published Oct 19, 2023, 6:52 PM IST

ವರದಿ : ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಅ.19): ಪ್ರಸಕ್ತ ವರ್ಷ ಈ ಭಾರಿ ಮುಂಗಾರು ಬೆಳೆ ಬರುತ್ತೆ, ಅನ್ನದಾತರ ಸಂಕಷ್ಟ ಕೈ ಬಿಡುತ್ತೆ ಎಂದು ರೈತರು ಕನಸು ಕಂಡಿದ್ದರು. ಆದರೆ, ಧಾರವಾಡ ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳು ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿರುವ ಬೆನ್ನಲ್ಲೆ  ಸದ್ಯ ಅಲ್ಪಸ್ವಲ್ಪ ಬೆಳೆದ ಬೆಳೆಗಳಿಗೆ ಕಳ್ಳರ ಕಾಟ ಅಲ್ಲ ವಾಮಾಚಾರದ ಕಾಟ ಹೆಚ್ಚಾಗುತ್ತಿದೆ ಎಂದು ಅನ್ನದಾತರು ಹೊಲಗಳಿಗೆ ತೆರಳಲು ಭಯ ಬೀತರಾಗಿರಾಗಿದ್ದಾರೆ. ಮತ್ತೊಂದಡೆ ಕೇಂದ್ರ‌ ಅಧ್ಯಯನ ತಂಡ ಬಂದು ಬೆಳೆ ವೀಕ್ಷಣೆ ಮಾಡಿ ಹೋಗಿದೆ ಅವರು ಕೊಡೋ ಪರಿಹಾರವು ನಮ್ಮ ಬೀಜೋಪಚಾರಕ್ಕೆ ಆಗೋದಿಲ್ಲ ಎಂದು ರೈತರು ಹೇಳುತ್ತಿದ್ದಾರೆ.‌

ಹೀಗೆ ಒಣಗಿ ನಿಂತಿರೋ ಈರುಳ್ಳಿ ಗೋವಿನ ಜೋಳ್ದ ಬೆಳೆ ಮಳೆಯ ಕೊರತೆಯಿಂದ ಒಣಗುತ್ತಿರುವ ಗೋವಿನ ಜೋಳದ ಬೆಳೆ, , ಮತ್ತೋಂದರೆ  ಹೊಲದಲ್ಲಿ ಅಯ್ಯೋ ಇದೆನಾಯ್ತು ನಮ್ಮ ಪತಿಸ್ತಿರಿ ಎಂದು ಕಣ್ಣೀರು ಹಾಕುತ್ತಾ ಅಸಹಾಯಕರಂತೆ ನಿಂತಿರೋ ರೈತರು..ಇವೆಲ್ಲ ಮನಕಲುಕುವ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲಾಳ್ ಗ್ರಾಮದಲ್ಲಿ..ಹೀಗೆ ಹೊಲಕ್ಕೆ ತೆರಳಲು ಭಯ ಬೀತರಾಗಿರುವ ಅನ್ನದಾತರು..ಇವರು ತಮ್ಮ ತಮ್ಮ ಹೊಲಗಳಿಗೆ ತೆರಳಲು ಭಯ ಬೀತರಾಗಿದ್ದಾರೆ.

ಧರ್ಮಸ್ಥಳದಲ್ಲಿ ದುಷ್ಟರಿಗೆ ಬಲಿಯಾದ ಸೌಜನ್ಯಾ ಪ್ರತಿಮೆ ಪ್ರತಿಷ್ಠಾಪನೆ: 28ನೇ ಹುಟ್ಟುಹಬ್ಬ ಆಚರಣೆ

ಗೋವಿನ ಜೋಳದ ಹೊಲಕ್ಕೆ ವಾಮಾಚಾರವನ್ನ ಮಾಡುತ್ತಿದ್ದಾರೆ. ಹೊಲದ ಪಕ್ಕ, ಕರಿ ಬಣ್ಣದ ಗೊಂಬೆ, ಗೊಂಬೆಗೆ ಪಿನ್ ಹಾಕಿದ್ದಾರೆ. ಮೊಟ್ಟೆ, ನಿಂಬೆ ಹಣ್ಣು, ದಾರದ ರೀಲ್‌ ಸೇರಿದಂತೆ ವಾಮಾಚಾರಕ್ಕೆ ಎನೆಲ್ಲ ಸಾಮಗ್ರಿಗಳು ಬೇಕು ಅವುಗಳನ್ನೆಲ್ಲ ಇಟ್ಟು ವಾಮಾಚಾರ ಮಾಡಿದ್ದಾರೆ. ನಮ್ಮ ಹೊಲಗಳಿಗೆ ಹೋಗಲು ಭಯವಾಗುತ್ತಿದೆ ಎಂದು ರೈತರು ಅಳಲು ತೋಡಿಕ್ಕೊಂಡಿದ್ದಾರೆ. ಇನ್ನು ಗ್ರಾಮದಲ್ಲಿ ಸುಮಾರು 1,500 ಎಕರೆ ಗೋವಿನ ಜೋಳದ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಇನ್ನು ಬ್ಯಾಲಾಳ ಗ್ರಾಮದ ಸುತ್ತಮುತ್ತಲೂ ಸುಮಾರು ಹತ್ತಾರು ಕಡೆ ಹೊಲಗಳಲ್ಲಿ ವಾಮಾಚಾರ ಮಾಡಲಾಗಿದೆ. ಇಡಿ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. ರೈತರು ತಮ್ಮ‌ ಹೊಲಗಳಿಗೆ ಹೋಗಲು ಭಯ ಬೀತರಾಗಿದ್ದಾರೆ. ಇದಕ್ಕೆ‌ ನಿದರ್ಶನ ಎಂಬಂತೆ ವಾಮಾಚಾರದ ಸಾಮಗ್ರಿಗಳನ್ನ ಕೈ ಯಿಂದ ತೆಗೆದು ಹಾಕಿದ ಮಹಿಳೆ, ಊಟ- ನೀರು ಸೇವಿಸಲಾಗದೇ ಹಾಸಿಗೆ ಹಿಡದಿದ್ದಾಳೆ ಎಂದು ಹೇಳಲಾಗುತ್ತಿದೆ. ನಿಜಕ್ಕೂ ವಾಮಾಚಾರದ ಪ್ರಭಾವ ಅಷ್ಡೊಂದು ಇದೆನಾ ಎಂದು ಸ್ಥಳಿಯ ರೈತರು ಭಯ ಬೀತರಾಗಿದ್ದಾರೆ. ಇದರಿಂದ ಬೆಳೆದ ಬೆಳೆಗಳಿಗೆ ವಾಮಾಚಾರ ಮಾಡಿದರೆ ಮಾಡಿದ ಕಿರಾತಕರಿಗೆ ಎನೂ ಸಿಗುತ್ತೆ ಎಂದು ರೈತರು ಮಾತನಾಡುತ್ತಿದ್ದಾರೆ.

ಜೆಡಿಎಸ್‌ ರಾಜ್ಯ ಘಟಕಗಳನ್ನು ವಿಸರ್ಜಿಸಿದ ಹೆಚ್.ಡಿ. ದೇವೇಗೌಡ: ಹೊಸ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ!

ಒಟ್ಟಿನಲ್ಲಿ ಜನ ಮರಳೋ ಜಾತ್ರೆ ಮರಳೋ ಎಂಬಂತೆ ಗ್ರಾಮೀಣ ಭಾಗದಲ್ಲಿ ಇನ್ನು ವಾಮಾಚಾರದ ವಾಸನೆ ಮಾತ್ರ ನಿಂತಿಲ್ಲ. ಇದರಿಂದ ಬೆಳೆದ ಬೆಳೆಗಳಿಗೆ ಸದ್ಯ ಒಂದು ಕಡೆ ಮಳೆಯಿಲ್ಲ. ಮತ್ತೊಂದಡೆ ಬೆಳೆದ ಬೆಳೆಗಳಿಗೆ ದುಷ್ಕರ್ಮಿಗಳು ವಾಮಾಚಾರವನ್ನ ಮಾಡುತ್ತಿದ್ದಾರೆ. ಈಗ ರೈತರು ಮೊದಲೇ ಬೆಳೆಗಳಿಲ್ಲದೇ ಸಾಲದ ಸುಳಿಗೆ ಸಿಲುಕುತ್ತಿದ್ದು, ವಾಮಾಚಾರದ ಪರಿಹಾರಕ್ಕೆ ಸಾವಿರಾರು ರೂ. ಹಣವನ್ನು ಮಂತ್ರವಾದಿಗಳಗೆ ಕೊಟ್ಟು ಪರದಾಡುವಂತಾಗಿದೆ. ಆದರೆ ಒಂದಂತೂ ಸತ್ಯ ಅನ್ನದಾತನ ಬೆಳೆಗೆ ವಾಮಾಚಾರ ಮಾಡಿದ ದುರುಳರಿಗೆ ಆ ದೇವರೆ ಶಿಕ್ಷೆ ಕೊಡಬೇಕಿದೆ. 

Follow Us:
Download App:
  • android
  • ios