ಕನ್ನಡ ನೆಲದ ಮಧ್ವಾಚಾರ್ಯರ ಜಯಂತಿ ಯಾಕಿಲ್ಲ: ದ್ವೈತ ಮತ ಅನುಯಾಯಿಗಳ ಬೇಸರ

ಆಚಾರ್ಯತ್ರಯರಲ್ಲಿ ಒಬ್ಬರಾದ ದ್ವೈತ ಮತ ಸ್ಥಾಪಕರಾದ ಮಧ್ವಾಚಾರ್ಯರ ಜಯಂತಿಯನ್ನು ಸರಕಾರ ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬಂದಿದೆ. ವಿವಿಧ ಮಹಾಪುರುಷರ ಜಯಂತಿಗಳನ್ನು, ಜಿಲ್ಲೆಗಳನ್ನು ಕೇಂದ್ರೀಕರಿಸಿಕೊಂಡು ಆಚರಿಸಲು ಸರಕಾರ ತೀರ್ಮಾನಿಸಿದೆ. 

Madhvacharya jayanti is not named in the list of declared by the karnataka government gvd

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ (ಮೇ.02): ಆಚಾರ್ಯತ್ರಯರಲ್ಲಿ ಒಬ್ಬರಾದ ದ್ವೈತ ಮತ ಸ್ಥಾಪಕರಾದ ಮಧ್ವಾಚಾರ್ಯರ ಜಯಂತಿಯನ್ನು (Madhvacharya Jayanti) ಸರ್ಕಾರ ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬಂದಿದೆ. ವಿವಿಧ ಮಹಾಪುರುಷರ ಜಯಂತಿಗಳನ್ನು, ಜಿಲ್ಲೆಗಳನ್ನು ಕೇಂದ್ರೀಕರಿಸಿಕೊಂಡು ಆಚರಿಸಲು ಸರಕಾರ ತೀರ್ಮಾನಿಸಿದೆ. ಆದರೆ ಈ ಮಹಾಪುರುಷರ ಪಟ್ಟಿಯಲ್ಲಿ ಕನ್ನಡದ ಧಾರ್ಮಿಕ ಪುರುಷ ಆಚಾರ್ಯ ಮಧ್ವರ ಹೆಸರಿಲ್ಲ ಎಂದು ಮಾಧ್ವ ಅನುಯಾಯಿಗಳು ಬೇಸರಗೊಂಡಿದ್ದಾರೆ. ರಾಜ್ಯ ಸರ್ಕಾರ (Karnataka Government) ವಿವಿಧ ಮಹಾಪುರುಷರ ಜಯಂತಿಗಳನ್ನು ಆಚರಿಸಲು ತೀರ್ಮಾನಿಸಿದೆ. ಬೆಂಗಳೂರಿಗೆ ಹೊರತಾಗಿ ಜಿಲ್ಲಾ ಕೇಂದ್ರಗಳಲ್ಲಿ ಈ ಜಯಂತಿಗಳನ್ನು ಆಚರಿಸಲು ಒತ್ತು ನೀಡಿದೆ. 

Udupi ಕೆಳ ಪರ್ಕಳದಲ್ಲಿ ಸುರಂಗ ಪತ್ತೆ! ಏನಿದರ ರಹಸ್ಯ?

ಜಿಲ್ಲೆಗೊಬ್ಬ ಮಹಾಪುರುಷರ ಜಯಂತಿಯನ್ನು ನಿಗದಿಪಡಿಸಿದೆ. ಆದರೆ ಈ ಮಹಾಪುರುಷರ ಪಟ್ಟಿಯಲ್ಲಿ ಆಚಾರ್ಯ ಮಧ್ವರ ಹೆಸರಿಲ್ಲ ಎಂದು ಮಾಧ್ವ ತತ್ವ ಅನುಯಾಯಿಗಳು ಬೇಸರಗೊಂಡಿದ್ದಾರೆ. ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ಕೃಷ್ಣ ಮಠ ಹಾಗೂ ಅಷ್ಟ ಮಠಗಳು ದ್ವೈತಮತದ ಪ್ರಚಾರದಲ್ಲಿ ನಿರತವಾಗಿವೆ. ಈ ಜಗತ್ತಿಗೆ ದ್ವೈತ ಮತವನ್ನು ಪರಿಚಯಿಸಿದ ಆಚಾರ್ಯ ಮಧ್ವರು ಉಡುಪಿ ಜಿಲ್ಲೆಯ ಪಾಜಕದಲ್ಲಿ ಹುಟ್ಟಿದವರು. ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸಿ ಹಿಂದೂ ಧರ್ಮಕ್ಕೆ ಹೊಸ ಕೊಡುಗೆ ಕೊಟ್ಟವರು. ಕೃಷ್ಣ ಮಠವನ್ನು ಸ್ಥಾಪಿಸಿ ಕ್ಷೇತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ತಂದವರು. 

ಕನ್ನಡದ ನೆಲದಲ್ಲಿ ಹುಟ್ಟಿರುವ ಆಚಾರ್ಯ ಮಧ್ವರ ಹೆಸರನ್ನು ಜಯಂತಿ ಆಚರಿಸುವ ಮಹಾಪುರುಷರ ಪಟ್ಟಿಯಲ್ಲಿ ಕೈಬಿಟ್ಟ ಬಗ್ಗೆ ದ್ವೈತಮತ ಅನುಯಾಯಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೇರಳ ಮೂಲದ ಶಂಕರಾಚಾರ್ಯರ ಜಯಂತಿ ಆಚರಿಸುವ ಉತ್ತಮ ನಿರ್ಧಾರವನ್ನು ಸರಕಾರ ಕೈಗೊಂಡಿರುವಂತೆ ಕರಾವಳಿ ಮೂಲದ ಮಧ್ವಾಚಾರ್ಯರ ಜಯಂತಿಯನ್ನು ಆಚರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಸರಕಾರ ಬಿಡುಗಡೆ ಮಾಡಿರುವ ವಿವಿಧ ಜಯಂತಿಗಳ ಪಟ್ಟಿಯಲ್ಲಿ ಅನೇಕ ಗೊಂದಲಗಳಿವೆ. ಇಲ್ಲಿ ಸರಕಾರ ಕೃಷ್ಣ ಜಯಂತಿಯನ್ನು ಆಚರಿಸುವ ನಿರ್ಧಾರ ಕೈಗೊಂಡಿದೆ, ಆದರೆ ತನಗೆ ಪ್ರಿಯವಾದ ಶ್ರೀರಾಮ ಜಯಂತಿಯನ್ನು ಕೈಬಿಟ್ಟಿದೆ.

ಕನ್ನಡ ನೆಲದಲ್ಲಿ ಹುಟ್ಟಿರುವ ಪುರಾಣ ಪುರುಷ ಹನುಮಂತ ದೇವರ ಜಯಂತಿ ಪಟ್ಟಿಯಲ್ಲೇ ಇಲ್ಲ. ಹೀಗೆ ಅನೇಕ ಆಕ್ಷೇಪಾರ್ಹ ಸಂಗತಿಗಳನ್ನು ಒಳಗೊಂಡ ಈ ಪಟ್ಟಿಯ ಬಗ್ಗೆ ಅನೇಕರಲ್ಲಿ ಜಿಜ್ಞಾಸೆ ಮೂಡಿದೆ. ಈ ಹಿಂದೆ ನಾಡಗೀತೆ ಸಂಬಂಧ ಇದೇ ರೀತಿಯ ವಿವಾದ ಏರ್ಪಟ್ಟಿತ್ತು. ಜೈ ಭಾರತ ಜನನಿಯ ತನುಜಾತೆ ನಾಡಗೀತೆ ಎಂದು ಘೋಷಣೆಯಾದಾಗ ಶಂಕರ ರಾಮಾನುಜರ ಹೆಸರಿದೆ, ಆದರೆ ಕನ್ನಡ ನೆಲದ ಮಧ್ವಾಚಾರ್ಯರ ಹೆಸರನ್ನು ಕೈಬಿಡಲಾಗಿದೆ ಎಂದು ಪೇಜಾವರ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಇದೀಗ ಜಯಂತಿ ಆಚರಣೆಯ ಪಟ್ಟಿಯಲ್ಲೂ ಮಧ್ವಾಚಾರ್ಯರ ಹೆಸರು ಕಾಣೆಯಾಗಿದೆ. 

ಕ್ಲೀನ್ ಸಿಟಿ ಪ್ರಶಸ್ತಿ ಪಡೆದ ಊರಲ್ಲಿ ಇದೆಂಥಾ ಕೊಳಕು: ಗಬ್ಬೆದ್ದು ನಾರ್ತಿದೆ ಉಡುಪಿ..!

ದೇಶಾದ್ಯಂತ ಇರುವ ದ್ವೈತಮತ ಅನುಯಾಯಿಗಳಲ್ಲಿ ಇದು ಬೇಸರ ಮೂಡಿಸಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹಾಗೂ ಶಾಸಕ ರಘುಪತಿ ಭಟ್ ಭರವಸೆಯನ್ನು ನೀಡಿದ್ದಾರೆ. ಜಯಂತಿಗಳ ಆಚರಣೆಯಿಂದ ಯಾವುದೇ ಮಹಾಪುರುಷರ ಸಾಧನೆಗಳು ನಿರ್ಧಾರವಾಗುವುದಿಲ್ಲ. ಹಾಗಂತ ಕನ್ನಡ ನೆಲದ ಮಹಾಪುರುಷರನ್ನು ಅವಗಣನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕರಾವಳಿಗರು ಕೇಳುತ್ತಿದ್ದಾರೆ. ಜಯಂತಿಗಳ ಹೆಸರಲ್ಲಿ ಈಗ ಮತ್ತೊಂದು ವಿವಾದ ತಲೆ ದೋರಿದ್ದು ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು.

Latest Videos
Follow Us:
Download App:
  • android
  • ios