ತುಮಕೂರು(ಜ.08): ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬಿದ್ದಿರ್ತೀಯ ಗೊತ್ತಾ...? ಅಸಮರ್ಪಕ ಉತ್ತರ ನೀಡಿದ ಎಇಇ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದು ಹೀಗೆ.

"

ಗುರುವಾರ ನಡೆದ ಜಿ.ಪಂ. ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್‌ ಗುಬ್ಬಿ ವಿಭಾಗದ ಎಇಇ ರಂಗಸ್ವಾಮಿ ಅಸಮರ್ಪಕ ಉತ್ತರ ನೀಡುತ್ತಿದ್ದಂತೆ ಕೆರಳಿದ ಸಚಿವರು ರಾಸ್ಕಲ್‌ ಎಂದರಲ್ಲದೆ ಏಕವಚನದಲ್ಲೇ ಜಾಡಿಸಿದರು.

ಮುಂದೆ ಜೊತೆಯಾಗಿ ಸ್ಪರ್ಧಿಸೋ JDS ಜೋಡಿ: ಜಿಟಿಡಿ ಬಗ್ಗೆ ಮಹತ್ವದ ಸುಳಿವು ಕೊಟ್ಟ ಸಾರಾ..!

ತಮ್ಮ ಸೂಚನೆಯನ್ನು ನಿರ್ಲಕ್ಷಿಸಿದ ರಂಗಸ್ವಾಮಿ ವಿರುದ್ಧ ಕೆಂಡಾಮಂಡಲವಾದ ಮಾಧುಸ್ವಾಮಿ, ಎಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ. ಜ.4ರಂದು ನಾನು ಸೂಚನೆ ನೀಡಿದ್ದೆ, ಆದರೂ ಏಕೆ ನೀವು ಗುತ್ತಿಗೆದಾರನ ಕರೆಸಿ ಕೆಲಸ ಒಪ್ಪಿಸಲಿಲ್ಲ ಎಂದರಲ್ಲದೆ, ‘ಜಾಡಿಸಿ ಒದ್ದರೆ ಎಲ್ಲಿಗೋಗುತ್ತೀಯಾ ಗೊತ್ತಾ ನೀನು?, ರಾಸ್ಕಲ್‌, ಕತ್ತೆ ಕಾಯೋಕೆ ಬಂದಿದ್ದೀಯ ಇಲ್ಲಿಗೆ’ ಎಂದು ಗರಂ ಆದರು.

ನಿನ್ನ ಹೆಂಡತಿ ಸೀರೆ ತೊಳೆಯುವುದಕ್ಕೆ ಯಾವ ಸೋಪು ತೊಗೊಂಡು ಹೋಗುತ್ತೀಯ ಎಂದು ಛೇಡಿಸಿದ ಸಚವರು, ಇಂತಹ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್‌ ಮಾಡಿ ಎಂದು ಸಭೆಯಲ್ಲಿದ್ದ ಜಿಪಂ ಸಿಇಓಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಕೆಲಸ-ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ. ಬಹುತೇಕ ಎಲ್ಲಾ ಇಲಾಖೆಗಳ ಬಹಳಷ್ಟುಅನುದಾನ ಖರ್ಚೇ ಆಗಿಲ್ಲ, ಎಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ರಾಗಿಣಿಗೆ ಮತ್ತೊಂದಷ್ಟು ದಿನ ಜೈಲೇ ಗತಿ: ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

‘ಇರುವ ಹಾಗಿದ್ದರೆ ಇರಿ, ಇಲ್ಲಾ ಜಾಗ ಖಾಲಿ ಮಾಡಿ ಈಡಿಯಟ್‌... ರಾಸ್ಕಲ್’ ಎಂದು ಕೆಲವು ಅಧಿಕಾರಿಗಳನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡು, ಸಭೆಯಿಂದ ಹೊರಗೆ ಕಳುಹಿಸಿದ ಪ್ರಸಂಗವೂ ನಡೆಯಿತು.