ರಾಗಿಣಿಗೆ ಮತ್ತೊಂದಷ್ಟು ದಿನ ಜೈಲೇ ಗತಿ: ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ
ಜಾಮೀನು ನಿರೀಕ್ಷೆಯಲ್ಲಿದ್ದ ಸ್ಯಾಂಡಲ್‌ವುಡ್ ನಟಿ ರಾಗಿಣಿಗೆ ಮತ್ತೆ ನಿರಾಸೆ | ಸದ್ಯಕ್ಕಂತೂ ನಟಿಗೆ ಜೈಲು ವಾಸವೇ ಗತಿ
ಬೆಂಗಳೂರು(ಜ.08): ಸ್ಯಾಂಡಲ್‌ವುಡ್ ನಟಿ ರಾಗಿಣಿಗೆ ಜಾಮೀನು ವಿಚಾರದಲ್ಲಿ ಮತ್ತೆ ನಿರಾಸೆಯಾಗಿದೆ. ರಾಗಿಣಿ ಪ್ರಕರಣದಲ್ಲಿ ವಿಚಾರಣೆಯನ್ನು ಮುಂದಿನ ವಾರಕ್ಜೆ ಮುಂದೂಡಲಾಗಿದೆ.
ಡ್ರಗ್ಸ್ ಮಾರಾಟ ಜಾಲದೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಜಾಮೀನು ಅರ್ಜಿಯ ವರ್ಚುವಲ್ ವಿಚಾರಣೆ ಶುಕ್ರವಾರ ನಡೆಯುವುದಿತ್ತು.
ರಾಗಿಣಿಗೆ ಮದ್ವೆ ಪ್ರಪೋಸ್ ಮಾಡಿದ್ದು ನಿಜ; ಆರೋಪಿ ಶಿವಪ್ರಕಾಶ್ ಸ್ಪಷ್ಟನೆ!
ಇದೇ ವೇಳೆ ಯಾವುದೇ ಕಾರಣಕ್ಕೂ ರಾಗಿಣಿಗೆ ಜಾಮೀನು ನೀಡದಂತೆ ಬೆಂಗಳೂರಿನ ಕ್ರೈಮ್ ಬ್ರಾಂಚ್ ಪೊಲೀಸರು ಕೋರ್ಟಿಗೆ ಆಕ್ಷೇಪಣಾ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಪ್ರಕರಣದ ಆರೋಪಿಗಳಾದ ಶಿವಪ್ರಕಾಶ್, ಈರಪ್ಪ ಅವರ ಅರ್ಜಿ ವಿಚಾರಣೆಯೂ ಶುಕ್ರವಾರವೇ ನಡೆಯುವುದರಲ್ಲಿತ್ತು.
ಮಾದಕ ದ್ರವ್ಯ ಪೂರೈಕೆ ಜಾಲದೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಸೆ.4ರಂದು ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ ದ್ವಿವೇದಿ ಹೈಕೋರ್ಟಿನಲ್ಲಿ ಜಾಮೀನು ಸಿಗದೆ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ.ಎಲ್.ನಾಗೇಶ್ವರ ರಾವ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಸಿಸಿಬಿ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿ ವರದಿ ನೀಡುವಂತೆ ನೋಟಿಸ್ ಸಲ್ಲಿಸಿತ್ತು.