ನೀರಿಗಾಗಿ ಹೋರಾಟ ಮಾಡಲು ರಾಜೀನಾಮೆ ನೀಡುವುದಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಎಚ್ಚರಿಕೆ ನೀಡಿದರು. ಮಳೆ, ಬೆಳೆ ಇಲ್ಲದೆ ನನ್ನ ಮತ ಕ್ಷೇತ್ರ ಸೇರಿದಂತೆ ನಮ್ಮ ಉಪವಿಭಾಗವೇ ಭೀಕರ ಬರಗಾಲ ಮತ್ತು ಜಲಕ್ಷಾಮ ಅವರಿಸಿದ್ದರಿಂದ ಜನತೆ ತತ್ತರಿಸಿದ್ದು ನೀರಿಗಾಗಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.
ತುಮಕೂರು(ಆ.03): ನೀರಿಗಾಗಿ ಹೋರಾಟ ಮಾಡಲು ರಾಜೀನಾಮೆ ನೀಡುವುದಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಎಚ್ಚರಿಕೆ ನೀಡಿದರು.ಮಳೆ, ಬೆಳೆ ಇಲ್ಲದೆ ನನ್ನ ಮತ ಕ್ಷೇತ್ರ ಸೇರಿದಂತೆ ನಮ್ಮ ಉಪವಿಭಾಗವೇ ಭೀಕರ ಬರಗಾಲ ಮತ್ತು ಜಲಕ್ಷಾಮ ಅವರಿಸಿದ್ದರಿಂದ ಜನತೆ ತತ್ತರಿಸಿದ್ದು ನೀರಿಗಾಗಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.
ಶನಿವಾರ ತಾಲೂಕಿನ ಕವಣದಾಲ ಗ್ರಾಪಂ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜನತೆಯ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕುಡಿವ ನೀರಿಗಾಗಿ ಇದುವರೆಗೆ ತಾಲೂಕಿನಲ್ಲಿ 290 ಕೊಳವೆಬಾವಿ ಕೊರೆಸಲಾಗಿದೆ. ಆದರೂ ನೀರಿನ ಅಭಾವ ತಲೆದೂರಿದೆ. ನನ್ನ ಕ್ಷೇತ್ರ ಮಧುಗಿರಿ ಸೇರಿದಂತೆ ಪಾವಗಡ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿಯೂ ಕುಡಿವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಈ ಬಾರಿಯೂ ಸಕಾಲಕ್ಕೆ ಮಳೆ ಬಾರದೇ ರೈತರು, ಆಕಾಶದತ್ತ ಮುಖ ಮಾಡುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗಂಭೀರವಾಗಿ ಪರಿಗಣಿಸಿ:
ತಾಲೂಕಿನಲ್ಲಿ ಪಿಂಚಣಿ ಫಲಾನುಭವಿ ಗುರುತಿಸಲು ಕಂದಾಯ ಇಲಾಖೆಗೆ ಗುರಿ ನಿಗದಿ ಮಾಡಲಿದ್ದು, ಮುಂದಿನ ಆ.14ರಂದು ರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಜನಸ್ಪಂದನಾ ಸಭೆಯಲ್ಲಿ ಕನಿಷ್ಠ 200 ವಿವಿಧ ಪಿಂಚಣಿ ಆದೇಶ ಪತ್ರ ನೀಡಬೇಕು. ಇದರಿಂದ 10 ಸಾವಿರ ಪಿಂಚಣಿದಾರರು ಸಿಗಲಿದ್ದು, ಕ್ಷೇತ್ರಕ್ಕೆ ಪ್ರತಿ ಮಾಹೆ .1 ಕೋಟಿ ಅನುದಾನ ಸಿಗಲಿದೆ. ಇದು ಜನರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ನನ್ನ ಮತ್ತೊಂದು ಮುಖ ಅನಾವರಣಗೊಳ್ಳಲಿದೆ. ನನ್ನನ್ನು ನಿಮ್ಮವನೆಂದು ತಿಳಿಯಿರಿ. ಹಿಂದಿನ ಶಾಸಕರಂತೆ ರಾಜಕಾರಣಿ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಮಾರ್ಮಿಕವಾಗಿ ಎಚ್ಚರಿಸಿದರು.
52 ಪಿಂಚಣಿ ಪತ್ರ ವಿತರಣೆ:
ಕಾರ್ಯಕ್ರಮದಲ್ಲಿ 52 ಪಿಂಚಣಿ ಆದೇಶಪತ್ರ ವಿತರಿಸಿದ್ದು, ವಿವಿಧ ಪಿಂಚಣಿ, ಶಾಲಾ ಕೊಠಡಿ, ಆಟದ ಮೈದಾನ, ಗಂಗಾ ಕಲ್ಯಾಣ, ಮನೆ, ಪೌತಿ ಖಾತೆ, ಖಾತೆ ತಿದ್ದುಪಡಿ, ಸ್ಮಶಾನಕ್ಕೆ ಭೂಮಿ, ಸ್ವಯಂ ಉದ್ಯೋಗ, ವಿದ್ಯುತ್ ಪರಿವರ್ತಕ, ಸಮುದಾಯ ಭವನ, ಸಾಗುವಳಿ ಜಮೀನು ಸಕ್ರಮ, ಸ್ವತಃ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ದುರಸ್ತಿಗಾಗಿ ನೂರಾರು ಅರ್ಜಿಗಳು ಬಂದಿದ್ದವು. ಇವುಗಳಲ್ಲಿ ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸಿದ್ದಾರೆ.
ಫೇಸ್‌ಬುಕ್ ಕಮೆಂಟ್ ಮಾಡಿದ್ದಕ್ಕೆ ತಲ್ವಾರ್‌ನಿಂದ ಹಲ್ಲೆ..!
ತಹಸೀಲ್ದಾರ್ ನಂದೀಶ್, ತಾಪಂ ಇಒ ದೊಡ್ಡಸಿದ್ದಯ್ಯ, ಸದಸ್ಯ ದೊಡ್ಡಯ್ಯ, ಗ್ರಾಪಂ ಅಧ್ಯಕ್ಷೆ ಸಿದ್ದಗಂಗಮ್ಮ, ಉಪಾಧ್ಯಕ್ಷೆ ಅನುಸೂಯಮ್ಮ, ಪಿಡಿಒ ಅಲ್ಮಾಸ್, ಕಂದಾಯಾಧಿಕಾರಿ ಮಹೇಶ್, ಸಹಾಯಕರಾದ ರಾಮಗಿರಿ, ನವೀನ್, ಎಪಿಎಂಸಿ ಸದಸ್ಯ ಬಸವರಾಜು, ಚಂದ್ರಕುಮಾರ್, ಅಧಿಕಾರಿಗಳಾದ ಹೊನ್ನೇಶಪ್ಪ, ಸುರೇಶ್‌ರೆಡ್ಡಿ, ರಂಗಪ್ಪ, ಅನಂತರಾಜು, ನಾಗರಾಜು, ಕೆ.ಟಿ.ಸ್ವಾಮಿ, ಮುತ್ತುರಾಜ್, ಸಿಪಿಐ ಪ್ರಭಾಕರ್, ನೀರಾವರಿ ಹೋರಾಟಗಾರ ರಂಗಸ್ವಾಮಿ, ಮುಖಂಡರಾದ ವಿಶ್ವನಾಥ್, ರಫೀಕ್ ಇದ್ದರು.
ಕುಮಾರಸ್ವಾಮಿ ಸಿಎಂ ಆಗಿದ್ದರೆ 500 ಕೋಟಿ ತರುತ್ತಿದೆ
ಮುಂದಿನ 3 ವರ್ಷದಲ್ಲಿ ಕ್ಷೇತ್ರಕ್ಕೆ ಎತ್ತಿನಹೊಳೆ ನೀರು ಹರಿಯದಿದ್ದರೆ ಕ್ಷೇತ್ರದ ಜನ ಖಾಲಿಯಾಗುವ ಆತಂಕ ಎದುರಾಗಿದೆ. ಆದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ಈಗಾಗಲೇ ಎತ್ತಿನಹೊಳೆ ಕಾಮಗಾರಿ ಭರದಿಂದ ಸಾಗಿದೆ. ಪಟ್ಟಿಯಲ್ಲಿ ಕೈಬಿಟ್ಟಿದ್ದ ಕೆ.ಟಿ.ಹಳ್ಳಿ ಕೆರೆಯನ್ನೂ ಸೇರಿಸಿದ್ದು, ದೊಡ್ಡೇರಿ ಹೋಬಳಿಯ 5 ಕೆರೆಗಳು ಯೋಜನೆಯ ವ್ಯಾಪ್ತಿಗೆ ಸೇರಲಿವೆ. ಸರ್ಕಾರ ಬದಲಾದರೂ ಕ್ಷೇತ್ರದ ಅಭಿವೃದ್ಧಿಯ ವೇಗ ನಿಲ್ಲದಂತೆ ನೋಡಿಕೊಳ್ಳುತ್ತೇನೆ. ಕುಮಾರಸ್ವಾಮಿಯೇ ಸಿಎಂ ಆಗಿದ್ದರೆ ಮತ್ತೆ 500 ಕೋಟಿ ಅನುದಾನ ತರುತ್ತಿದ್ದೆ. ಅವರೇ ಸಣ್ಣ ನೀರಾವರಿ ಇಲಾಖೆಯಿಂದ ಅಂತರ್ಜಲ ವೃದ್ಧಿಗೆ 20 ಕೋಟಿ, ಗುಣಮಟ್ಟದ ವಿದ್ಯುತ್‌ಗಾಗಿ ತಾಲೂಕಿನಲ್ಲಿ 3 ಸಬ್ ಸ್ಟೇಷನ್ ಮಂಜೂರು ಮಾಡಿದ್ದಾರೆ ಎಂದು ವೀರಭದ್ರಯ್ಯ ತಿಳಿಸಿದರು.
