ತುಮಕೂರು: ಮಧುಗಿರಿ ಬಿಜೆಪಿ ಘಟಕದಿಂದ ರಾಷ್ಟ್ರಧ್ವಜಕ್ಕೆ ಅಪಮಾನ
ಮಧುಗಿರಿ ಬಿಜೆಪಿ ಫ್ಲೆಕ್ಸ್‌ನಲ್ಲಿ ರಾಷ್ಟ್ರಧ್ವಜ ಉಲ್ಟಾ ಆಗಿದ್ದು ಕೇಸರಿ- ಬಿಳಿ- ಹಸಿರು ಬದಲು, ಹಸಿರು-ಬಿಳಿ- ಕೇಸರಿ ಮುದ್ರಣ
ತುಮಕೂರು(ಆ.10): ಜಿಲ್ಲೆಯ ಮಧುಗಿರಿ ಬಿಜೆಪಿ ಘಟಕದಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ನಡೆದಿದೆ. ಹೌದು, ಮಧುಗಿರಿ ಬಿಜೆಪಿ ಘಟಕದಿಂದ ಫ್ಲೆಕ್ಸ್‌ನಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಮುದ್ರಿಸಿದೆ. ಮಧುಗಿರಿ ಬಿಜೆಪಿ ಫ್ಲೆಕ್ಸ್‌ನಲ್ಲಿ ರಾಷ್ಟ್ರಧ್ವಜ ಉಲ್ಟಾ ಆಗಿದೆ. ಕೇಸರಿ- ಬಿಳಿ- ಹಸಿರು ಬದಲು, ಹಸಿರು-ಬಿಳಿ- ಕೇಸರಿ ಮುದ್ರಣವಾಗಿದೆ.
ರಾಷ್ಟ್ರಧ್ವಜವನ್ನು ಉಲ್ಟಾ ಮುದ್ರಿಸಿದ ಫ್ಲೆಕ್ಸ್‌ಮಧುಗಿರಿ ಪಟ್ಟಣದಲ್ಲಿ ರಾರಾಜಿಸುತ್ತಿದೆ. ತ್ರಿವರ್ಣ ಧ್ವಜ ಯಾತ್ರೆ ಕಾರ್ಯಕ್ರಮದ ನಿಮಿತ್ತ ಮಧುಗಿರಿ ಬಿಜೆಪಿ ಘಟಕ ಈ ಫ್ಲೆಕ್ಸ್ ಹಾಕಿದೆ. ಮಧುಗಿರಿ ಬಿಜೆಪಿ ಘಟಕದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಿಎಂ ಬದಲಾವಣೆ: ಈ ಹಿಂದೆ ಮುಖ್ಯಮಂತ್ರಿ ಬದಲಿಸಿದ ಉದಾಹರಣೆ ಕೊಟ್ಟ ಬಿಜೆಪಿ ನಾಯಕ
ಆ. 14ರಂದು ನಡೆಯಲಿರುವ ಕಾರ್ಯಕ್ರಮದ ಪ್ರಚಾರದ ಫ್ಲೆಕ್ಸ್‌ನಲ್ಲಿ ಬಿಜೆಪಿ ರಾಷ್ಟ್ರಧ್ವಜವನ್ನು ಉಲ್ಟಾ ಮುದ್ರಿಸಿದೆ. ಬಿಜೆಪಿ ಮುಖಂಡ ಭೀಮಕುಂಟೆ ಹನುಮಂತೇಗೌಡ ಅವರು ಈ ಫ್ಲೆಕ್ಸ್‌ಅನ್ನು ಹಾಕಿದ್ದಾರೆ ಅಂತ ತಿಳಿದು ಬಂದಿದೆ.