ಮೇಡ್ ಇನ್ ಇಂಡಿಯಾ ವಿಮಾನ ಶೀಘ್ರ, ಹವಾಯಿ ಚಪ್ಪಲಿ ಹಾಕಿದವರೂ ಈಗ ವಿಮಾನದಲ್ಲಿ ಓಡಾಟ, ಮೋದಿ
ಏರ್ ಇಂಡಿಯಾವು ನೂರಾರು ವಿಮಾನಗಳಿಗಾಗಿ ವಿದೇಶಿ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಜತೆಗೆ, ಸದ್ಯದಲ್ಲೇ ದೇಶೀ ನಿರ್ಮಿತ ಪ್ರಯಾಣಿಕರ ವಿಮಾನಗಳು ಹಾರಾಟ ನಡೆಸುವ ದಿನವೂ ದೂರವಿಲ್ಲ ಎಂಬ ಸುಳಿವು ನೀಡಿದ ಪ್ರಧಾನಿ ನರೇಂದ್ರ ಮೋದಿ.
ಶಿವಮೊಗ್ಗ(ಫೆ.28): ಮುಂದಿನ ದಿನಗಳಲ್ಲಿ ದೇಶಕ್ಕೆ ಸಾವಿರಾರು ವಿಮಾನಗಳ ಅವಶ್ಯಕತೆ ಬೀಳಲಿದೆ. ಸದ್ಯ ನಾವು ಪ್ರಯಾಣಿಕರ ವಿಮಾನಗಳಿಗಾಗಿ ವಿದೇಶಗಳನ್ನು ಅವಲಂಬಿಸಿದ್ದೇವೆ. ಆದರೆ ಭಾರತೀಯರು ‘ಮೇಡ್ ಇನ್ ಇಂಡಿಯಾ’ ಪ್ರಯಾಣಿಕರ ವಿಮಾನದಲ್ಲಿ ಪ್ರಯಾಣಿಸುವ ದಿನವೂ ಶೀಘ್ರ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿ ಸುಮಾರು .7,165 ಕೋಟಿ ಮೌಲ್ಯದ ಹಲವು ಯೋಜನೆಗಳ ಉದ್ಘಾಟನೆ ಮತ್ತು ಕೆಲವು ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಏರ್ ಇಂಡಿಯಾವು ನೂರಾರು ವಿಮಾನಗಳಿಗಾಗಿ ವಿದೇಶಿ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಜತೆಗೆ, ಸದ್ಯದಲ್ಲೇ ದೇಶೀ ನಿರ್ಮಿತ ಪ್ರಯಾಣಿಕರ ವಿಮಾನಗಳು ಹಾರಾಟ ನಡೆಸುವ ದಿನವೂ ದೂರವಿಲ್ಲ ಎಂಬ ಸುಳಿವು ನೀಡಿದರು.
ಶಿವಮೊಗ್ಗ: ಯಡಿಯೂರಪ್ಪಗೆ ಮೋದಿ ಭಾವುಕ ಗೌರವ
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಾಗರಿಕ ವಿಮಾನ ಸೇವೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಹವಾಯಿ ಚಪ್ಪಲಿ ಹಾಕಿಕೊಂಡವರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬುದು ನಮ್ಮ ಗುರಿ. ಅದು ಸಾಧ್ಯವಾಗುತ್ತಿರುವುದನ್ನು ನಾನೀಗ ನೋಡುತ್ತಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 2014 ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೇವಲ 9 ವರ್ಷದಲ್ಲಿ ಇಷ್ಟೇ ಪ್ರಮಾಣದ ವಿಮಾನ ನಿಲ್ದಾಣಗಳನ್ನು ಹೊಸದಾಗಿ ನಿರ್ಮಿಸಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆ ಬಣ್ಣಿಸಿದರು.
ನಷ್ಟದ ಹೊರೆಯಿಂದಾಗಿ ಇತ್ತೀಚೆಗೆ ಖಾಸಗಿಯವರಿಗೆ ಮಾರಾಟವಾಗಿರುವ ದೇಶದ ಪ್ರತಿಷ್ಠಿತ ಏರ್ಇಂಡಿಯಾ ವಿಮಾನದ ವಿಚಾರವನ್ನೂ ಭಾಷಣದಲ್ಲಿ ಪ್ರಸ್ತಾಪಿಸಿದ ಅವರು, ಈ ಸರ್ಕಾರಿ ಏರ್ಲೈನ್ಸ್ನ ವೈಫಲ್ಯಕ್ಕೆ ಕಾಂಗ್ರೆಸ್ಸೇ ಕಾರಣ ಎಂದು ಆರೋಪಿಸಿದರು. 2014ಕ್ಕಿಂತ ಮೊದಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಏರ್ ಇಂಡಿಯಾವು ಋುಣಾತ್ಮಕ ವಿಚಾರಗಳಿಗಾಗಿ, ಹಗರಣಗಳು ಮತ್ತು ನಷ್ಟಗಳಿಂದಾಗಿಯೇ ಸುದ್ದಿಯಲ್ಲಿತ್ತು. ಆದರೆ ಇದೀಗ ಏರ್ ಇಂಡಿಯಾವು ಬದಲಾಗಿದೆ, ವಿಶ್ವದ ಮುಂದೆ ಭಾರತದ ಹೊಸ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ ಎಂದರು.
ಮಲೆನಾಡು ಹಾಡಿ ಹೊಗಳಿದ ಮೋದಿ: ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿದೆ ಎಂದ ಪ್ರಧಾನಿ
ಶಿವಮೊಗ್ಗ ಭಾಗದ ಜನರ ಬಹಳ ವರ್ಷಗಳ ಬೇಡಿಕೆಯಾದ ವಿಮಾನ ನಿಲ್ದಾಣ ಲೋಕಾರ್ಪಣೆ ನನಗೆ ಸಂತೋಷ ತಂದಿದೆ. ಅತ್ಯಂತ ಸುಸಜ್ಜಿತವಾದ ಮತ್ತು ಸುಂದರವಾದ ವಿಮಾನ ನಿಲ್ದಾಣ ಇದಾಗಿದ್ದು, ಇದರಿಂದ ಮಲೆನಾಡು ಹಾಗೂ ದೇಶದ ಇತರೆಡೆ ಸಂಪರ್ಕ ಸಾಧ್ಯವಿದೆ. ಕೈಗಾರಿಕೆ, ಕೃಷಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಲಾಭವಾಗಲಿದೆ. ಈ ವಿಮಾನ ನಿಲ್ದಾಣದಿಂದ ದೇಶ-ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಲೆನಾಡಿನ ಹೆಬ್ಬಾಗಿಲು ತೆರೆದಿದ್ದು, ಇದರಿಂದ ಇತರೆ ಕ್ಷೇತ್ರಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಈ ವಿಮಾನ ನಿಲ್ದಾಣ ಇನ್ನಷ್ಟುಬೆಳೆಯಲಿದ್ದು, ನೂರಾರು ವಿಮಾನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
9 ವರ್ಷದಲ್ಲಿ 74 ಏರ್‌ಪೋರ್ಟ್ ರೆಡಿ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 2014ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೇವಲ 9 ವರ್ಷದಲ್ಲಿ ಅಷ್ಟೇ ಪ್ರಮಾಣದ ವಿಮಾನ ನಿಲ್ದಾಣಗಳನ್ನು ಹೊಸದಾಗಿ ನಿರ್ಮಿಸಿದ್ದೇವೆ ಎಂದ ಪ್ರಧಾನಿ ನರೇಂದ್ರ ಮೋದಿ.