Asianet Suvarna News Asianet Suvarna News

ಮಠಕ್ಕೆ ಸಿದ್ದರಾಮಯ್ಯ ಕರೆಸಲು 58 ದಿನ ಅನ್ನಾಹಾರ ತ್ಯಜಿಸಿದ್ದ ಸ್ವಾಮೀಜಿ!

  • ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಮ್ಮ ಮಠಕ್ಕೆ ಕರೆಸಬೇಕು ಎಂದು ಶಪಥ 
  • ಸ್ವಾಮೀಜಿ ಅವರು ಈ ಸಂಬಂಧ 58 ದಿನಗಳ ಕಾಲ ಅನ್ನಾಹಾರ ತ್ಯಜಿಸಿದ್ದ ಸಂಗತಿ ಬೆಳಕಿಗೆ
Madagondeshwvara Swamiji Fasting 58 Days For Siddaramaiah snr
Author
Bengaluru, First Published Sep 28, 2021, 8:19 AM IST

ಜಮಖಂಡಿ (ಸೆ.28): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ತಮ್ಮ ಮಠಕ್ಕೆ ಕರೆಸಬೇಕು ಎಂದು ಶಪಥ ತೊಟ್ಟಿದ್ದ ಜಮ​ಖಂಡಿ ತಾಲೂಕಿನ ಜಕನೂರು ಗ್ರಾಮದ ಮದಗೊಂಡೇಶ್ವರ ಸಿದ್ದಾಶ್ರಮದ ಮಾದುಲಿಂಗ ಸ್ವಾಮೀಜಿ (madulinga Swamiji) ಅವರು ಈ ಸಂಬಂಧ 58 ದಿನಗಳ ಕಾಲ ಅನ್ನಾಹಾರ ತ್ಯಜಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. 

ಕಡೆಗೂ ಸಿದ್ದರಾಮಯ್ಯ ಅವರು ಸಿದ್ದಶ್ರೀ ಉತ್ಸವದಲ್ಲಿ ಸೋಮವಾರ ಭಾಗವಹಿಸುವ ಮೂಲಕ ಸ್ವಾಮೀಜಿಗಳ ಆಸೆ ಈಡೇರಿಸಿದ್ದಾರೆ. 58 ದಿನಗಳಿಂದ ನೀರು ಹಾಗೂ ಚಹಾ ಮಾತ್ರ ಸೇವಿಸುತ್ತಿದ್ದೆ. 

ಸಿದ್ದರಾಮಯ್ಯ ಅವರನ್ನು ಒಮ್ಮೆಯಾದರೂ ಮಠಕ್ಕೆ ಕರೆತರಲು ಪಣತೊಟ್ಟಿದ್ದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಮತೊಮ್ಮೆ ಮುಖ್ಯಮಂತ್ರಿಯಾಗಬೇಕು. ತಾವು ಪ್ರತಿಷ್ಠಾಪಿಸಲಿರುವ 12 ಜ್ಯೋತಿರ್ಲಿಂಗಗಳ ಉದ್ಘಾಟನೆಗೆ ಬರಬೇಕು ಎಂದು ಕೋರಿದರು.

ಚುನಾವಣೆಗೂ ಮುನ್ನ ನಾಯಕತ್ವಕ್ಕಾಗಿ ಡಿಕೆಶಿ -ಸಿದ್ದು ದಂಗಲ್ , ನಾಯಕರಿಂದ ಮಹತ್ವದ ಸಂದೇಶ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ (Chief Minister)  ಆಗಲಿ ಎಂದು ಆಶೀರ್ವಾದ ಮಾಡಿದ ಬರುವಂತೆ ಪಣ ತೊಟ್ಟು ಸತತ 58 ದಿನಗಳ ಕಾಲ ಅನ್ನಾಹಾರ ತ್ಯಜಿಸಿದ್ದರು. ಗ್ರಾಮದಲ್ಲಿ ಸಿದ್ದಶ್ರೀ ಉತ್ಸವ ಸೋಮವಾರ ನಡೆದಿದ್ದು, ಸೋಮವಾರ ನಡೆದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅವರು ಈ ವಿಷ​ಯ ಬಹಿರಂಗ​ಪ​ಡಿ​ದರು.

 ತಮ್ಮ ತಾಯಿ ಆಸೆಯಂತೆ ಒಮ್ಮೆಯಾದರೂ ತಮ್ಮ ಸಿದ್ದಾಶ್ರಮಕ್ಕೆ ಕರೆ ತರುವಂತೆ ಪಣತೊಟ್ಟಿದ್ದೆ ಎಂದರು. 

 ಮತ್ತೆ ಮುಖ್ಯಮಂತ್ರಿ ಆಗುವ ಇಂಗಿತ 

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಂದಿನ ಬಾರಿ ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಬರಬೇಕು ಎಂದು ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ ತಾಲೂಕಿನ ಜಕನೂರಿನ ಮದಗೊಂಡೇಶ್ವರದ ಸಿದ್ದಾಶ್ರಮದ ಮಾದಲಿಂಗ ಶ್ರೀಗಳು ಅಶೀರ್ವಾದ ಮಾಡಿದ್ದಾರೆ. ಇದಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಅವರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಮತ್ತೆ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಮತ್ತೆ ಶುರುವಾಯ್ತು ಸಿದ್ದರಾಮಯ್ಯ ಪತ್ರ ಸಮರ

ಸೋಮವಾರ ಜಕನೂರು ಗ್ರಾಮದ ಸಿದ್ದಾಶ್ರಮದ ಆವರಣದಲ್ಲಿ ನಡೆದ ಕನಕಶ್ರೀ ಉತ್ಸವ-2021 ಸಮಾರೋಪ ಸಮಾರಂಭದಲ್ಲಿ ಸಿದ್ದಾಶ್ರಮ ಶ್ರೀಗಳು ಸಿದ್ದಾರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಶೀರ್ವಾದ ಮಾಡಿದರು. ಅದಕ್ಕೆ ವೇದಿಕೆಯಲ್ಲಿ ಉತ್ತರ ನೀಡಿದ ಸಿದ್ದರಾಮಯ್ಯ ಅವರು, ಮುಂದಿನ ದಿನಗಳಲ್ಲಿ ಜನ ಬೆಂಬಲ ಸಿಕ್ಕಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಮಾದಲಿಂಗ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. ನಾನು ಮತ್ತೆ ಸಿಎಂ ಆದಲ್ಲಿ ರಾಜ್ಯವು ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುತ್ತೇನೆ. ಹೆಚ್ಚೆಚ್ಚು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಈ ಮೂಲಕ ತಾವಿನ್ನೂ ಮುಖ್ಯಮಂತ್ರಿಯಾಗುವ ಆಶಯ ವ್ಯಕ್ತಪಡಿಸಿದರು. ಇದಕ್ಕಾಗಿ ಶ್ರೀಗಳ ಮಾತನ್ನೇ ಅವರು ಉಲ್ಲೇಖಿಸಿ ಮಾತನಾಡಿದರು. ಸಿದ್ದಶ್ರೀ ಉತ್ಸವಕ್ಕೆ ಬಂದಿದ್ದು ಖುಷಿಯಾಗಿದೆ. ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಶ್ರೀಗಳು ಹೇಳಿದ್ದರು. ಅದಕ್ಕಾಗಿ ತಪ್ಪದೇ ಬಂದಿದ್ದೇನೆ. ಸ್ವಾಮೀಜಿ ಮುಂದಿನ ದಿನಗಳಲ್ಲಿ ಜನ ಬೆಂಬಲ ಸಿಕ್ಕು, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಆಶೀರ್ವಾದ ಮಾಡಿದ್ದಾರೆ. ಮುಂದಿನ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ಮತ್ತೇ ಹೆಚ್ಚೆಚ್ಚು ಕೆಲಸ ಮಾಡುತ್ತೇನೆ ಎಂದರು.

Follow Us:
Download App:
  • android
  • ios