ಶಿಡ್ಲಘಟ್ಟ (ನ.09):  ಈ ಹಿಂದೆ ನಾನು ಶಾಸಕನಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಯಾವುದೇ ಹಗರಣ, ಭ್ರಷ್ಟಾಚಾರ ಇಲ್ಲದೆ ಜನಸೇವೆ ಮಾಡಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಅವಕಾಶ ನೀಡಬೇಕೆಂದು ಮಾಜಿ ಶಾಸಕ ಎಂ. ರಾಜಣ್ಣ ಮನವಿ ಮಾಡಿದರು.

ನಗರದ ಕೆಜಿಎನ್‌ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರು ನೀಡಿದ ಸನಮಾನ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ ನಾನಿದ್ದ ಜೆಡಿಎಸ್‌ ಪಕ್ಷದ ಮುಖಂಡರು ಮಾಡಿದ ಕುತಂತ್ರದಿಂದ ಸ್ಪರ್ಧೆ ಮಾಡಲು ಆಗಲಿಲ್ಲ. ಇದೀಗ ರಾಷ್ಟ್ರೀಯ ಪಕ್ಷದ ಒಡನಾಟದಲ್ಲಿದ್ದು ಅಲ್ಪಸಂಖ್ಯಾತ ಬಂಧುಗಳ, ನನ್ನ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ದೀಪಾವಳಿ ನಂತರ ನನ್ನ ರಾಜಕೀಯ ನಿಲವು ಸ್ಪಷ್ಟಪಡಿಸುತ್ತೇನೆ. ಯಾವುದೇ ಕಾರಣಕ್ಕೂ ಜೆಡಿಎಸ್‌ ಸೇರುವುದಿಲ್ಲ ಎಂದರು.

'ಎಲ್ಲವೂ ಉಲ್ಟಾಪಲ್ಟಾ : ಎರಡೂ ಕಡೆ ಕೈ ಗೆಲುವು ಖಚಿತ' ..

ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧ :  ನಿಮ್ಮ ಇತ್ತೀಚಿನ ಒಡನಾಟ ಬಿಜೆಪಿ ಪಕ್ಷದ ಮುಖಂಡರು ಮತ್ತು ಮಂತ್ರಿಗಳೊಂದಿಗೆ ಹೆಚ್ಚಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ ರಾಜಣ್ಣ ನನ್ನ ಮತದಾರರ ಕೆಲಸಗಳಿಗೆ ಕಷ್ಟಗಳಿಗೆ ಸರಿಯಾದ ಪರಿಹಾರ ನೀಡಲು ಹೆಚ್ಚಿನ ಸೇವೆ ಮಾಡಲು ಅನಿವಾರ್ಯವಾಗಿದೆ. ತಾಲೂಕಿನಾದ್ಯಂತ ಕಾರ್ಯಕರ್ತರ ಸಮಾವೇಶಗಳನ್ನು ಆಯೋಜನೆ ಮಾಡುತ್ತಿದ್ದು ಎಲ್ಲರ ತೀರ್ಮಾನಕ್ಕೆ ಬರವುದಾಗಿ ತಿಳಿಸಿದರು.

ಅಬ್ಲೂಡು ಪಂಚಾಯತಿ ಅಧ್ಯಕ್ಷ ಕನಕ ಪ್ರಸಾದ್‌, ರಹಮತಲ್ಲಾ, ರೆಹಮಾನ್‌, ಆನೆಮಡಗು ಮುರಳಿ, ದೊನ್ನಹಳ್ಳಿ ರಾಮಣ್ಣ, ಹಸನ್‌ ಖಾನ್‌, ಆದೀಲ್‌ ಪಾಶಾ, ಅಲೀ, ಮಣಿಮಂಜುನಾಥ್‌ ಮುಂತಾದವರು ಇದ್ದರು.