Asianet Suvarna News Asianet Suvarna News

Mandya: MLA ಸುರೇಶ್‌ಗೌಡರಿಂದ ಕಾರ್ಯಕರ್ತರು ಬೀದಿಪಾಲು

ನಾನೂ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹೋರಾಟ ಮಾಡಿ ಸುರೇಶ್‌ಗೌಡರನ್ನು ಈ ಕ್ಷೇತ್ರದ ಶಾಸಕರನ್ನಾಗಿ ಮಾಡಿದ್ದೇವೆ. ಆದರೆ, ಎಲ್ಲರನ್ನೂ ಕಡೆಗಣಿಸಿ ಕೇವಲ ಮೂರ್ನಾಲ್ಕು ಗುತ್ತಿಗೆದಾರರಿಗೆ ಮಾತ್ರ ಉಪಯೋಗ ಮಾಡಿರುವ ಶಾಸಕ ಸುರೇಶ್‌ಗೌಡ ಸಾವಿರಾರು ಮಂದಿ ಕಾರ್ಯಕರ್ತರನ್ನು ಬೀದಿಪಾಲು ಮಾಡಿದರು ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಆರೋಪಿಸಿದರು.

LR Shiramegowda Slams MLA Suresh Gowda snr
Author
First Published Dec 5, 2022, 6:05 AM IST

 ನಾಗಮಂಗಲ (ಡಿ.05):  ನಾನೂ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹೋರಾಟ ಮಾಡಿ ಸುರೇಶ್‌ಗೌಡರನ್ನು ಈ ಕ್ಷೇತ್ರದ ಶಾಸಕರನ್ನಾಗಿ ಮಾಡಿದ್ದೇವೆ. ಆದರೆ, ಎಲ್ಲರನ್ನೂ ಕಡೆಗಣಿಸಿ ಕೇವಲ ಮೂರ್ನಾಲ್ಕು ಗುತ್ತಿಗೆದಾರರಿಗೆ ಮಾತ್ರ ಉಪಯೋಗ ಮಾಡಿರುವ ಶಾಸಕ ಸುರೇಶ್‌ಗೌಡ ಸಾವಿರಾರು ಮಂದಿ ಕಾರ್ಯಕರ್ತರನ್ನು ಬೀದಿಪಾಲು ಮಾಡಿದರು ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಆರೋಪಿಸಿದರು.

ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಾಯಿಗೋನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮೂಲ ಕಾರ್ಯಕರ್ತರು ಜೆಡಿಎಸ್‌ (JDS)  ಮತ್ತು ಸುರೇಶ್‌ಗೌಡರಿಂದ (Suresh gowda)  ದೂರವಾಗಿ ಈಗ ನನ್ನೊಂದಿಗೆ ಉಳಿದಿದ್ದಾರೆ ಎಂದರು.

ಆಪ್ತ ಗುತ್ತಿಗೆದಾರರ ಮೂಲಕ ಹಣ ಲೂಟಿ: ಕೇವಲ ಮೂರ್ನಾಲ್ಕು ಆಪ್ತ ಗುತ್ತಿಗೆದಾರರನ್ನು ಹತ್ತಿರ ಇಟ್ಟುಕೊಂಡು ಹಣ ಲೂಟಿ ಹೊಡೆಯುತ್ತಾ ದುಡಿದ ಕಾರ್ಯಕರ್ತರನ್ನು ದೂರ ತಳ್ಳಿದ್ದಾರೆ. ನಾನು ಎಂಎಲ್‌ಎ, ಎಂಪಿ, ಎಂಎಲ್‌ಸಿ ಆಗದಂತೆ ಕುತಂತ್ರ ನಡೆಸಿ ಅಧಿಕಾರದಿಂದ ದೂರವಿಟ್ಟರು. ಅಲ್ಲದೇ ನನಗೆ ಎಂಪಿ ಟಿಕೆಟ್‌ ಸಿಗುತ್ತದೆ ಎಂಬ ದುರುದ್ದೇಶದಿಂದ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕರೆತಂದು ಮಂಡ್ಯದಲ್ಲಿ ಬಲಿಪಶು ಮಾಡಿದರು. ತಾಲೂಕಿನ ಜನ ಸುರೇಶ್‌ಗೌಡ ಮತ್ತು ಚಲುವರಾಯಸ್ವಾಮಿ ಅವರ ಅಧಿಕಾರವನ್ನು ನೋಡಿದ್ದಾರೆ. ನನ್ನ ಅವಧಿಯ ಕೆಲಸಗಳನ್ನೂ ಸಹ ನೋಡಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು ಎಂಬುದನ್ನು ಕ್ಷೇತ್ರದ ಜನರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಚುನಾವಣೆಯಲ್ಲಿ ನನ್ನ ಗೆಲುವು ಶತಃಸಿದ್ಧ: ಅಧಿಕಾರದಲ್ಲಿದ್ದವರು ಸಮರ್ಪಕವಾಗಿ ಕೆಲಸ ಮಾಡಿದ್ದರೆ ಸಮಾಜ ಸೇವಕ ಫೈಟರ್‌ ರವಿ ಅವರು ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ತಾಲೂಕಿನಾದ್ಯಂತ ಏಕಕಾಲದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ನನ್ನ ಆಡಳಿತದ ಅವಧಿಯಲ್ಲಿ ಮಾಡಿದ್ದು ಬಿಟ್ಟರೆ, ನಂತರ ಬಂದವರು ಏನು ಮಾಡಿದ್ದಾರೆ ಎಂದು ಹೇಳಲಿ. ತಾಲೂಕಿನ ಅಭಿವೃದ್ದಿಗಾಗಿ ಜನರು ಈ ಬಾರಿ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡುತ್ತಾರೆ. ನಾನು ಈ ಚುನಾವಣೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇನೆ. ನಿಮ್ಮೆಲ್ಲರ ಪಾದಕ್ಕೂ ನಾನು ನಮಸ್ಕರಿಸುತ್ತೇನೆ. ತಾಲೂಕಿನ ಜನರು ನನ್ನನ್ನು ಈ ಬಾರಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಪಾಳ್ಯ ರಘು ಮತ್ತು ತಾ.ಪಂ ಮಾಜಿ ಸದಸ್ಯ ಹೇಮರಾಜ್‌ ಮಾತನಾಡಿ, ಶಿವರಾಮೇಗೌಡÜರನ್ನು ಈ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಮುಖಂಡರಾದ ಬಿದರಕೆರೆ ಮಂಜೇಗೌಡ, ಚೇತನ್‌, ದೇವರಾಜು, ಪ್ರಕಾಶ್‌, ಬೊಮ್ಮೇನಹಳ್ಳಿ ನಾಗಣ್ಣ, ಬ್ರಹ್ಮದೇವನಹಳ್ಳಿ ಸೋಮ, ಪಿಟ್ಟೇಗೌಡ, ಕೃಷ್ಣಮೂರ್ತಿ, ಶಶಿ ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಇದ್ದರು. 

ಹೋರಾಡಿ ಪಕ್ಷ ಗೆಲ್ಲಿಸುತ್ತೇವೆ 

ಚನ್ನಪಟ್ಟಣ : 2023ರ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧವಾಗಿದ್ದು, ನಮ್ಮ ಪ್ರಾಣ ಕೊಟ್ಟು ಹೋರಾಡಿ ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡುತ್ತೇವೆ. ಇದನ್ನು ಇಂದೇ ರಕ್ತದಲ್ಲಿ ಬರೆದುಕೊಡುತ್ತೇವೆ ನೀವು ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಜೆಡಿಎಸ್‌ ಕಾರ‍್ಯಕರ್ತರು ವಾಗ್ದಾನ ನೀಡಿದರು. ಸಿಂ.ಲಿಂ.ನಾಗರಾಜು ಅಂತಿಮ ದರ್ಶನಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರನ್ನು ನೋಡಿ ಭಾವುಕರಾದ ಕಾರ‍್ಯಕರ್ತರು ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಕೈಬಿಡದಂತೆ ದೇವೇಗೌಡರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ‍್ಯಕರ್ತರು, ನೀವು ನಿಮ್ಮ ಆರೋಗ್ಯ ನೋಡಿಕೊಂಡು ನೆಮ್ಮದಿಯಾಗಿರುವ ಅಪ್ಪಾಜಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದು ನಮ್ಮ ಜವಬ್ದಾರಿ. ಇದಕ್ಕೆ ಕಬ್ಬಾಳಮ್ಮನೇ ಸಾಕ್ಷಿ. ಯಾರು ಏನೇ ಮಾಡಿದರು ಎಚ್‌ಡಿಕೆ ಸಿಎಂ ಆಗುವುದನ್ನು ತಪ್ಪಿಸಲು ಆಗುವುದಿಲ್ಲ ಎಂದು ಅಭಯ ನೀಡಿದರು. ಕಾರ‍್ಯಕರ್ತರ ಮಾತು ಕೇಳಿ ದೇವೇಗೌಡರು ಭಾವುಕರಾಗಿ ಕಾರ‍್ಯಕರ್ತರಿಗೆ ಕೈಮುಗಿದು ಅಲ್ಲಿಂದ ತೆರಳಿದರು.

ದಲಿತ​ರನ್ನು ಸಿಎಂ ಮಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ: ಸಂಸದ ಸು​ರೇಶ್‌

ಮುಂದಿನ ದಿನಗಳಲ್ಲಿ ಎಚ್‌ಡಿಕೆ ಭೇಟಿ: ರಾಜ್ಯದ ಬಡ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪಂಚರತ್ನ ಯೋಜನೆ ರೂಪಿಸಿದ್ದು, ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಅವರು ಸಿಂ.ಲಿಂ.ನಾಗರಾಜು ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅವರು ಭೇಟಿ ನೀಡಿಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದರು. 

ಜೆಡಿಎಸ್‌ ಮುಖಂಡ ಸಿಂ.ಲಿಂ. ನಾಗರಾಜು ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸಲು ಎಚ್‌ಡಿಕೆ ಶ್ರಮಿಸುತ್ತಿದ್ದಾರೆ. ಕೋಲಾರ, ಮುಳಬಾಗಿಲು, ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಸಾಗುತ್ತಿರುವುದರಿಂದ ಕುಮಾರಸ್ವಾಮಿ ಅಲ್ಲಿದ್ದಾರೆ. ಅವರು ಬಾರಲಿಕ್ಕೆ ಆಗದ ಕಾರಣ ಇಂದು ನೀವು ಹೋಗಿ ಮುಂದಿನ ದಿನಗಳಲ್ಲಿ ನಾನು ಹೋಗಿ ಅವರ ಕುಟುಂಬದವರನ್ನು ಭೇಟಿಯಾಗಿ ಬರುತ್ತೇನೆ ಎಂದು ಅವರು ತಿಳಿಸಿದ್ದಾರೆ ಎಂದರು. 

Ramanagara: ಮಾಗಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯೇ ಇಲ್ಲ!

ಸಿಂ.ಲಿಂ.ನಾಗರಾಜು ನನಗೆ ಆತ್ಮೀಯರಾಗಿದ್ದರು. ಈಗೊಂದು ಎರಡು ವಾರಗಳ ಹಿಂದೆ ನಮ್ಮ ಮನೆಗೆ ಬಂದಿದ್ದ ಅವರು ಯಾವುದೋ ಮದುವೆ ಕಾರ‍್ಯಕ್ರಮಕ್ಕೆ ಬರಲೇಬೇಕು ಎಂದು ಆಹ್ವಾನಿಸಿದ್ದರು. ನಾನು ಬರುತ್ತೇನೆ ಎಂದು ತಿಳಿಸಿದ್ದೆ. ಆದರೆ, ಅವನ ಪಾರ್ಥೀವ ಶರೀರ ನೋಡಲು ಬರುವಂತಾಗಿದೆ. ಅವರ ಸಾವು ಒಂದು ದುರಂತ. ಈ ವಯಸ್ಯಿನಲ್ಲಿ ಇಂಥವುಗಳನ್ನು ನೋಡಬೇಕಾಗಿ ಬಂದಿರುವುದು ನೋವಿನ ಸಂಗತಿ. ಆ ಭಗವಂತ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

Follow Us:
Download App:
  • android
  • ios