Asianet Suvarna News Asianet Suvarna News

ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕಡಿಮೆ ಕೋವಿಡ್‌ ಮರಣ

ಕೊರೋನಾ ಮಹಾಮಾರಿ ಕೊಂಚ ಇಳಿದಿದೆ. ಆದರೂ ಅಪಾಯ ಮಾತ್ರ ಇಳಿದಿಲ್ಲ. ಇದರ ನಡುವೆ ಗುಡ್ ನ್ಯೂಸ್ ಎಂದರೆ ಉಡಪಿ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಕೋವಿಡ್ ಡೆತ್ ಆಗಿದೆ 

Lowest number Of COvid Death in Udupi snr
Author
Bengaluru, First Published Oct 11, 2020, 12:22 PM IST

ಉಡುಪಿ (ಅ.11):  ಕೋವಿಡ್‌ 19 ನಿಂದ ಜಿಲ್ಲೆಯಲ್ಲಿ ಮರಣ ಹೊಂದಿರುವವರ ಪ್ರಮಾಣ ರಾಜ್ಯದಲ್ಲಿಯೇ ಅತ್ಯಂತ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದ್ದಾರೆ.

ಶನಿವಾರ ಜಿಲ್ಲೆಯ ಕೋವಿಡ್‌ ಫ್ರಂಟ್‌ಲೈನ್‌ ವಾರಿಯರ್ಸ್‌ ಒತ್ತಡಕ್ಕೊಳಗಾಗದೆ, ಮನೋಸ್ಥೆರ್ಯದಿಂದ ಕೆಲಸ ನಿರ್ವಹಿಸುವ ಬಗ್ಗೆ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 3 ಜಿಲ್ಲೆಗಳಲ್ಲಿ ಈ ಸಾಧನೆಯಾಗಿದ್ದು, ಉಳಿದರೆಡು ಜಿಲ್ಲೆಗಳಲ್ಲಿ ವಿಷಮ ಪರಿಸ್ಥಿತಿಯಲ್ಲಿ, ಸಾವಿನಂಚಿನಲ್ಲಿದ್ದ ರೋಗಿಗಳನ್ನು, ಬೇರೆಡೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಉಡುಪಿ ಜಿಲ್ಲೆಯಲ್ಲಿ ಅಂತಹ ರೋಗಿಗಳಿಗೆ ಇಲ್ಲೇ ಚಿಕಿತ್ಸೆ ನೀಡಿ ಜೀವ ಉಳಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯ ಕೋವಿಡ್‌ ಫ್ರಂಟ್‌ಲೈನ್‌ ವಾರಿಯರ್ಸ್‌ಗಳು ಎಂದು ಅವರು ಹೇಳಿದರು.

ಯೂಟ್ಯೂಬ್‌ ನೋಡಿ ಸ್ಯಾನಿಟೈಸರ್‌ ತಯಾರಿಕೆ ಪಾಠ: ಸಾರ್ಥಕತೆ ಮೆರೆದ ಶಿಕ್ಷಕರ

ಅಲ್ಲದೆ ಕೊರೋನಾ ವಾರಿಯರ್ಸ್‌ಗಳು ತಮ್ಮ ಸುರಕ್ಷತೆಗೂ ಹೆಚ್ಚಿನ ಮುಂಜಾಗ್ರತೆ ವಹಿಸಿದ್ದು, ಇದುವರೆಗೆ ಕೊರೋನಾ ವಾರಿಯರ್ಸ್‌ ಮರಣ ಹೊಂದಿಲ್ಲ. ಹಲವು ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ಅಪಪ್ರಚಾರ ನಡೆದರೂ, ವಿಚಲಿತರಾಗದೆ ಕೆಲಸ ಮಾಡಿದ್ದು, ಪ್ರಸ್ತುತ ಕೋವಿಡ್‌ ಲಕ್ಷಣಗಳಿರುವ ರೋಗಿಗಳ ಸಂಖ್ಯೆ, ತೀರ ವಿಷಮ ಸ್ಥಿತಿಯ ರೋಗಿಗಳ ಸಂಖ್ಯೆ ಸಹ ಕಡಿಮೆಯಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಾಹೆಯ ಉಪ ಕುಲಪತಿ ಲೆ.ಜನರಲ್‌ ಡಾ. ವೆಂಕಟೇಶ್‌, ರೋ. ಅಭಿನಂದನ ಶೆಟ್ಟಿ, ಜಿಪಂ ಸಿಇಒ ಡಾ. ನವೀನ್‌ ಭಟ್‌, ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಕುಂದಾಪುರ ಎಸಿ ರಾಜು, ಡಿಎಎಚ್‌ಒ ಡಾ. ಸುಧೀರ್‌ಚಂದ್ರ ಸೂಡಾ, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್‌ ಶೆಟ್ಟಿಉಪಸ್ಥಿತರಿದ್ದರು. ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಡಾ. ಪ್ರಶಾಂತ ಭಟ್‌ ಸ್ವಾಗತಿಸಿದರು. ಡಾ. ಪ್ರೇಮಾನಂದ್‌ ವಂದಿಸಿದರು.

Follow Us:
Download App:
  • android
  • ios