ಕೊಪ್ಪಳ: ಖನಿಜ ಪತ್ತೆಗಾಗಿ ಕೆಳಹಂತದಲ್ಲಿ ವಿಮಾನ ಹಾರಾಟ!
ಕೊಪ್ಪಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕೆಳಮಟ್ಟದಲ್ಲಿ ವಿಮಾನಗಳು ಹಾರಾಟ ಮಾಡುತ್ತಿರುವುದು ಯಾಕೆ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಈಗ ಉತ್ತರ ದೊರೆತಿದೆ. ಖನಿಜ ಪತ್ತೆಗಾಗಿ ವಿಮಾನ ಹಾರಾಟ ಮಾಡುತ್ತಿದ್ದು, ಅನುಮತಿಯನ್ನು ಪಡೆದೇ ಈ ಕಾರ್ಯ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಕೊಪ್ಪಳ (ಮೇ.29) : ಕೊಪ್ಪಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕೆಳಮಟ್ಟದಲ್ಲಿ ವಿಮಾನಗಳು ಹಾರಾಟ ಮಾಡುತ್ತಿರುವುದು ಯಾಕೆ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಈಗ ಉತ್ತರ ದೊರೆತಿದೆ. ಖನಿಜ ಪತ್ತೆಗಾಗಿ ವಿಮಾನ ಹಾರಾಟ ಮಾಡುತ್ತಿದ್ದು, ಅನುಮತಿಯನ್ನು ಪಡೆದೇ ಈ ಕಾರ್ಯ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರು ‘ಕನ್ನಡಪ್ರಭ’ದಲ್ಲಿ ಈ ಕುರಿತು ಪ್ರಕಟವಾದ ವರದಿಗೆ ಪ್ರತಿಕ್ರಿಯೆ ನೀಡಿ, ವಿಮಾನ ಹಾರಾಟ ನಿಯಮಾನುಸಾರ ಮತ್ತು ಅನುಮತಿಯೊಂದಿಗೆ ನಡೆಯುತ್ತಿದೆ ಎಂದಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನದ ಅಡಿಯಲ್ಲಿ ಭೂಮಿಯಲ್ಲಿ ಇರುವ ಖನಿಜ ಪತ್ತೆ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಖನಿಜ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಈಗ ವಿಮಾನಗಳ ಮೂಲಕ ನಿಗದಿತ ಪ್ರದೇಶದಲ್ಲಿ ಶೋಧನೆ ಮಾಡಲಾಗುತ್ತಿದೆ. ಪತ್ತೆಯಾಗಿರುವ ಖನಿಜದ ಕುರಿತು ಮತ್ತಷ್ಟುಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಕೆಆರ್‌ಪಿಪಿ ಬಾಗಿಲಿಗೆ ಕಾಂಗ್ರೆಸ್, ಬಿಜೆಪಿ ಸದಸ್ಯರು: ನಗರಸಭೆ ತೆಕ್ಕೆಗೆ ತೆಗೆದುಕೊಳ್ಳಲು ರೆಡ್ಡಿ ಪ್ಲಾನ್!
ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದಲೇ ಈ ವಿಮಾನಗಳು ಹಾರಾಟ ನಡೆಸುತ್ತವೆ. ಕೇಂದ್ರ ಸರ್ಕಾರ ಅನುಮತಿ ನೀಡಿದೆ. ನಿಯಮಾನುಸಾರ ಕಾರ್ಯಾಚರಣೆ ನಡೆಯುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ : ರೆಡ್ಡಿ ಭರವಸೆ
ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಕೆಳಮಟ್ಟದಲ್ಲಿಯೇ ವಿಮಾನಗಳು ಹಾರಾಟ ನಡೆಸುತ್ತಿವೆ. ಅದು ಒಂದೆರಡು ಬಾರಿಯಲ್ಲ ಶುರುವಾದರೆ ಹತ್ತಾರು ಬಾರಿ ಪದೇ ಪದೇ ಹಾರಾಡುತ್ತವೆ.
ತಾಲೂಕಿನ ಬೆಟಗೇರಿ ಗ್ರಾಮದ ಮಾರ್ಗವಾಗಿ ತುಂಗಭದ್ರಾ ನದಿ ದಾಟುವ ವಿಮಾನಗಳು ಹಡಗಲಿ, ದಾವಣಗೆರೆ ಮಾರ್ಗದಲ್ಲಿಯೇ ಸುತ್ತಾಡುತ್ತವೆ. ಇನ್ನು ಕೆಲವೊಂದು ವಿಮಾನಗಳು ನಗರ ವ್ಯಾಪ್ತಿಯ ಮೂಲಕ ಹುಲಿಗೆಮ್ಮ ದೇವಸ್ಥಾನ ಮಾರ್ಗವಾಗಿ ಆನೆಗೊಂದಿ ಭಾಗದಲ್ಲಿ ಪ್ರಯಾಣಿಸುತ್ತವೆ. ಅವುಗಳು ಎಷ್ಟುಕೆಳಗೆ ಹಾರುತ್ತವೆ ಎಂದರೇ ತಮ್ಮ ಕೈಯಲ್ಲಿರುವ ಮೊಬೈಲ್‌ಗಳಲ್ಲಿಯೇ ಹಾರುವ ವಿಮಾನದ ಫೋಟೋ ಸೆರೆ ಹಿಡಿದಿದ್ದಾರೆ. ವೀಡಿಯೋ ಮಾಡಿದ್ದಾರೆ. ವಿಮಾಗಳ ಬಣ್ಣಸೇರಿದಂತೆ ಎಲ್ಲವೂ ಸ್ಪಷ್ಟವಾಗಿ ಕಾಣಿಸುವಷ್ಟುಕೆಳಮಟ್ಟದಲ್ಲಿ ಹಾರಾಟ ಮಾಡುತ್ತಿವೆ.
ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ತಾಗುವಷ್ಟುಕೆಳಗೆ ಹಾರಾಟ ಮಾಡಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ದೊಡ್ಡ ದೊಡ್ಡ ಮರಗಳ ಪಕ್ಕದಲ್ಲಿಯೇ ಹಾದು ಹೋಗುತ್ತವೆ. ಕೆಲವೊಂದು ಬಾರಿ ಅವು ಕೆಳಗೆ ಬರುವುದನ್ನು ನೋಡಿ ಇಲ್ಲಿಯೇ ಇಳಿಯಬಹುದು, ಬೀಳಬಹುದು ಎನ್ನುವಂತೆ ಜನರಿಗೆ ಭಾಸವಾಗಿ ಓಡಾಡಿದ್ದು ಉಂಟು. ಇವುಗಳ ಬೆನ್ನು ಹತ್ತಿ ವೀಡಿಯೋ ಮಾಡಿದ್ದು ಉಂಟು. ಊರಾಚೆ ಇಳಿದೆ ಬಿಡುತ್ತದೆ ಎಂದು ಬೈಕ್ ತೆಗೆದುಕೊಂಡು ಹೋಗಿ ಬೆನ್ನು ಹತ್ತುವ ಪ್ರಯತ್ನ ಜನರು ಮಾಡುತ್ತಿದ್ದಾರೆ.
ಬೆಟಗೇರಿಯಲ್ಲಿ ಕಳೆದೆರಡು ದಿನಗಳ ಹಿಂದೆ ಮಾಳಿಗೆಗೆ ತಾಗಿಯೇ ಬಿಡುತ್ತದೆ ಎಂದು ಹಾರಿ ಹೋಗುವುದನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದರು. ಅದಾದ ಮೇಲೆ ಬೆಟಗೇರಿ ಗ್ರಾಮದ ಬಳಿಯ ಹಾರಾಟ ಕಡಿಮೆಯಾಗಿದೆ.