ದೇವರ ಹುಂಡಿಯಲ್ಲಿ ಸಿಕ್ತು ರಕ್ತದಲ್ಲಿ ಬರೆದ ಪ್ರೇಮ ಪತ್ರ ! ತಾಳಿಯೂ ಇತ್ತು !
ದೇವರ ಹುಂಡಿಗೆ ಹಣ ಹಾಕುವುದು, ಚಿನ್ನ ಬೆಳ್ಳಿ ಸಾಮಾನ್ಯ ಆದರೆ ರಾಜ್ಯದ ಪ್ರಸಿದ್ಧ ದೇವಾಲಯ ಒಂದರ ಕಾಣಿಕೆ ಹುಂಡಿಯಲ್ಲಿ ರಕ್ತದಲ್ಲಿ ಬರೆದ ಪ್ರೇಮ ಪತ್ರ ಪತ್ತೆಯಾಗಿದೆ. ಜೊತೆಗೆ ತಾಳಿಯೂ ಸಿಕ್ಕಿದೆ.
ಚಿಕ್ಕಬಳ್ಳಾಪುರ [ಜ.13]: ರಕ್ತದಲ್ಲಿ ದೇವರಿಗೇ ಬರೆದ ಪ್ರೇಮ ಪತ್ರ, ಹಿಂದುಳಿದ ತಾಲೂಕುಗಳನ್ನು ಅಭಿವೃದ್ಧಿ ಪಡಿಸಿ ಎಂದು ಬೇಡಿಕೊಂಡು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಬರೆದ ವಿಳಾಸವೇ ಇಲ್ಲದ ಪತ್ರ, ಈಗಾಗಲೇ ಬ್ಯಾನ್ ಆಗಿರುವ 500 ಮುಖ ಬೆಲೆಯ ಹಳೆಯ ನೋಟುಗಳು, ಮಕ್ಕಳು ಆಟವಾಡಿಕೊಳ್ಳುವ 2 ಸಾವಿರ ಮುಖಬೆಲೆಯ 7 ನೋಟುಗಳು... ಇವು ವಿಶ್ವ ಪ್ರಸಿದ್ಧ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯದ ಹುಂಡಿಯಲ್ಲಿ ಕಂಡು ಬಂದ ಸರಂಜಾಮುಗಳು. ಹುಂಡಿಯಲ್ಲಿ ಬಿದ್ದಿರುವ ಹಣಕ್ಕಿಂತ ಇಂತಹ ಪತ್ರಗಳೇ ಅಧಿಕಾರಿಗಳು ಸೇರಿದಂತೆ ಮುಜರಾಯಿ ಇಲಾಖೆಯ ಗಮನ ಸೆಳೆದವು.
ರಕ್ತದಲ್ಲಿ ದೇವರಿಗೆ ಪ್ರೇಮ ಪತ್ರ!: ಹೃದಯ ಚಿಹ್ನೆಯನ್ನು ರಕ್ತಲ್ಲಿ ಬರೆದು ತನ್ನನ್ನು ಕಾಪಾಡುವಂತೆ ದೇವರಿಗೆ ಮನವಿ ಮಾಡಿರುವ ಪತ್ರವೊಂದು ಎಣಿಕೆ ವೇಳೆ ಹುಂಡಿಯಲ್ಲಿ ದೊರೆತಿದೆ. ಹೃದಯದ ಚಿಹ್ನೆಯ ಮಧ್ಯದಲ್ಲಿ ಎಸ್‌ಸಿ ಎಂದು ಬರೆಯಲಾಗಿದ್ದು, ಇದು ಪತ್ರ ಬರೆದ ವ್ಯಕ್ತಿ ಮತ್ತು ಆತರ ಪ್ರೇಯಸಿಯ ಮೊದಲ ಅಕ್ಷರಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಹಿಂದುಳಿದ ತಾಲೂಕುಗಳು ಅಭಿವೃದ್ಧಿ ಮಾಡಿ: ಇನ್ನು ಮತ್ತೊಬ್ಬ ವ್ಯಕ್ತಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದು, ಆಂಧ್ರದ ಗಡಿಗೆ ಹೊಂದಿಕೊಂಡಿರುವ ಮತ್ತು ತೀವ್ರ ಹಿಂದುಳಿದಿರುವ ತಾಲೂಕುಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ, ಅಭಿವೃದ್ಧಿ ಮಾಡಲು ಗಮನ ಹರಿಸುವಂತೆ ಮನವಿ ಮಾಡಲಾಗಿದೆ.
ಮದುವೆಯಾಗೆಂದು ಶಾಲೆಯಲ್ಲೇ ಶಿಕ್ಷಕಿಯ ಎಳೆದಾಡಿದ ಪೇದೆ..!...
ಜಿಲ್ಲೆಯಲ್ಲಿ ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲೂಕುಗಳು ತೀವ್ರ ಹಿಂದುಳಿ ದಿದ್ದು, ಈ ತಾಲೂಕುಗಳಲ್ಲಿ ಶುದ್ಧ ಕುಡಿ ಯುವ ನೀರು ರಸ್ತೆ ಸೇರಿದಂತೆ ಇತರೆ ಮೂಲ ಭೂತ ಸೌಲಭ್ಯಗಳಿಲ್ಲದೆ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲಾಡಳಿತದ ಗಮನಕ್ಕೆ ಈ ಕುರಿತು ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕೂಡಲೇ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಪ್ರದೇಶಗಳ ಅಭಿವೃದ್ಧಿ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಮುಸ್ಲಿಂ ಯುವತಿ ಕೈ ಹಿಡಿದ ಹಿಂದೂ ಯುವಕ : ಸೌಹಾರ್ದತೆಯ ವಿವಾಹ...
ಹುಂಡಿಯಲ್ಲಿ 14 ಲಕ್ಷ ನಗದು, ಚಿನ್ನದ ತಾಳಿ: ಭೋಗನಂದೀಶ್ವರ ದೇವಾಲಯದ ಹುಂಡಿಯಲ್ಲಿ ಕಳೆದ ಒಂದು ವರ್ಷದಿಂದ ಭಕ್ತರು ದೇವರಿಗೆ ಸಮರ್ಪಿಸಿರುವ ಕಾಣಿಕೆ 14 ಲಕ್ಷ ರು. ನಗದಿನ ಜೊತೆಗೆ ಚಿನ್ನದ ತಾಳಿಯೊಂದನ್ನು ಹುಂಡಿಗೆ ಹಾಕಲಾಗಿದೆ. ಜೊತೆಗೆ ಬೆಳ್ಳಿಯ ನಾಗರ, ಬೆಳ್ಳಿಯ ಕಡಗ ಮತ್ತು ಬೆಳ್ಳಿಯ ಸರವೊಂದನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ.