'ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ ಲವ್‌ ಜಿಹಾದ್‌ ಪ್ರಕರಣ'

ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಿಂದೂ ಹೆಣ್ಣು ಮಕ್ಕಳು ದಾರಿ ತಪ್ಪಬಾರದು, ಲವ್‌ ಜಿಹಾದ್‌ ಪ್ರೇಮ ಪ್ರಕರಣವಲ್ಲ, 18-20 ವರ್ಷದ ಅಪ್ರಾಪ್ತ ಹುಡುಗಿಯರ ತಲೆ ಕೆಡಿಸಿ ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹೇಳಿದರು.

love jihad Cases Increased in tumkur Says BJP Leader snr

ತುಮಕೂರು (ಏ.21) :  ಜಿಲ್ಲೆಯಲ್ಲಿ ಲವ್‌ ಜಿಹಾದ್‌ ಪ್ರಕರಣ ಹೆಚ್ಚುತ್ತಿವೆ, ವಾರದಲ್ಲಿಯೇ ಮೂರು ಪ್ರಕರಣ ನಡೆದಿದ್ದರು, ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ ಎಂದು ತುಮಕೂರು ಬಿಜೆಪಿ ಉಪಾಧ್ಯಕ್ಷ ಚಂದ್ರಶೇಖರ್‌ ಆರೋಪಿಸಿದರು. 

ನಗಗರದಲ್ಲಿ  ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿಂದೂ ಹೆಣ್ಣು ಮಕ್ಕಳು ದಾರಿ ತಪ್ಪಬಾರದು, ಲವ್‌ ಜಿಹಾದ್‌ ಪ್ರೇಮ ಪ್ರಕರಣವಲ್ಲ, 18-20 ವರ್ಷದ ಅಪ್ರಾಪ್ತ ಹುಡುಗಿಯರ ತಲೆ ಕೆಡಿಸಿ ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದರು.

'ಲವ್‌ ಜಿಹಾದ್‌ ಸತ್ಯ; ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ' ...

ಹಿಂದೂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್‌ ಮಾಡಲಾಗುತ್ತಿದೆ, 70 ಹೆಣ್ಣು ಮಕ್ಕಳು ಮದುವೆಯಾಗಿದ್ದಾರೆ. ಸೈಬರ್‌ ಕ್ರೈಂಗೆ ದೂರು ನೀಡಿದರು ಕ್ರಮ ಕೈಗೊಳ್ಳುತ್ತಿಲ್ಲ ಸಲ್ಮಾನ್‌ ಖಾನ್‌ ಹೆಸರಿನಲ್ಲಿ ಸಂಘ ಇದ್ಯೆಯಂತೆ ಅದರಲ್ಲಿ ಹುಡುಗರು ಇದೆಲ್ಲ ಮಾಡುತ್ತಿದ್ದಾರೆ, ಮುಸ್ಲಿಂರನ್ನು ಅಸಹ್ಯವಾಗಿ ನಡೆಸಿಕೊಂಡಿಲ್ಲ, ಇನ್ನತ್ತು ವರ್ಷದಲ್ಲಿ ಪಾಕಿಸ್ತಾನ ಕೇಳುವುದಿಲ್ಲ ನಮ್ಮನ್ನೇ ಬುರ್ಕಾ ಹಾಕಿಸಿಕೊಳ್ಳುತ್ತೀರಾ? ಮುಂಜಿ ಮಾಡಿಸಿಕೊಳ್ಳುತ್ತೀರಾ ಎಂದು ಕೇಳುತ್ತಾರೆ ಎಂದರು.

Latest Videos
Follow Us:
Download App:
  • android
  • ios