ಮಂಗಳೂರು ಅಘೋಷಿತ ಬಂದ್ ವಾತಾವರಣ: KSRTCಗೆ ನಷ್ಟ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಬಂದ್ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬಸ್ಸುಗಳು ಸಂಚರಿಸದೇ ಇರುವುದು ಹಾಗೂ ಶನಿವಾರವೂ ಕಡಿಮೆ ಜನರ ಓಡಾಟ ಇದ್ದ ಕಾರಣ KSRTC ನಷ್ಟ ಅನುಭವಿಸಿದೆ.
ಮಂಗಳೂರು(ಡಿ.22): ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಬಂದ್ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬಸ್ಸುಗಳು ಸಂಚರಿಸದೇ ಇರುವುದು ಹಾಗೂ ಶನಿವಾರವೂ ಕಡಿಮೆ ಜನರ ಓಡಾಟ ಇದ್ದ ಕಾರಣ KSRTC ನಷ್ಟ ಅನುಭವಿಸಿದೆ.
ಬಂಟ್ವಾಳ ಬಿ.ಸಿ.ರೋಡ್ ಘಟಕದಿಂದ ರಾತ್ರಿ ಬೆಂಗಳೂರಿಗೆ ತೆರಳುವ ಬಸ್ಸುಗಳನ್ನು ಹೊರತುಪಡಿಸಿದರೆ 16 ಬಸ್‌ಗಳ ಸಂಚಾರವನ್ನು ಶುಕ್ರವಾರ ರದ್ದುಗೊಳಿಸಬೇಕಾಯಿತು ಎಂದು ಡಿಪೊ ಮ್ಯಾನೇಜರ್ ಶ್ರೀಷ ಭಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪೇಜಾವರ ಶ್ರೀ ಚಿಕಿತ್ಸೆಗೆ ಸ್ಪಂದನೆ : ಕಣ್ಣು ತೆರೆಯಲು ಪ್ರಯತ್ನ
ಡಿಪೊದಿಂದ ಪ್ರತಿದಿನ 59 ಬಸ್ಸುಗಳು ಸಂಚಾರಕ್ಕೆ ಹೊರಡುತ್ತವೆ. ಆದರೆ ಶುಕ್ರವಾರ 16 ಬಸ್ಸುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು. ಭದ್ರತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಉಳಿದ ಮಾರ್ಗಗಳಿಗೆ ತೆರಳುವ ಬಸ್ಸುಗಳನ್ನೂ ಪರಿಸ್ಥಿತಿ ನೋಡಿ ಕಳುಹಿಸಲಾಯಿತು.
ಆದರೆ ಶನಿವಾರ ಮಂಗಳೂರಿಗೆ ತೆರಳುವ ಬಸ್ಸುಗಳನ್ನು ಹೊರತುಪಡಿಸಿ ಉಳಿದ ಬಸ್ಸುಗಳ ಸಂಚಾರ ನಡೆಸಲಾಗಿದೆ ಎಂದು ಹೇಳಿದರು. ಶುಕ್ರವಾರ ಮಧ್ಯಾಹ್ನ ಪೆರ್ನೆ ಬಳಿ ಕಲ್ಲೆಸೆತ ಪ್ರಕರಣ ವರದಿಯಾಗಿದೆ ಎಂದಿದ್ದಾರೆ. ಡಿಪೊದಲ್ಲಿ ಒಟ್ಟು 346 ಡ್ರೈವರ್ ಕಂಡಕ್ಟರ್ಸ್ ಘಟಕದಲ್ಲಿದ್ದು, ಇವರ ಪೈಕಿ 16 ಬಸ್ಸುಗಳ ವಾಹನ ಚಾಲಕರು, ನಿರ್ವಾಹಕರು ಶುಕ್ರವಾರ ಬಸ್ ಸಂಚಾರ ಇಲ್ಲದ ಕಾರಣ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಬಿ.ಸಿ.ರೋಡ್ ಕಾಸರಗೋಡು ಬಸ್ ಸಂಚಾರದ 2 ಟ್ರಿಪ್ ಗಳ ಪೈಕಿ 3 ಬಸ್ಸುಗಳ ಶನಿವಾರ ಓಡಾಡುತ್ತಿವೆ ಎಂದಿದ್ದಾರೆ.
ಮಂಗ್ಳೂರು ಸಹಜಸ್ಥಿತಿ : ಹಗಲು ಹೊತ್ತು ಕರ್ಫ್ಯೂ ಸಡಿಲ