ಕೋಲಾರ [ಆ.27]:  ಟೈರ್ ಸ್ಫೋಟಗೊಂಡು ಲಾರಿ ಪಲ್ಟಿಯಾಗಿ ಲಾರಿಯಲ್ಲಿದ್ದ ಟನ್ ಗಟ್ಟಲೇ ಟೊಮೆಟೋ ರಸ್ತೆ ಪಾಲಾದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಮಾರುಕಟ್ಟೆಗೆ ತರುತ್ತಿದ್ದ ವೇಳೆ ಇಲ್ಲಿನ ವೇಮುಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಲಾರಿ ಉರುಳಿದ್ದು, ಈ ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು, ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಸ್ತೆ ಮಧ್ಯದಲ್ಲಿಯೇ ಲಾರಿ ಪಲ್ಟಿಯಾದ ಕಾರಣ ಕೆಲ ಸಮಯ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನಗಳಿಗೆ ಬದಲಿ ಮಾರ್ಗ ಕಲ್ಪಿಸಿದರು.  

ಸದ್ಯ ಈ ಸಂಬಂಧ ಕೋಲಾರದ ವೇಮುಗಲ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.