ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕು ತುಂಬಿದ ಲಾರಿ
ತಾಲೂಕಿನ ನಾಜಗಾರದ ಆಚಾರಿಕೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಆದ ಘಟನೆ ಗುರುವಾರ ನಡೆದಿದೆ.
ಹೊನ್ನಾವರ (ಮೇ.26) : ತಾಲೂಕಿನ ನಾಜಗಾರದ ಆಚಾರಿಕೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಆದ ಘಟನೆ ಗುರುವಾರ ನಡೆದಿದೆ.
ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಲಾರಿ ರಸ್ತೆ ಅಂಚಿಗೆ ಇಳಿದ ಪರಿಣಾಮ ಪಲ್ಟಿಆಗಿದ್ದು, ಚಾಲಕನಿಗೆ ಸಣ್ಣಪುಟ್ಟಗಾಯವಾಗಿದೆ ಎಂದು ತಿಳಿದು ಬಂದಿದೆ. ನಾಜಗಾರ ಕ್ರಾಸ್, ಅಪ್ಸರಕೊಂಡ ಕ್ರಾಸ್, ಹೊಸಪಟ್ಟಣ ರಾಷ್ಟ್ರೀಯ ಹೆದ್ದಾರಿ ರಸ್ತೆ ಸೇರಿದಂತೆ ಕೆಲವೆಡೆ ಅವೈಜ್ಞಾನಿಕ ತಿರುವು ಹಾಗೂ ಯುಟರ್ನ್‌ಗಳು ತೀರಾ ಅಪಾಯಕಾರಿಯಾಗಿದ್ದು ಹೆಚ್ಚಿನ ಅಪಘಾತಗಳಿಗೆ ಎಡೆಮಾಡಿಕೊಡುತ್ತಿವೆ.
Bus Accident: ರಾಮದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 7 ಜನ ಆಸ್ಪತ್ರೆಗೆ ದಾಖಲು
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ರಸ್ತೆ ಕಾಮಗಾರಿ ನಡೆಸಿ ರಸ್ತೆ ಅಂಚಿಗೆ ಮಣ್ಣು ತುಂಬದಿದ್ದರಿಂದ ಇಂತಹ ಅವಘಡಗಳು ನಡೆಯುತ್ತಿವೆ ಎನ್ನುವುದು ಸ್ಥಳೀಯರ ಆರೋಪ. ಈ ಭಾಗದಲ್ಲಿ ಈ ಹಿಂದೆ ರಸ್ತೆ ಸಮಸ್ಯೆಯಿಂದ ವಾಹನ ಪಲ್ಟಿಯಾದಂತಹ 2-3 ಘಟನೆಗಳು ನಡೆದಿವೆ. ಘಟನೆ ನಂತರದಲ್ಲಿ ಸ್ಥಳೀಯರು ಹಲವಾರು ಬಾರಿ ಡಿಸಿ, ತಹಸೀಲ್ದಾರ್ ಹಾಗೂ ಸಂಬಂಧಪಟ್ಟಇಲಾಖೆಯ ಗಮನಕ್ಕೂ ಸಹ ತಂದಿದ್ದರು. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಅಸಮಾಧಾನ ಇದೆ.
ನಾಜಗಾರ ಕ್ರಾಸ್‌ನಿಂದ ಹೊಸ ಪಟ್ಟಣ ಕ್ರಾಸ್‌ವರೆಗೂ ರಸ್ತೆ ಬದಿಯಲ್ಲಿ ಮಣ್ಣು ಹಾಕಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ರೀತಿಯಾದ ಸುರಕ್ಷಿತ ಕ್ರಮ ಕೈಗೊಂಡಿಲ್ಲ. ಕೆಲವೆಡೆ ದಾರಿ ದೀಪದ ಸಮಸ್ಯೆ ಇದೆ. ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಇದೇ ರೀತಿ ಸಮಸ್ಯೆ ಪುನರಾವರ್ತನೆ ಆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮಳೆಗಾಲ ಸಮೀಪಿಸುತ್ತಿದ್ದು, ಇಂತಹ ಸಮಸ್ಯೆಗಳಿಗೆ ಆದಷ್ಟುಶೀಘ್ರ ಪರಿಹಾರ ನೀಡಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥಗೌಡ.
ಅಡುಗೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಯಾದಗಿರಿಯಲ್ಲಿ ತಪ್ಪಿದ ಭಾರೀ ದುರಂತ!